ವಿಶ್ವ ಪೊಲೀಸ್ ಗೇಮ್ಸ್‌ನಲ್ಲಿ 10 ಪದಕ ಗೆದ್ದ ಭಾರತದ ಸಿಐಎಸ್‍ಎಫ್

ಈ ಸುದ್ದಿಯನ್ನು ಶೇರ್ ಮಾಡಿ

ಸಿಚುವಾನ್(ಚೀನಾ), ಆ.22 (ಪಿಟಿಐ)- ಭಾರತದ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ(ಸಿಐಎಸ್‍ಎಫ್) ಅಂತಾರಾಷ್ಟ್ರೀಯ ಪಂದ್ಯಾವಳಿಯಲ್ಲಿಯೂ ತನ್ನ ಸಾಮಥ್ರ್ಯ ಸಾಬೀತು ಮಾಡಿದೆ.

ಚೀನಾದ ವಾಯುವ್ಯ ಸಿಚುವಾವ್ ಪ್ರಾಂತ್ಯದಲ್ಲಿ ನಡೆದ ವಿಶ್ವ ಪೊಲೀಸ್ ಮತ್ತು ಅಗ್ನಿಶಮನ ಪಂದ್ಯದಲ್ಲಿ (ವಲ್ರ್ಡ್ ಪೊಲೀಸ್ ಅಂಡ್ ಫೈರ್ ಗೇಮ್ಸ್) ಸಿಐಎಸ್‍ಎಫ್ ಯೋಧರಿಗೆ 10 ಪದಕಗಳನ್ನು ಗಳಿಸಿದೆ.

ವಲ್ರ್ಡ್ ಪೊಲೀಸ್ ಅಂಡ್ ಫೈರ್ ಗೇಮ್ಸ್-2019 ಒಲಿಂಪಿಕ್ ಕ್ರೀಡಾಕೂಟ ಶೈಲಿಯ ಸ್ಪರ್ಧೆ. ವಿಶ್ವದ 70ಕ್ಕೂ ಹೆಚ್ಚು ದೇಶಗಳ ಕಾನೂನು ಜಾರಿ ದಳ. ಪೊಲೀಸ್, ಅಗ್ನಿಶಾಮಕ, ಭದ್ರತೆ, ರಕ್ಷಣೆ, ಗಡಿ ಪಹರೆ, ಸೀಮಾ ಸುಂಕ ದಳಗಳ 10,000ಕ್ಕೂ ಹೆಚ್ಚು ಆಥ್ಲೇಟ್ ಸಿಬ್ಬಂದಿ ಈ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದರು.

ಚೆಂಗ್ಡು ನಗರದಲ್ಲಿ ಆ.8 ರಿಂದ 18ರವರೆಗೆ ನಡೆದ ಈ ಕ್ರೀಡಾಕೂಟದಲ್ಲಿ 60ಕ್ಕೂ ಹೆಚ್ಚು ವಿಭಾಗದ ಕ್ರೀಡೆಗಳು ನಡೆದವು. ಭಾರತವನ್ನು ಪ್ರತಿನಿಧಿಸಿದ್ದ ಸಿಐಎಸ್‍ಎಫ್ ಕ್ರೀಡಾ ಸಿಬ್ಬಂದಿ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಒಟ್ಟು 10 ಪದಕಗಳನ್ನು ಗೆದ್ದರು. ಇವುಗಳಲ್ಲಿ ಐದು ಚಿನ್ನ, ಮೂರು ಬೆಳ್ಳಿ ಮತ್ತು ಎರಡು ಕಂಚು ಪದಕಗಳು ಸೇರಿವೆ.

ವಿದೇಶದಲ್ಲಿ ನಡೆದ ಅಂತಾರಾಷ್ಟ್ರೀಯ ಮಟ್ಟದ ಕ್ರೀಡೆಗಳಲ್ಲಿ ಸಾಧನೆ ತೋರಿ ಪದಕ ಗೆದ್ದ ಸಿಬ್ಬಂದಿಗೆ ಸಿಐಎಸ್‍ಎಫ್ ಮಹಾ ನಿರ್ದೇಶಕ ರಾಜೇಶ್ ರಂಜನ್ ಸನ್ಮಾನಿಸಿ ಅಭಿನಂದಿಸಿದ್ದಾರೆ.

Facebook Comments

Sri Raghav

Admin