ನೆಟ್‍ಫ್ಲಿಕ್ಸ್‍ನಲ್ಲಿ ಪರಿಣಿತಿ ಚೋಪ್ರಾ

ಈ ಸುದ್ದಿಯನ್ನು ಶೇರ್ ಮಾಡಿ

ಮುಂಬೈ, ಜ.13- ನಟಿ ಪರಿಣಿತಿ ಚೋಪ್ರ ಅಭಿನಯದ ರೋಮಾಂಚಕ ದಿ ಗರ್ಲ್ ಆನ್ ದಿ ಟ್ರೈನ್ ಚಿತ್ರ ಫೆಬ್ರವರಿ 26ರಂದು ನೆಟ್‍ಫ್ಲಿಕ್ಸ್‍ನಲ್ಲಿ ಪ್ರದರ್ಶನಗೊಳ್ಳಲಿದೆ ಎಂದು ಒಟಿಟಿ ದೈತ್ಯ ಸಂಸ್ಥೆ ತಿಳಿಸಿದೆ. ರಿಭು ದಾಸ್‍ಗುಪ್ತಾ ನಿರ್ದೇಶನ ಈ ಚಿತ್ರ 2016ರಲ್ಲಿ ಬಿಡುಗಡೆಯಾದ ನಟಿ ಎಮಿಲಿ ಬ್ಲಂಟ್ ಅಭಿನಯದ ಥ್ರಿಲ್ಲರ್ ಮೂವೀ ದಿ ಗರ್ಲ್ ಆನ್ ದಿ ಟ್ರೈನ್‍ನ ಅಧಿಕೃತ ರಿಮೇಕ್ ಆಗಿದೆ. ಪೌಲಾ ಹಾಕಿನ್ಸ್ ರಚಿತ ಅತ್ಯುತ್ತಮ ಕಾದಂಬರಿ ಅಧಾರಿತ ಚಿತ್ರ ಇದಾಗಿತ್ತು.

ಈಗಾಗಲೇ 20 ಸೆಕೆಂಡುಗಳ ಅಧಿಕೃತ ಆಂಗ್ಲ ಭಾಷೆಯ ಟ್ರೈಲರ್ ಅನ್ನು ನೆಟ್‍ಫ್ಲಿಕ್ಸ್‍ಗೆ ಒದಗಿಸಲಾಗಿದೆ. ಹಿಂದಿ ಅವತರಣಿಕೆ ಈ ಚಿತ್ರದಲ್ಲಿ ಚೋಪ್ರ ನಟಿಸಿದ್ದಾರೆ. ಮದ್ಯ ವ್ಯಸನಿ ವಿವಾಹ ವಿಚ್ಛೇದಿತ ಮಹಿಳೆ ಪಾತ್ರದಲ್ಲಿ ನಟಿಸಿರುವ ಆಕೆ ಕಾಣೆಯಾದ ವ್ಯಕ್ತಿಯ ತನಿಖೆಯಲ್ಲಿ ಭಾಗಿಯಾಗಿರುತ್ತಾರೆ.

ಇವರ ಜತೆ ಅದಿತಿ ರಾವ್ ಹೈದ್ರಿ, ಕೀರ್ತಿ ಕೌಲ್ಹರಿ ಹಾಗೂ ಅವಿನಾಶ್ ತಿವಾರಿ ನಟಿಸಿದ್ದಾರೆ. ಯುನೈಟೆಡ್ ಕಿಂಗ್‍ಡಂನಲ್ಲಿ ಚಿತ್ರದ ಸೆಟ್ ಹಾಕಲಾಗಿದೆ. ರಿಲೈಯನ್ಸ್ ಎಂಟರ್‍ಟೈನ್‍ಮೆಂಟ್ ಸಂಸ್ಥೆ ನಿರ್ಮಾಣದಲ್ಲಿ ಚಿತ್ರ ಹೊರ ಬಂದಿದೆ.

Facebook Comments