ಇಂಗ್ಲೆಂಡ್ ಸರ್ಕಸ್‍ಗೆ 250ನೇ ವರ್ಷಾಚರಣೆ ಸಂಭ್ರಮ

ಈ ಸುದ್ದಿಯನ್ನು ಶೇರ್ ಮಾಡಿ

ds

ಇಂಗ್ಲೆಂಡ್‍ನ ಜಗದ್ವಿಖ್ಯಾತ ಆಧುನಿಕ ಸರ್ಕಸ್‍ಗೆ ಈಗ 250ನೇ ವರ್ಷಾಚರಣೆ ಸಡಗರ-ಸಂಭ್ರಮ. ಸರ್ಕಸ್‍ನಲ್ಲಿರುವ ಮಾತಿನಂತೆ ಏನೇ ಆಗಲಿ ದಿ ಶೋ ಮಸ್ಟ್ ಗೋ ಆನ್ ಎಂಬಂತೆ ಇದು ಮುನ್ನಡೆಯುತ್ತಿದೆ. ಈ ಕುರಿತು ಇಲ್ಲೊಂದು ವರದಿ.  ಬ್ರಿಟನ್‍ನ ಜಿಫೋಡ್ರ್ಸ್ ಸರ್ಕಸ್ ವಿಶ್ವವಿಖ್ಯಾತಿ ಪಡೆದಿದೆ. ಈ ಮಾಡ್ರನ್ ಸರ್ಕಸ್‍ಗೆ ಈ 250ನೇ ಜನ್ಮದಿನದ ಸಡಗರ. ಪ್ರಾಚೀನ ಸರ್ಕಸ್ ಕಂಪನಿಗಳಲ್ಲಿ ಒಂದಾದ ಇದು ಈಗಲೂ ತನ್ನ ಆಕರ್ಷಣೆ ಮತ್ತು ಲೋಕಪ್ರಿಯತೆಯನ್ನು ಉಳಿಸಿಕೊಂಡು ನಿರಂತರ ಮನರಂಜನೆ ನೀಡುತ್ತಲೇ ಇದೆ.

ಈಗ ಇಂಗ್ಲೆಂಡ್‍ನ ವಿವಿಧೆಡೆ ಬೇಸಿಗೆ ಪ್ರವಾಸ ಕೈಗೊಂಡಿರುವ ಈ ಸರ್ಕಸ್ 600 ಜನರ ಆಸನ ಸಾಮಥ್ರ್ಯದ ಟೆಂಟ್ ಹೊಂದಿದ್ದು, ಪ್ರತಿದಿನದ ಮೂರು ಶೋಗಳು ಸಂಪೂರ್ಣ ಭರ್ತಿಯಾಗುತ್ತಿವೆ. ಸೆಪ್ಟೆಂಬರ್ ಅಂತ್ಯದವರೆಗೂ ಸರ್ಕಸ್ ಶೋ ವೀಕ್ಷಕರಿಗೆ ಥ್ರಿಲ್ ನೀಡಲಿದೆ. ಇಂಗ್ಲೆಂಡ್‍ನ ವಾಯುವ್ಯ ಭಾಗದಲ್ಲಿರುವ ಬರಿಂಗ್‍ಟನ್‍ನಲ್ಲಿ ಈ ಸರ್ಕಸ್ ನೋಡಲು ದಿನಂಪ್ರತಿ ಜನರು ಸಾಲುಗಟ್ಟಿ ನಿಲ್ಲುತ್ತಾರೆ. ವಿವಿಧ ಚಮತ್ಕಾರಗಳು ಪ್ರೇಕ್ಷಕರನ್ನು ವಿಶೇಷವಾಗಿ ಆಕರ್ಷಿಸುತ್ತಿವೆ. ಹಳೆಯ ಟ್ರಿಕ್ಸ್‍ಗಳಿಗೆ ಹೊಸ ಸ್ಪರ್ಶ ನೀಡಲಾಗಿದ್ದು, ಸರ್ಕಸ್ ಕಲಾವಿದರ ರೋಚಕ ಸಾಹಸಗಳು ಪ್ರೇಕ್ಷಕರನ್ನು ಬೆರಗುಗೊಳಿಸುತ್ತಿದೆ. ಆಧುನಿಕ ಜನರ ಅಭಿರುಚಿಗಳಿಗೆ ಅನುಗುಣವಾಗಿ ಹೊಸ ಸ್ಟಂಟ್‍ಗಳು ಮತ್ತು ಕಸರತ್ತುಗಳನ್ನು ಪರಿಚಯಿಸಲಾಗಿದೆ.  ವಿದೂಷಕರು ಮತ್ತು ಕೊಡಂಗಿ ವೇಷಧಾರಿ ಜೋಕರ್‍ಗಳು ವೀಕ್ಷಕರಲ್ಲಿ ಹಾಸ್ಯದ ಹೊನಲು ಹರಿಸುತ್ತಾರೆ.

Facebook Comments

Sri Raghav

Admin