ಸೇನಾ ಹೆಲಿಕಾಪ್ಟರ್ ತುರ್ತು ಭೂ ಸ್ಪರ್ಶ

ಈ ಸುದ್ದಿಯನ್ನು ಶೇರ್ ಮಾಡಿ

ಚಂಡೀಗಢ, ಫೆ.13- ಭಾರತೀಯ ಸೇನಾ ಪಡೆಯ ಚೇತಕ್ ಹೆಲಿಕಾಪ್ಟರ್ ತಾಂತ್ರಿಕ ದೋಷದಿಂದಾಗಿ ಪಂಜಾಬ್‍ನ ಚಂಡೀಗಢದ ರೂಪ್‍ನಗರದಲ್ಲಿ ಇಂದು ಬೆಳಗ್ಗೆ 11.30ರಲ್ಲಿ ತುರ್ತು ಭೂ ಸ್ಪರ್ಶ ಮಾಡಿದ ಘಟನೆ ನಡೆದಿದೆ. ಈ ಹೆಲಿಕಾಪ್ಟರ್‍ನಲ್ಲಿದ್ದ ಎಲ್ಲಾ ಮೂವರು ಸಿಬ್ಬಂದಿ ಸುರಕ್ಷಿತವಾಗಿದ್ದಾರೆ. ರೂಪ ನಗರದ ಬನ್ ಮರ್ಜಾ ಗ್ರಾಮದ ಹೊಲವೊಂದರಲ್ಲಿ ಹೆಲಿ ಕಾಪ್ಟರ್ ಹಠಾತ್ ಕೆಳಗಿಳಿಯಿತು.

ಸ್ಥಳೀಯ ಗ್ರಾಮಸ್ಥರು ನೆರವಿಗೆ ಧಾವಿಸಿ ಹೆಲಿಕಾಪ್ಟರ್‍ನಲ್ಲಿದ್ದವರು ಹೊರ ಬರಲು ನೆರವಾದರು. ಭಾರತೀಯ ಸೇನಾ ಪಡೆ ಮತ್ತು ವಾಯು ಪಡೆಯ ಯುದ್ಧ ವಿಮಾನಗಳು ಮತ್ತು ಹೆಲಿಕಾಪ್ಟರ್‍ಗಳು ರಾಜಸ್ತಾನ, ಪಂಜಾಬ್, ಗುಜರಾತ್‍ಸೇರಿದಂತೆ ವಿವಿಧೆಡೆ ಪದೇ ಪದೇ ತಾಂತ್ರಿಕ ದೋಷದಿಂದ ಪತನವಾಗುತ್ತಿರುವ ತುರ್ತು ಭೂ ಸ್ಪರ್ಶ ಮಾಡುತ್ತಿರುವ ಘಟನೆಗಳು ಮರು ಕಳಿಸುತ್ತಿವೆ.

Facebook Comments