ಕ್ರಿಸ್‍ಗೇಲ್‍ಗೆ ಕೊರೋನಾ ನೆಗೆಟಿವ್, ಪಂಜಾಬ್‍ಗೆ ನಿರಾಳ

ಈ ಸುದ್ದಿಯನ್ನು ಶೇರ್ ಮಾಡಿ

ಜಮೈಕಾ,ಆ.25- ಐಪಿಎಲ್ 13ರ ಆವೃತ್ತಿ ಸಮೀಪಿಸುತ್ತಿದ್ದಂತೆ ಕೊರೊನಾ ಕಾಟವು ತಂಡಗಳ ಫ್ರಾಂಚೈಸಿಗಳು ಹಾಗೂ ನಾಯಕರ ನಿದ್ದೆಯನ್ನು ಗೆಡಿಸುತ್ತಿದೆ.

ಕೊರೊನಾ ಸೋಂಕಿಗೆ ತಮ್ಮ ಸ್ಟಾರ್ ಆಟಗಾರರು ಒಳಗಾದರೆ ಎಲ್ಲಿ ಚಾಂಪಿಯನ್ಸ್ ಆಗುವ ಅವಕಾಶ ತಪ್ಪಿಹೋಗುತ್ತದೆ ಎಂಬ ಭೀತಿಯೂ ಕಾಡುತ್ತಿದೆ.

ಈ ನಡುವೆ ಕೊರೊನಾ ವೈರಸ್ ಪಂಜಾಬ್ ಕಿಂಗ್ಸ್ ಇಲೆವೆನ್ ಅನ್ನು ತುಂಬಾ ಕಾಡುತ್ತಿದೆ, ಈ ಹಿಂದೆ ಕರುಣ್‍ನಾಯರ್ ಕೊರೊನಾದಿಂದ ಬಳಲಿದ್ದರೆ, ಈಗ ಆ ತಂಡದ ಸ್ಟಾರ್ ಆಟಗಾರ ಕ್ರಿಸ್‍ಗೇಲ್‍ಗೆ ಕೊರೊನಾ ಪಾಸಿಟಿವ್ ಕಾಣಿಸಿಕೊಂಡರೆ ತಂಡ ಅವರ ಅವಕಾಶವನ್ನು ಕೆಲವು ಪಂದ್ಯಗಳಿಂದ ಕಳೆದುಕೊಳ್ಳಬೇಕಾಗುತ್ತದೆ ಎಂಬ ಭಯ ಮನೆ ಮಾಡಿತ್ತು.

ಆದರೆ ಸ್ವತಃ ಕ್ರಿಸ್‍ಗೇಲ್ ಅವರೇ ಟ್ವಿಟ್ ಮಾಡಿ ನಾನು ಎರಡು ಬಾರಿ ಕೊರೊನಾ ಪರೀಕ್ಷೆ ಮಾಡಿಸಿಕೊಂಡಿದ್ದೇನೆ, ಎರಡರಲ್ಲೂ ನೆಗೆಟಿವ್ ಬಂದಿದೆ ಎಂದು ಬರೆದಿರುವುದರಿಂದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ನಾಯಕ ಕೆ.ಎಲ್.ರಾಹುಲ್ ನಿರಾತಂಕರಾಗಿದ್ದಾರೆ.

ನಾನು ಕಳೆದ ವರ್ಷದಿಂದಲೇ ಬಹುತೇಕ ಮನೆಯಲ್ಲೇ ಕಾಲ ಕಳೆದಿದ್ದೇನೆ, ದೂರದ ಪ್ರದೇಶಗಳಿಗೆ ಪ್ರವಾಸ ಹೋಗಿದ್ದು ಕೂಡ ಕಡಿಮೆ, ಆದರೆ ಇತ್ತೀಚೆಗೆ ಜಮೈಕಾದ ರನ್ ಮಿಷನ್ ಉಸೇನ್‍ಬೋಲ್ಟ್‍ರ ಜನುಮ ದಿನದಲ್ಲಿ ಪಾಲ್ಗೊಂಡಿದ್ದೆ, ಈಗ ಬೋಲ್ಟ್‍ಗೆ ಪಾಸಿಟಿವ್ ಬಂದಿದ್ದರಿಂದ ನಾನು ಕೂಡ ಕೊರೊನಾ ಪರೀಕ್ಷೆಗೆ ಒಳಪಟ್ಟಿದೆ.

ವರದಿಯಲ್ಲಿ ನೆಗೆಟಿವ್ ಬಂದಿದ್ದು ನಾನು ಕೊರೊನಾದಿಂದ ಮುಕ್ತವಾಗಿದ್ದೇನೆ ಎಂದು ಗೇಲ್ ಹೇಳಿದ್ದಾರೆ. ಕ್ರಿಸ್‍ಗೇಲ್‍ಗೆ ಕೊರೊನಾ ನೆಗೆಟಿವ್ ಬಂದಿರುವುದರಿಂದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವು ನಿರಾತಂಕವಾಗಿದ್ದು ಪ್ರಸಕ್ತ ಐಪಿಎಲ್‍ನಲ್ಲಿ ಕ್ರಿಸ್ ಗೇಲ್ ಬ್ಯಾಟ್‍ನಿಂದ ರನ್‍ಗಳ ಸುರಿಮಳೆ ಹರಿದು ಬರುವುದನ್ನು ಎದುರು ನೋಡುತ್ತಿದ್ದಾರೆ.

Facebook Comments

Sri Raghav

Admin