ಜನಪ್ರಿಯವಾಗುತ್ತಿದೆ ಹಳೆ ಕಾರುಗಳಲ್ಲಿ ನಿರಂತರ 24 ಗಂಟೆಗಳ ಕಾಲ ನಡೆಯುವ ರೇಸ್‍..!

ಈ ಸುದ್ದಿಯನ್ನು ಶೇರ್ ಮಾಡಿ

DS
ಇಂಗ್ಲೆಂಡ್ ವಿಭಿನ್ನ ಸ್ಪರ್ಧೆಗಳಿಗೆ ಲೋಕವಿಖ್ಯಾತಿ ಗಳಿಸಿದೆ ಎಂಬುದನ್ನು ಈ ಹಿಂದೆ ಇದೇ ಅಂಕಣದಲ್ಲಿ ನೀವು ಓದಿರುತ್ತೀರಿ. ಬ್ರಿಟನ್‍ನ ನೊರ್ ಫೋಕ್‍ನಲ್ಲಿ ಪ್ರತಿ ವರ್ಷ ನಡೆಯುವ 24 ತಾಸುಗಳ ಸಿಟ್ರೋಯಿನ್ ಕಾರ್ ರೇಸ್ ಕೂಡ ಜನಪ್ರಿಯ. ಈ ರೇಸ್‍ನಲ್ಲಿ ಬೇಕಾನ್ ಡೌನ್ ತಂಡ ಜಯ ಸಾಧಿಸಿದೆ. ಇಂಗ್ಲೆಂಡ್‍ನ ನೊರ್ ಫೋಕ್‍ನ ಸ್ನೆಟ್ಟೆರ್‍ಟಾನ್ ಸಕ್ರ್ಯೂಟ್‍ನಲ್ಲಿ ಈ ವರ್ಷ ನಡೆದ 24 ಗಂಟೆಗಳ ಸಿಟ್ರೋಯಿನ್ 2ಸಿವಿ ಕಾರ್ ರೇಸ್ ತೀವ್ರ ಪೈಪೋಟಿಯಿಂದ ಕೂಡಿತ್ತು. ಇಬ್ಬರು ಹಾಗೂ ನಾಲ್ವರು ಚಾಲಕರ ಎರಡು ವಿಭಾಗಗಳ ಸ್ಪರ್ಧೆಗಳಲ್ಲಿ 27 ತಂಡಗಳು ಭಾಗವಹಿಸಿದ್ದವು. ಇದು ದಿನವಿಡಿ ನಡೆಯುವ ಸ್ಪರ್ಧೆ. ಸಿಟ್ರೊಯಿನ್ 2ಸಿವಿ-ಈ ಹಳೆ ಮಾದರಿ ಕಾರುಗಳೊಂದಿಗೆ ಚಾಲಕರು ಈ ರೇಸ್‍ನಲ್ಲಿ ಸೆಣಸಿದರು.

ವಿಭಿನ್ನ ಆಕಾರ ಹಾಗೂ ಕಡಿಮೆ ಸಾಮಥ್ರ್ಯದ 602 ಸಿಸಿ ಎಂಜಿನ್ ಇರುವ ವಾಹನ ಇದು. 1990ರಲ್ಲಿ ಈ ಕಾರಿನ ಉತ್ಪಾದನೆ ಸ್ಥಗಿತಗೊಂಡಿದೆ. ಆದರೂ ಈ ಕಾರಿನ ಪ್ರೇಮಿಗಳು ಈಗಲೂ ಕುಟುಂಬದ ಸದಸ್ಯರಂತೆ ಮುತುವರ್ಜಿಯಿಂದ ಇವುಗಳನ್ನು ಆರೈಕೆ ಮಾಡುತ್ತಿದ್ದಾರೆ. ಈ ಮಾದರಿಯ ಅಸಂಖ್ಯಾತ ಕಾರುಗಳು ವಿಶ್ವದ ಹಲವೆಡೆ ಇವೆ.  ಮೂರು ಕಿಲೋ ಮೀಟರ್‍ಗಳ 708 ಲ್ಯಾಪ್‍ಗಳ ಈ ರೇಸ್‍ನಲ್ಲಿ `ಬೇಕಾನ್ ಡೌನ್’ ತಂಡವು ಗೆಲುವು ಸಾಧಿಸಿತು.

DS-1

Facebook Comments

Sri Raghav

Admin