ಮೇಘಾಸ್ಟಾರ್ ಚಿರಂಜೀವಿಗೂ ಕೊರೊನಾ ಪಾಸಿಟಿವ್..!

ಈ ಸುದ್ದಿಯನ್ನು ಶೇರ್ ಮಾಡಿ

ಹೈದರಾಬಾದ್,ನ.9-ತೆಲುಗಿನ ಮೇಘಾಸ್ಟಾರ್ ಚಿರಂಜೀವಿಗೆ ಮಹಾಮಾರಿ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿದೆ. ಆಚಾರ್ಯ ಚಲನಚಿತ್ರ ಚಿತ್ರೀಕರಣ ಸಂದರ್ಭದಲ್ಲಿ ಶಿಷ್ಟಾಚಾರದ ಪ್ರಕಾರ ಚಿರಂಜೀವಿ ಕೋವಿಡ್ ಟೆಸ್ಟ್‍ಗೆ ಒಳಗಾಗಿದ್ದರು. ಅವರ ಪರೀಕ್ಷಾ ವರದಿಯಲ್ಲಿ ಪಾಸಿಟಿವ್ ಎಂದು ದೃಢಪಟ್ಟಿದೆ.

ಇದೀಗ ಚಿರಂಜೀವಿ ಹೋಂ ಕ್ವಾರಂಟೈನ್‍ಗೆ ಒಳಗಾಗಿದ್ದು, ಯಾರೂ ಕೂಡ ಆತಂಕಪಡುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.  ಕಳೆದ ಐದು ದಿನಗಳಿಂದ ನನ್ನ ಸಂಪರ್ಕದಲ್ಲಿದ್ದ ಪ್ರತಿಯೊಬ್ಬರು ತಕ್ಷಣವೇ ಕೋವಿಡ್ ಟೆಸ್ಟ್‍ಗೆ ಒಳಗಾಗಬೇಕೆಂದು ಮನವಿ ಮಾಡಿರುವ ಅವರು, ನನಗೆ ಯಾವುದೇ ರೀತಿಯ ರೋಗ ಲಕ್ಷಣಗಳಿಲ್ಲದಿದ್ದರೂ ಸ್ವಯಂಪ್ರೇರಿತನಾಗಿ ಹೋಂ ಕ್ವಾರಂಟೇನ್‍ಗೆ ಒಳಗಾಗಿದ್ದೇನೆ.

ನನ್ನ ಆರೋಗ್ಯದ ಬೆಳವಣಿಗೆ ಕುರಿತಂತೆ ಚೇತರಿಸಿಕೊಂಡು ಮಾಹಿತಿ ನೀಡುವುದಾಗಿ ಸ್ವತಃ ಚಿರಂಜೀವಿ ಅವರೇ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಬಹುನಿರೀಕ್ಷಿತ ಆಚಾರ್ಯ ಚಲನಚಿತ್ರ ಚಿತ್ರೀಕರಣ ನಡೆಯುತ್ತಿದ್ದ ವೇಳೆ ಕೋವಿಡ್ 19 ಕಾಣಿಸಿಕೊಂಡಿರುವುದು ಕೆಲವರಲ್ಲಿ ಆತಂಕ ತಂದಿದೆ.

ಏಕೆಂದರೆ ನಿರ್ಮಾಪಕರು, ನಿರ್ದೇಶಕರು, ಸೇರಿದಂತೆ ಮತ್ತಿತರ ಸಹ ಕಲಾವಿದರು ಅವರ ಸಂಪರ್ಕದಲ್ಲಿದ್ದರು ಎನ್ನಲಾಗಿದೆ. ಇದೀಗ ಚಿರಂಜೀವಿಗೆ ಪಾಸಿಟಿವ್ ಕಂಡುಬಂದ ಹಿನ್ನೆಲೆಯಲ್ಲಿ ಸಂಪರ್ಕದಲ್ಲಿದ್ದ ಎಲ್ಲರೂ ಪರೀಕ್ಷೆಗೊಳಪಡಿಸಿಕೊಳ್ಳಬೇಕಾಗಿದೆ.

Facebook Comments