ಬಬ್ರುವಾಹನ ಚಿತ್ರದ ಹಿರಿಯ ಛಾಯಾಗ್ರಾಹಕ ಎಸ್.ವಿ.ಶ್ರೀಕಾಂತ್ ಇನ್ನಿಲ್ಲ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮೇ 8- ಕನ್ನಡ ಚಿತ್ರರಂಗದ ಹಿರಿಯ ಛಾಯಾಗ್ರಾಹಕರಾದ ಎಸ್. ವಿ. ಶ್ರಿಕಾಂತ್ ನಿನ್ನೆ ಸಂಜೆ ಬೆಂಗಳೂರಿನ ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಅವರಿಗೆ 87 ವರ್ಷ ವಯಸ್ಸಾಗಿತ್ತು.

1960 ರಿಂದ 40 ವರ್ಷಗಳ ಕಾಲ ಅನೇಕ ಡಾ. ರಾಜ್ ಕುಮಾರ್ ಚಿತ್ರಗಳಿಗೆ ಛಾಯಾಗ್ರಹಣ ಮಾಡಿದ್ದಾರೆ. ಅದರಲ್ಲಿ ಸದಾ ನೆನಪಿಗೆ ಬರುವಂಥದ್ದು ಬಬ್ರುವಾಹನ ಚಿತ್ರದಲ್ಲಿ ಅಣ್ಣಾವ್ರು ನಟಿಸಿದ ಅರ್ಜುನ ಹಾಗೂ ಬಬ್ರುವಾಹನ ಪಾತ್ರಗಳನ್ನು ಒಟ್ಟಿಗೆ ಸೇರುವ ಸನ್ನಿವೇಶಗಳನ್ನು ತಮ್ಮ ಕ್ಯಾಮೆರಾ ಕಣ್ಣಿನ ಟ್ರಿP್ಸï ಮೂಲಕ ಸೆರೆಹಿಡಿದಿದ್ದರು.

ಆಧುನಿಕ ತಂತ್ರಜ್ಞಾನ ಅಷ್ಟು ಮುಂದುವರಿಯದೆ ಇದ್ದ ಸಂದರ್ಭದಲ್ಲಿ ಇಂಥ ಟ್ರಿಕ್ಸ್ ಬಳಸಿರುವುದು ವಿಶೇಷ.ಹಾಗೆಯೇ ಗೆಜ್ಜೆ ಪೂಜೆ ಉಪಾಸನೆ ಹಾಗೂ ಮಾರ್ಗದರ್ಶಿ ಚಿತ್ರಗಳ ಛಾಯಾಗ್ರಹಣಕ್ಕೆ ರಾಜ್ಯ ಪ್ರಶಸ್ತಿ ಸಹ ಪಡೆದವರು.

60ಕ್ಕೂ ಹೆಚ್ಚು ಚಿತ್ರಗಳಿಗೆ ಕೆಲಸ ಮಾಡಿರುವ ಎಸ್. ವಿ. ಶ್ರೀಕಾಂತ್ ಛಾಯಾಗ್ರಹಣದ ಚಿತ್ರಗಳು ಸ್ವರ್ಣ ಗೌರಿ, ಪ್ರೇಮಮಯಿ, ಮನಸ್ಸಿದ್ದರೆ ಮಾರ್ಗ, ಬಹದ್ದೂರ್ ಗಂಡು, ನಾ ನಿನ್ನ ಬಿಡಲಾರೆ, ಹಣ್ಣೆಲೇ ಚಿಗುರಿದಾಗ, ಅದೇ ಕಣ್ಣು, ಶ್ರಾವಣ ಬಂತು, ರಾಣಿ-ಮಹಾರಾಣಿ, ವಿಜಯ್ ವಿಕ್ರಮï, ಎಡಕಲ್ಲು ಗುಡ್ಡದ ಮೇಲೆ ಹಾಗೂ ಇನ್ನಿತರ ಸಿನಿಮಾಗಳು.

Facebook Comments

Sri Raghav

Admin