ಕನ್ನಿಮೊಳಿಗೆ ಅವಮಾನ ಪ್ರಕರಣ ಕುರಿತು ತನಿಖೆಗೆ ಆದೇಶ

ಈ ಸುದ್ದಿಯನ್ನು ಶೇರ್ ಮಾಡಿ

ಚೆನೈ, ಆ.10- ವಿಮಾನ ನಿಲ್ದಾಣದಲ್ಲಿ ಸಂಸದೆ ಕನ್ನಿಮೊಳಿ ಅವರಿಗಾದ ಅವಮಾನ ಪ್ರಕರಣವನ್ನು ತನಿಖೆ ನಡೆಸುವುದಾಗಿ ಕೇಂದ್ರ ಕೈಗಾರಿಕಾ ಭದ್ರತಾ ಪಡೆ ತಿಳಿಸಿದೆ.

ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಕರುಣಾನಿ ಅವರ ಪುತ್ರಿ ಹಾಗೂ ತೂತುಕುಡಿ ಕ್ಷೇತ್ರದ ಸಂಸದೆ ಕನ್ನಿಮೊಳ್ಳಿ ಅವರು ಟ್ವಿಟ್ ಮೂಲಕ ತಮಗಾದ ಅನುಭವವನ್ನು ಹೇಳಿಕೊಂಡಿದ್ದಾರೆ.

ವಿಮಾನ ನಿಲ್ದಾಣದಲ್ಲಿ ಅಕಾರಿಯೊಬ್ಬರ ಬಳಿ ನನಗೆ ಹಿಂದಿ ಗೋತ್ತಿಲ್ಲ, ಇಂಗ್ಲಿಷ್ ಅಥವಾ ತಮಿಳಿನಲ್ಲಿ ಮಾತನಾಡಿ ಎಂದು ನಾನು ಕೇಳಿಕೊಂಡಾಗ, ಆಕೆ ನಾನು ಭಾರತೀಯಳು ಎಂದು ಉತ್ತರಿಸಿದ್ದಾರೆ.

ಭಾರತದಲ್ಲಿ ಯಾವತ್ತಿನಿಂದ ಹಿಂದಿ ತಿಳಿದವರು ಮಾತ್ರ ಸಮಾನರು ಎಂದು ಭಾವಿಸಲಾಗಿದೆ ಎಂದು ಟ್ವಿಟ್ ಮೇಲೆ ಕನ್ನಿಮೊಳಿ ಪ್ರಶ್ನಿಸಿದರು.ಇದಕ್ಕೆ ತಕ್ಷಣವೇ ಪ್ರತಿಕ್ರಿಯಿಸಿದ ಕೇಂದ್ರ ಭಾರತೀಯ ಭದ್ರತ ಪಡೆ ಎಲ್ಲಿ, ಯಾವ ವಿಮಾನ ನಿಲ್ದಾಣದಲ್ಲಿ ಅಕಾರಿ ನಿಮ್ಮೊಂದಿಗೆ ರೀತಿ ನಡೆದುಕೊಂಡರು ಮಾಹಿತಿ ನೀಡಿ ಎಂದು ಮನವಿ ಮಾಡಿದೆ.

ತಕ್ಷಣವೇ ಘಟನೆಯ ಕುರಿತಂತೆ ತನಿಖೆಗೆ ಆದೇಶಿಸುವುದಾಗಿಯೂ ಟ್ವಿಟರ್‍ನಲ್ಲಿ ಪ್ರಕಟಿಸಿದೆ. ಕನ್ನಮೊಳಿ ಅವರು ತುರ್ತು ಪ್ರತಿಕ್ರಿಯೆಗೆ ಕೈಗಾರಿಕಾ ಭದ್ರತಾ ಪಡೆಗೆ ಧನ್ಯವಾದ ಹೇಳಿದ್ದಾರೆ.

ಈ ಘಟನೆಯ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಸಂಸದರಿಗೆ ಈ ರೀತಿಯಾದರೆ ಜನ ಸಾಮಾನ್ಯರ ಪಾಡೇನು ಎಂಬ ಪ್ರಶ್ನೆಗಳು ಎದುರಾಗಿವೆ.ಭಾಷಾ ವಿಷಯದಲ್ಲಿ ಅವಮಾನಿಸುವುದನ್ನು ಸಹಿಸಲಾಗುವುದಿಲ್ಲ.

ಇದು ಕನ್ನಿಮೊಳಿ ಅವರಿಗೆ ಆದ ಅವಮಾನವಲ್ಲ, ದಕ್ಷಿಣ ಭಾರತಕ್ಕೆ ಆದ ಅಪಮಾನ ಎಂದು ರಾಜ್ಯ ಸಭಾ ಸದಸ್ಯ ಜೆ.ಸಿ.ಚಂದ್ರಶೇಖರ್ ಟೀಕಿಸಿದ್ದಾರೆ.

Facebook Comments

Sri Raghav

Admin