ಹೆಲಿಕಾಫ್ಟರ್ ತುರ್ತು ಭೂಸ್ಪರ್ಶ, ಉದ್ಯಮಿ ಸೇರಿ 7 ಮಂದಿ ಬಚಾವ್..!

ಈ ಸುದ್ದಿಯನ್ನು ಶೇರ್ ಮಾಡಿ

ಕೊಚ್ಚಿ,ಏ.11-ಅನಿವಾಸಿ ಭಾರತೀಯ ಉದ್ಯಮಿಯೊಬ್ಬರು ಸಂಚರಿಸುತ್ತಿದ್ದ ಹೆಲಿಕಾಫ್ಟರ್‍ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡು ತುರ್ತು ಭೂಸ್ಪರ್ಷ ಮಾಡಿದ್ದು, ಏಳು ಪ್ರಯಾಣಿಕರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಕೊಚ್ಚಿಯಲ್ಲಿ ನಡೆದಿದೆ.

ಎನ್‍ ಆರ್ ಐ ಉದ್ಯಮಿ ಎಂ.ಎ.ಯೂಸಫ್ ಆಲಿ, ಅವರ ಪತ್ನಿ, ಮೂವರು ಸಿಬ್ಬಂದಿ ಹಾಗೂ ಇಬ್ಬರು ಕ್ರೂ ಮೆಂಬರ್‍ಗಳು ಪ್ರಾಣಾಪಾಯದಿಂದ ಪಾರಾಗಿದ್ದು ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಲುಲು ಗ್ರೂಫ್‍ಗೆ ಸೇರಿರುವ ಕಾಫ್ಟರ್ ಹಾರಾಟ ನಡೆಸುತ್ತಿದ್ದಾಗ ಹಠಾತ್ ದೋಷ ಕಾಣಿಸಿಕೊಂಡಿತು.

ತಕ್ಷಣ ಪೈಲಟ್‍ಗಳು ತಮ್ಮ ಕೌಶಲ್ಯ ಬಳಸಿ ಖಾಲಿ ಜಾಗದಲ್ಲಿ ಕಾಫ್ಟರ್ ಲ್ಯಾಂಡ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

Facebook Comments

Sri Raghav

Admin