ಕಳ್ಳತನವಾದ ವಾಹನಗಳನ್ನು 60 ದಿನದೊಳಗೆ ಪತ್ತೆ ಹಚ್ಚುವಂತೆ ಅಧಿಕಾರಿಗಳಿಗೆ ಪಂಥ್ ಸೂಚನೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಸೆ.2-ಕಳ್ಳತನವಾಗಿರುವ ವಾಹನಗಳನ್ನು 60 ದಿನದೊಳಗೆ ಪತ್ತೆಹಚ್ಚಬೇಕೆಂದು ನಗರ ಪೊಲೀಸ್ ಆಯುಕ್ತ ಕಮಲ್‍ಪಂಥ್ ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ಕೊಟ್ಟಿದ್ದಾರೆ.

ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಕಳುವಾಗಿರುವ ವಾಹನಗಳನ್ನು 60 ದಿನದೊಳಗೆ ಪತ್ತೆ ಮಾಡಬೇಕು. ಒಂದು ವೇಳೆ ಪತ್ತೆಯಾಗದಿದ್ದರೆ 75 ದಿನದೊಳಗೆ ಸಂಬಂಧಪಟ್ಟ ವಾಹನ ಮಾಲೀಕರು ದೂರು ದಾಖಲಿಸಬೇಕು.

ಇದರಿಂದ ಕಳವಾಗಿರುವ ವಾಹನಕ್ಕೆ ವಿಮೆ ಸೌಲಭ್ಯ ಪಡೆಯಲು ಸಹಾಯವಾಗುತ್ತದೆ ಎಂದು ಹೇಳಿದ್ದಾರೆ.  75 ದಿನದೊಳಗೆ ಸಂಬಂಧಪಟ್ಟ ವಾಹನ ಮಾಲೀಕರು ದೂರಿನ ಬಗ್ಗೆ ಸ್ವೀಕೃತಿ ಪಡೆಯದಿದ್ದರೆ ಆಯಾ ಪೊಲೀಸ್ ಠಾಣೆ ವ್ಯಾಪ್ತಿಯ ಉಪ ಆಯುಕ್ತರು, ಹೆಚ್ಚುವರಿ ಆಯುಕ್ತರು ದೂರು ದಾಖಲಿಸಿಕೊಳ್ಳಬೇಕೆಂದು ಆಯುಕ್ತ ಕಮಲ್‍ಪಂಥ್ ಸೂಚನೆ ನೀಡಿದ್ದಾರೆ.

Facebook Comments