ಈ ಬಾರಿ ಆನ್‍‍ಲೈನ್‍‍ನಲ್ಲಿ ಚಿತ್ರಸಂತೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ನ.21- ಕೋವಿಡ್ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಅನೇಕ ನಿರ್ಬಂಧ ಗಳಿರುವುದರಿಂದ 18ನೇ ಚಿತ್ರಸಂತೆಯನ್ನು ಆನ್‍ಲೈನ್ ಮೂಲಕ ನಡೆಸಲಾಗುವುದು ಎಂದು ಕರ್ನಾಟಕ ಚಿತ್ರಕಲಾ ಪರಿಷತ್‍ನ ಅಧ್ಯಕ್ಷ ಬಿ.ಎಲ್.ಶಂಕರ್ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜನವರಿ 3ರಂದು ಆನ್‍ಲೈನ್ ಮೂಲಕ ಚಿತ್ರಸಂತೆ ಉದ್ಘಾಟಿಸಲಾಗುವುದು. ಚಿತ್ರಕಲಾ ಪರಿಷತ್ ಸ್ಥಾಪನೆಯಾಗಿ 60 ವರ್ಷವಾಗಿರುವ ಹಿನ್ನೆಲೆಯಲ್ಲಿ ವಜ್ರಮಹೋತ್ಸವದ ವರ್ಷಾಚರಣೆಯ ಅಂಗವಾಗಿ ಕಲೆಗೆ ಸಂಬಂಸಿದಂತೆ ಕಾರ್ಯಕ್ರಮಗಳನ್ನು ಸಹ ಆಯೋಜಿಸಲಾಗುವುದು ಎಂದರು.

18ನೇ ಚಿತ್ರಸಂತೆಯನ್ನು ಸಾಮಾಜಿಕ ಜಾಲತಾಣಗಳಾದ ಫೇಸ್‍ಬುಕ್, ಇನ್‍ಸ್ಟ್ರಾಗ್ರಾಂ, ಯೂಟೂಬ್ ಮತ್ತು chitrasanthe.org ನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಒಂದು ತಿಂಗಳ ಅವಯವರೆಗೆ ವೀಕ್ಷಿಸಬಹುದು. 18ನೇ ಚಿತ್ರ ಸಂತೆಯನ್ನು ಕೊರೊನಾ ಯೋಧರ ಉದಾತ್ತ ಸೇವೆಗೆ ಅರ್ಪಣೆ ಮಾಡಲಾಗುವುದು ಎಂದರು.

ಚಿತ್ರಸಂತೆಯಲ್ಲಿ ಭಾಗವಹಿಸಲು ಒಂದೂವರೆ ಸಾವಿರ ಕಲಾವಿದರಿಗೆ ಪ್ರತ್ಯೇಕವಾಗಿ ಒಂದು ಆನ್‍ಲೈನ್ ಪುಟವನ್ನು ಮೀಸಲಿಡಲಾಗಿದೆ. ಆನ್‍ಲೈನ್ ಪುಟದಲ್ಲಿ ಸಂಪರ್ಕದ ವಿವರ ಮತ್ತು ಕಲಾಕೃತಿಯನ್ನು ಪ್ರದರ್ಶಿಸಲಾಗಿರುತ್ತದೆ. ಕಲಾಕೃತಿಗಳ ಮಾರಾಟದಲ್ಲಿ ಚಿತ್ರಕಲಾಪರಿಷತ್ ಯಾವುದೇ ಕಮೀಷನ್ ಪಡೆಯುವುದಿಲ್ಲ. ಕಲಾಕೃತಿಗಳ ಮಾರಾಟದ ಸಂಪೂರ್ಣ ಹಣ ಕಲಾವಿದರಿಗೆ ತಲುಪಲಿದೆ ಎಂದು ತಿಳಿಸಿದರು.

ಫ್ರಾನ್ಸ್, ಮಲೇಷ್ಯಾ, ಸಿಂಗಾಪುರ ಸೇರಿದಂತೆ ವಿದೇಶಗಳ ಕಲಾವಿದರು ಚಿತ್ರಸಂತೆಯಲ್ಲಿ ಭಾಗವಹಿಸಲು ಆಸಕ್ತಿ ತೋರಿದ್ದಾರೆ. ಪರಿಷತ್‍ನ ಎಲ್ಲ ಗ್ಯಾಲರಿಗಳಲ್ಲೂ ಭಾರತದ ಆಯ್ದ ಮತ್ತು ಆಹ್ವಾನಿತ ಪ್ರಸಿದ್ದ ಕಲಾವಿದರ ಕಲಾಕೃತಿಗಳನ್ನು ಪ್ರದರ್ಶಿಸಲಾಗುವುದು. ಚಿತ್ರಕಲಾ ಪರಿಷತ್‍ನ ಸಂಸ್ಥಾಪಕ ಮುಖ್ಯ ಕಾರ್ಯದರ್ಶಿಗಳಾಗಿದ್ದ ಪ್ರೊ.ಎಂ.ಎಸ್. ನಂಜುಂಡರಾವ್ ರಾಷ್ಟ್ರೀಯ ಪ್ರಶಸ್ತಿಯನ್ನು ಒಬ್ಬ ಹಿರಿಯ ಕಲಾವಿದೆ ಬರೋಡಾ ಮೂಲದ ನೀಲಿಮಾ ಶೇಖ್ ಅವರಿಗೆ ನೀಡಲಾಗುವುದು. ಪ್ರಶಸ್ತಿ ಒಂದು ಲಕ್ಷ ರೂ. ನಗದು ಹಾಗೂ ಪ್ರಶಸ್ತಿ ಪತ್ರ ಒಳಗೊಂಡಿರುತ್ತದೆ.

ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಪ್ರಶಸ್ತಿ, ಎಚ್.ಕೆ.ಕೇಜ್ರಿವಾಲ್ ಪ್ರಶಸ್ತಿ, ಎಂ.ಆರ್ಯಮೂರ್ತಿ ಪ್ರಶಸ್ತಿ, ವೈ.ಸುಬ್ರಮಣ್ಯರಾಜು ಪ್ರಶಸ್ತಿಯನ್ನು ಚಿತ್ರಕಲಾ ಸನ್ಮಾನ್ ಪ್ರಶಸ್ತಿಗಳಡಿ ನಾಲ್ಕು ಕಲಾವಿದರಿಗೆ ನೀಡಲಾಗುವುದು. ತಲಾ 50 ಸಾವಿರ ರೂ. ಹಾಗೂ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಗುವುದು ಎಂದರು.

18ರಿಂದ 60 ವರ್ಷದೊಳಗಿರುವ ವೃತ್ತಿಪರ ಮತ್ತು ಸ್ವಶಿಕ್ಷಿತ ಕಲಾವಿದರು ಚಿತ್ರಸಂತೆಯಲ್ಲಿ ಭಾಗವಹಿಸಿ ಕಲೆಯನ್ನು ಆಸ್ವಾದಿಸಬಹುದು. ಚಿತ್ರಸಂತೆಯಲ್ಲಿ ಹಲವಾರು ಆನ್‍ಲೈನ್ ವಿಮರ್ಶೆಗಳು, ಕಲಾತ್ಮಕ ಚರ್ಚೆಗಳನ್ನು ಆಯೋಜಿಸಲಾಗುವುದು. ಚಿತ್ರಸಂತೆ ಕಲಾವಿದರೊಂದಿಗೆ ಐಕ್ಯತಾ ಭಾವನೆಯನ್ನು ಬೆಸೆಯುವ ಕೊಂಡಿಯಾಗಲಿದೆ.

ಯಾವುದೇ ಮಧ್ಯವರ್ತಿಗಳಿಲ್ಲದೆ ಮನೆಗೊಂದು ಕಲಾಕೃತಿ ಎಂಬ ಮುಖ್ಯ ಆದ್ಯತೆಯೊಂದಿಗೆ ಚಿತ್ರಕಲಾಪರಿಷತ್ ಶ್ರಮಿಸುತ್ತಿದೆ. ಸಮಕಾಲೀನ ಕಲಾಕೃತಿಗಳ ಮತ್ತು ಸಾಂಪ್ರದಾಯಿಕ ಕಲಾ ಶೈಲಿಗಳಾದ ಮೈಸೂರು, ತಾಂಜಾವೂರು, ರಾಜ್ಥಾನಿ, ಮಧುಬನಿ ಕಲಾಕೃತಿಗಳ ಪ್ರದರ್ಶನ ಮಾರಾಟಕ್ಕೆ ಚಿತ್ರಸಂತೆಯಲ್ಲಿ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.

ರಾಜ್ಯದ ಕಲಾವಿದರ 500, ಸಂಸ್ಥೆಗಳಿಗೆ 1000 ರೂ. ವಿದೇಶಿ ಕಲಾವಿದರಿಗೆ 1500 ರೂ. ನೋಂದಣಿ ಶುಲ್ಕ ನಿಗದಿಪಡಿಸಲಾಗಿದೆ ಅರ್ಜಿ ನಮೂನೆಯನ್ನು ಚಿತ್ರಕಲಾಪರಿಷತ್‍ನ ಜಾಲತಾಣದ ಮೂಲಕ ಪಡೆಯಬಹುದು ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಚಿತ್ರಕಲಾ ಪರಿಷತ್‍ನ ಉಪಾಧ್ಯಕ್ಷರಾದ ಟಿ.ಪ್ರಭಾಕರ್, ಎಂ.ಜೆ.ಕಮಲಾಕ್ಷಿ, ಎ.ರಾಮಕೃಷ್ಣಪ್ಪ, ಪ್ರಧಾನ ಕಾರ್ಯದರ್ಶಿ ಪೆÇ್ರ.ಕೆ.ಎಸ್.ಅಪ್ಪಜಯ, ಲಲತಕಲಾ ಅಕಾಡೆಮಿ ಅಧ್ಯಕ್ಷ ಮಹೇಂದ್ರ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

Facebook Comments