ಸಿಜೆ ವಿರುದ್ಧ ಲೈಂಗಿಕ ಕಿರುಕುಳ ಆರೋಪ: ಸಿಬಿಐ ಮುಖ್ಯಸ್ಥರ ಹಾಜರಾತಿಗೆ ಸೂಚನೆ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಏ.24-ಸುಪ್ರೀಂ ಕೋರ್ಟ್ ಮುಖ್ಯನ್ಯಾಯಮೂರ್ತಿ ರಂಜನ್ ಗೊಗೋಯ್ ವಿರುದ್ಧ ಮಹಿಳೆಯೊಬ್ಬರು ಮಾಡಿರುವ ಲೈಂಗಿಕ ಕಿರುಕುಳ ಆರೋಪ ಪ್ರಕರಣದ ವಿಚಾರಣೆಗಾಗಿ ನ್ಯಾಯಾಲಯಕ್ಕೆ ಹಾಜರಾಗುವಂತೆ ಸಿಬಿಐ ಗುಪ್ತಚರ ಮಂಡಳಿ ಮತ್ತು ದೆಹಲಿ ಪೊಲೀಸರು ಮುಖ್ಯಸ್ಥರುಗಳಿಗೆ ಸರ್ವೋಚ್ಛ ನ್ಯಾಯಾಲಯ ಇಂದು ಸೂಚನೆ ನೀಡಿದೆ.

ಮುಖ್ಯನ್ಯಾಯ ಮೂರ್ತಿ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಿ ಅವರನ್ನು ತೊಂದರೆಗೆ ಸಿಲುಕಿಸಲು ದೊಡ್ಡಮಟ್ಟದ ಪಿತೂರಿ ನಡೆದಿದೆ ಎಂಬ ಹಿರಿಯ ವಕೀಲ ಉತ್ಸವ್ ಸಿಂಗ್‍ಬೈನ್ ಅವರ ಹೇಳಿಕೆಗಳ ವಿಚಾರ ಸಂದರ್ಭದಲ್ಲಿ ತ್ರಿಸದಸ್ಯರ ಸಮಿತಿ ಮುಂದೆ ಗೌಪ್ಯವಾಗಿ ಹಾಜರಾಗುವಂತೆ ಸುಪ್ರೀಂ ಕೋರ್ಟ್ ಸೂಚಿಸಿದೆ.

ಸಿಬಿಐ, ಐಬಿ ಮತ್ತು ದೆಹಲಿ ಪೊಲೀಸ್ ಮುಖ್ಯಸ್ಥರುಗಳನ್ನು ರಹಸ್ಯವಾಗಿ ನಾವು ಭೇಟಿ ಮಾಡಿ ಈ ಸಂಬಂಧ ಚರ್ಚಿಸುತ್ತೇವೆ ಎಂದು ತ್ರಿಸದಸ್ಯ ವಿಶೇಷ ಪೀಠದ ಮುಖ್ಯಸ್ಥ ನ್ಯಾಯಮೂರ್ತಿ ಅರುಣ್ ಮಿಶ್ರಾ ಹೇಳಿದ್ದಾರೆ.

ಹಿರಿಯ ನ್ಯಾಯಮೂರ್ತಿಗಳಾದ ಆರ್.ಎಫ್. ನಾರಿಮನ್ ಮತ್ತು ದೀಪಕ್ ಗುಪ್ತಾ ಈ ವಿಶೇಷ ಪೀಠದ ಸದಸ್ಯರಾಗಿದ್ದಾರೆ. ಆಂತರಿಕ ಸಮಿತಿ ರಚನೆ
ಮುಖ್ಯ ನ್ಯಾಯಾಧೀಶ ರಂಜನ್ ಗೊಗೋಯ್ ವಿರುದ್ಧ ಮಹಿಳೆಯ ಮೇಲೆ ಲೈಂಗಿಕ ಕಿರುಕುಳ ಆರೋಪದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಹಿರಿಯ ನ್ಯಾಯಾಧೀಶ ನ್ಯಾ. ಎಸ್.ಎ.ಬೊಬ್ಡೆ ನೇತೃತ್ವದ ಮೂರು ಸದಸ್ಯರ ಆಂತರಿಕ ಸಮಿತಿ ರಚಿಸಲಾಗಿದೆ.

ನ್ಯಾಯಮೂರ್ತಿ ಬೊಬ್ಡೆ ನೇತೃತ್ವದ ಈ ತನಿಖಾ ಸಮಿತಿಯಲ್ಲಿ ನ್ಯಾಯಮೂರ್ತಿಗಳಾದ ಎನ್. ವಿ. ರಮಣ ಮತ್ತು ಇಂದಿರಾ ಬ್ಯಾನರ್ಜಿ ಸದಸ್ಯರಾಗಿದ್ದಾರೆ. ಬೊಬ್ಡೆ ಪತ್ರ ಬರೆಯುವ ಮೂಲಕ ಈ ಇಬ್ಬರೂ ನ್ಯಾಯಾಧೀಶರನ್ನು ಸಮಿತಿಯ ಸದಸ್ಯರಾಗಲು ವಿನಂತಿಸಿದ್ದಾರೆ.

ರಮಣ ಅವರು ಹಿರಿತನದ ಆಧಾರದಲ್ಲಿ ನನ್ನ ನಂತರದ ಸ್ಥಾನದಲ್ಲಿದ್ದಾರೆ. ಇನ್ನು ಬ್ಯಾನರ್ಜಿಯವರು ಮಹಿಳಾ ನ್ಯಾಯಾಧೀಶರಾದ ಕಾರಣ ಸಮಿತಿಗೆ ಆಯ್ಕೆ ಮಾಡಿಕೊಳ್ಳಲಾಗಿದೆ ಬೊಬ್ಡೆ ಹೇಳಿದ್ದಾರೆ.

ಸಿಜೆಐ ನಿವಾಸದಲ್ಲಿ ತನ್ನ ಮೇಲೆ ಲೈಂಗಿಕ ದೌರ್ಜನ್ಯವಾಗಿದೆ ಎಂದು ನ್ಯಾಯಾಲಯದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮಹಿಳಾ ಉದ್ಯೋಗಿ ಆರೋಪಿಸಿ ಈ ಕುರಿತು ಸರ್ವೋಚ್ಚ ನ್ಯಾಯಾಲಯದ ಎಲ್ಲ 22 ನ್ಯಾಯಾಧೀಶರಿಗೆ ಪ್ರಮಾಣೀಕರಿಸಿದ ಅಫಿಡವಿಟ್ ಗಳನ್ನು ಸಲ್ಲಿಸಿದ್ದರು. ಈ ಕುರಿತಂತೆ ವಿವರವಾದ ತನಿಖೆಗಾಗಿ ಈಗ ಈ ಮೂವರು ಸದಸ್ಯರ ಆಂತರಿಕ ಸಮಿತಿ ರಚನೆಯಾಗಿದೆ.

ಆಂತರಿಕ ತನಿಖಾ ಸಮಿತಿ ರಚಿಸಿದ ನಂತರ, ನ್ಯಾಯಮೂರ್ತಿ ಬೊಬ್ಡೆ ದೂರುದಾರರಿಗೆ ನೋಟೀಸ್ ನೀಡಿದ್ದಾರೆ.ಶುಕ್ರವಾರ ಮೊದಲ ವಿಚಾರಣೆಯನ್ನು ನಿಗದಿಪಡಿಸಲಾಗಿದ್ದು ಈ ಸಂಬಂಧ ಸುಪ್ರೀಂ ಕೋರ್ಟ್ ಪ್ರಧಾನ ಕಾರ್ಯದರ್ಶಿ ಕೂಡ ದಾಖಲೆ ಒದಗಿಸಬೇಕೆಂದು ಕೇಳಲಾಗಿದೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ