ಸಾಕಷ್ಟು ಕುತೂಹಲ ಕೆರಳಿಸಿದೆ ಚಿರಂಜೀವಿ-ಜಗನ್ ಭೇಟಿ..!

ಈ ಸುದ್ದಿಯನ್ನು ಶೇರ್ ಮಾಡಿ

ಹೈದ್ರಾಬಾದ್, ಅ.15- ವಿಶ್ವದೆಲ್ಲೆಡೆ ಮೆಗಾಸ್ಟಾರ್ ಚಿರಂಜೀವಿ ನಟಿಸಿರುವ ಸೈರಾ ನರಸಿಂಹರೆಡ್ಡಿ ವಿಜಯದ ಪಾತಕೆ ಹಾರಿಸುತ್ತಿರುವ ಬೆನ್ನಲ್ಲೇ ಆಂಧ್ರದ ಮುಖ್ಯಮಂತ್ರಿ ಜಗನ್ಮೋಹನ್ ರೆಡ್ಡಿ ಅವರನ್ನು ಚಿರು ಭೇಟಿ ಮಾಡಿರುವುದು ಸಾಕಷ್ಟು ಕುತೂಹಲ ಕೆರಳಿಸಿದೆ.

ಚಿರಂಜೀವಿ ತಮ್ಮ ಪತ್ನಿ ಜೊತೆಗೆ ಅಮರಾವತಿಯ ಜಗನ್ ಮೋಹನ್ ರೆಡ್ಡಿಯ ತಾಡಪಲ್ಲಿಯ ನಿವಾಸದಲ್ಲಿ ಭೇಟಿ ಮಾಡಿ ಒಂದು ಗಂಟೆಗೂ ಹೆಚ್ಚು ಕಾಲ ರಾಜಕೀಯ ಹಾಗೂ ಸಿನಿಮಾರಂಗದ ಬಗ್ಗೆ ಸಮಾಲೋಚನೆ ನಡೆಸಿರುವುದರಿಂದ ಚಿರು ರಾಜಕೀಯಕ್ಕೆ ಮರು ಎಂಟ್ರಿ ಆಗಲಿದ್ದಾರೆಯೇ ಎಂದು ಅವರ ಅಭಿಮಾನಿಗಳೇ ಮಾತನಾಡಿಕೊಳ್ಳುತ್ತಿದ್ದಾರೆ.

ಈ ಹಿಂದೆ ಚಿರು ಅವರೇ ಪ್ರಜಾರಾಜ್ಯಂ ಎಂಬ ಪಕ್ಷವನ್ನು ಸ್ಥಾಪಿಸಿ ಚುನಾವಣೆಯಲ್ಲಿ ಸ್ಪರ್ಧಿಸಿ ಮಿಶ್ರಫಲ ಅನುಭವಿಸಿದ ನಂತರ ರಾಜಕೀಯದಿಂದ ದೂರ ಉಳಿದಿದ್ದರಾದರೂ ಈಗ ಆಂಧ್ರದ ಮುಖ್ಯಮಂತ್ರಿ ಜಗನ್ಮೋಹನ್‍ರೆಡ್ಡಿ ಅವರನ್ನು ಭೇಟಿ ಆಗಿರುವುದರಿಂದ ಚಿರಂಜೀವಿ ಮತ್ತೆ ರಾಜಕೀಯ ಕ್ಷೇತ್ರದಲ್ಲಿ ಸಕ್ರಿಯರಾಗುತ್ತಾರೆಯೇ ಎಂಬ ಅನುಮಾನಗಳು ದಟ್ಟವಾಗಿದೆ.

Facebook Comments