650 ಹೈಕೋರ್ಟ್ ಜಡ್ಜ್‌ಗಳ ಜೊತೆ ಸಿಜೆಐ ಗೋಗೊಯ್ ವಿಡಿಯೋ ಕಾನ್ಫರೆನ್ಸ್

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ನ.15-ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗೋಗೊಯ್ ನವೆಂಬರ್ 17 ರಂದು ಭಾನುವಾರ ನಿವೃತ್ತರಾಗಲಿದ್ದಾರೆ. ಸುಪ್ರೀಂಕೋರ್ಟ್‍ನ ಕೋರ್ಟ್ ನಂ.1 (ಮುಖ್ಯ ನ್ಯಾಯಮೂರ್ತಿಯವರ ಕೊಠಡಿ)ರಲ್ಲಿ ಅವರು ಇಂದು ಕೊನೆ ದಿನ ಪೀಠವನ್ನು ಅಲಂಕರಿಸಿದರು.

ಇಂದು ಮಧ್ಯಾಹ್ನ ನಂತರ ಅವರು ರಾಜ್‍ಘಾಟ್‍ನಲ್ಲಿರುವ ಮಹಾತ್ಮಗಾಂಧೀಜಿಯವರ ಸ್ಮಾರಕಕ್ಕೆ ನಮನ ಸಲ್ಲಿಸುವ ಕಾರ್ಯಕ್ರಮವಿದೆ. ಸುಪ್ರೀಂಕೋರ್ಟ್ ನ್ಯಾಯಮೂರ್ತಿಯಾಗಿ ನೇಮಕಗೊಂಡ ನಂತರವೂ ಗಾಂಧಿ ಸ್ಮಾರಕಕ್ಕೆ ಗೌರವ ಸಮರ್ಪಿಸಿದರು.

ಇಂದು ಸಂಜೆ ಮುಖ್ಯ ನ್ಯಾಯಮೂರ್ತಿಯವರು ದೇಶದ ವಿವಿಧ ಹೈಕೋರ್ಟ್‍ಗಳ 650 ನ್ಯಾಯಾಧೀಶರು ಮತ್ತು 15 ಸಾವಿರ ನ್ಯಾಯಾಂಗ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ನಡೆಸಿ ಸಂದೇಶ ನೀಡುವ ಕಾರ್ಯಕ್ರಮವೂ ಸಹ ಇದೆ. ಸುಪ್ರೀಂಕೋರ್ಟ್‍ನ ಅತ್ಯಂತ ಹಿರಿಯ ನ್ಯಾಯಮೂರ್ತಿ ಎಸ್.ಎ.ಬೋಬ್ಡೆ ಭಾರತದ ಮುಂದಿನ ಸಿಜೆಐ ಆಗಿ ಅಧಿಕಾರ ಸ್ವೀಕರಿಸಲಿದ್ದಾರೆ.

Facebook Comments