ಮೈಕಲ್‍ ಜಾಕ್ಸನ್‍ ಹಾಡಿಗೆ ಸ್ಟೆಪ್ಸ್ ಹಾಕಿ ಗಮನ ಸೆಳೆದ ಗೇಲ್

ಈ ಸುದ್ದಿಯನ್ನು ಶೇರ್ ಮಾಡಿ

ಚೆನ್ನೈ, ಏ.8- ಮೈದಾನದಲ್ಲಿ ಸಿಕ್ಸರ್‍ಗಳ ಸುರಿಮಳೆ ಸುರಿಸುವ ಮೂಲಕ ಅಭಿಮಾನಿಗಳನ್ನು ಹುಚ್ಚೆದ್ದು ಕುಣಿಯುವಂತೆ ಮಾಡುವ ಕೆರಿಬಿಯನ್‍ನ ದೈತ್ಯ ಆಟಗಾರ ಕ್ರಿಸ್‍ಗೇಲ್ ಅವರು ಪಾಪ್ ಸಂಗೀತ ಲೋಕದ ದಿಗ್ಗಜ ಮೈಕಲ್ ಜಾಕ್ಸನ್ ಅವರ ಹಾಡಿಗೆ ಭರ್ಜರಿ ಸ್ಟೆಪ್ಸ್ ಹಾಕುವ ಮೂಲಕ ಗಮನ ಸೆಳೆದಿದ್ದಾರೆ. ಐಪಿಎಲ್ 21ರ ಆವೃತ್ತಿಯಲ್ಲಿ ಪಾಲ್ಗೊಳ್ಳುವ ಸಲುವಾಗಿ ಸ್ಫೋಟಕ ಆಟಗಾರ ಕ್ರಿಸ್‍ಗೇಲ್ ಅವರು ಈಗಾಗಲೇ ಹೊಟೇಲ್‍ನಲ್ಲಿ 10 ದಿನಗಳಿಗೂ ಹೆಚ್ಚಿನ ಕಾಲ ಕ್ವಾರಂಟೈನ್ ಅವಧಿ ಮುಗಿಸಿದ್ದು ಐಪಿಎಲ್‍ನಲ್ಲಿ ರನ್‍ಗಳ ಸುರಿಮಳೆ ಸುರಿಸಲು ರೆಡಿಯಾಗಿದ್ದಾರೆ.

ಈ ನಡುವೆ ಕ್ರಿಕೆಟ್ ಲೋಕದಲ್ಲಿ ಕಿಂಗ್ಸ್ ಆಫ್ ಯೂನಿವರ್ಸ್ ಎಂದೇ ಬಿಂಬಿಸಿಕೊಂಡಿರುವ ಕ್ರಿಸ್‍ಗೇಲ್ ಅವರು ಕಿಂಗ್ ಆಫ್ ಪಾಪ್ ಆಗಿರುವ ಮೈಕಲ್ ಜಾಕ್ಸನ್ ಅವರು ಹಾಡಿದ್ದ ಸ್ಮೂತ್ ಕ್ರಿಮಿನಲ್ ಹಾಡಿಗೆ ಭರ್ಜರಿ ಸ್ಟೆಪ್ಸ್ ಹಾಕಿರುವ ಗೇಲ್ ಜಾಕ್ಸನ್ ಅವರ ರೀತಿಯಂತೆಯೇ ಟೋಪಿ ಹಾಕ್ಕೊಂಡು ಅವರ ರೀತಿಯ ಸ್ಟೆಪ್ಸ್ ಹಾಕಿರುವ ರೀತಿಯು ಗೇಲ್‍ರ ಅಭಿಮಾನಿಗಳ ಹೃದಯ ಗೆದ್ದಿದೆ.

ಗೇಲ್ ಮಾಡಿರುವ ನೃತ್ಯದ ವೀಡಿಯೋವೊಂದನ್ನು ಪಂಜಾಬ್ ಕಿಂಗ್ಸ್ ಅವರು ತಮ್ಮ ಟ್ವಿಟ್‍ನಲ್ಲಿ ಹಾಕಿದ್ದು ಅದಕ್ಕೆ ಭರ್ಜರಿ ಪ್ರತಿಕ್ರಿಯೆಗಳು ಬಂದಿವೆ. ಕಿಂಗ್ಸ್ ಮಾಡಿರುವ ಟ್ವಿಟ್‍ನಲ್ಲಿ ನಿಮ್ಮ ಮೆಚ್ಚಿನ ತಾರೆಯು ಈಗ ಕ್ವಾರಂಟೈನ್ ಮುಗಿಸಿದ್ದು ಮೈದಾನದಲ್ಲಿ ರನ್‍ಗಳ ಸುರಿಮಳೆ ಸುರಿಸಲು ಬರುತ್ತಿದ್ದಾರೆ ಎಂದು ಹೇಳಿದೆ.

ಕ್ರಿಸ್‍ಗೇಲ್ ಸೇರಿದಂತೆ ವೆಸ್ಟ್‍ಇಂಡೀಸ್‍ನ ಹಲವರು ಕ್ರಿಕೆಟ್ ದೈತ್ಯರು ಸಂಗೀತ ಪ್ರೇಮಿಗಳಾಗಿದ್ದು ತಾವು ಮಾಡಿರುವ ವಿಡಿಯೋ ಆಲ್ಬಂಗಳನ್ನು ಅಂತರ್ಜಾಲಗಳಲ್ಲಿ ಹಾಕುವ ಪರಿಪಾಠ ಪಾಲಿಸುತ್ತಲೇ ಬಂದಿದ್ದಾರೆ.

Facebook Comments