ಸಿಜೆ ವಿರುದ್ಧ ಲೈಂಗಿಕ ಕಿರುಕುಳ ಆರೋಪ: ತ್ರಿಸದಸ್ಯ ಸಮಿತಿ ರಚನೆ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಏ.24- ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶ ರಂಜನ್ ಗೊಗೋಯ್ ವಿರುದ್ಧ ಮಹಿಳೆಯ ಮೇಲೆ ಲೈಂಗಿಕ ಕಿರುಕುಳ ಆರೋಪದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಹಿರಿಯ ನ್ಯಾಯಾಧೀಶ ನ್ಯಾ. ಎಸ್.ಎ.ಬೊಬ್ಡೆ ನೇತೃತ್ವದ ಮೂರು ಸದಸ್ಯರ ಆಂತರಿಕ ಸಮಿತಿ ರಚಿಸಲಾಗಿದೆ.

ನ್ಯಾಯಮೂರ್ತಿ ಬೊಬ್ಡೆ ನೇತೃತ್ವದ ಈ ತನಿಖಾ ಸಮಿತಿಯಲ್ಲಿ ನ್ಯಾಯಮೂರ್ತಿಗಳಾದ ಎನ್. ವಿ. ರಮಣ ಮತ್ತು ಇಂದಿರಾ ಬ್ಯಾನರ್ಜಿ ಸದಸ್ಯರಾಗಿದ್ದಾರೆ. ಬೊಬ್ಡೆ ಪತ್ರ ಬರೆಯುವ ಮೂಲಕ ಈ ಇಬ್ಬರೂ ನ್ಯಾಯಾಧೀಶರನ್ನು ಸಮಿತಿಯ ಸದಸ್ಯರಾಗಲು ವಿನಂತಿಸಿದ್ದಾರೆ.

ರಮಣ ಅವರು ಹಿರಿತನದ ಆಧಾರದಲ್ಲಿ ನನ್ನ ನಂತರದ ಸ್ಥಾನದಲ್ಲಿದ್ದಾರೆ. ಇನ್ನು ಬ್ಯಾನರ್ಜಿಯವರು ಮಹಿಳಾ ನ್ಯಾಯಾಧೀಶರಾದ ಕಾರಣ ಸಮಿತಿಗೆ ಆಯ್ಕೆ ಮಾಡಿಕೊಳ್ಳಲಾಗಿದೆ ಬೊಬ್ಡೆ ಹೇಳಿದ್ದಾರೆ.

ಸಿಜೆಐ ನಿವಾಸದಲ್ಲಿ ತನ್ನ ಮೇಲೆ ಲೈಂಗಿಕ ದೌರ್ಜನ್ಯವಾಗಿದೆ ಎಂದು ನ್ಯಾಯಾಲಯದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮಹಿಳಾ ಉದ್ಯೋಗಿ ಆರೋಪಿಸಿ ಈ ಕುರಿತು ಸರ್ವೋಚ್ಚ ನ್ಯಾಯಾಲಯದ ಎಲ್ಲ 22 ನ್ಯಾಯಾಧೀಶರಿಗೆ ಪ್ರಮಾಣೀಕರಿಸಿದ ಅಫಿಡವಿಟ್ ಗಳನ್ನು ಸಲ್ಲಿಸಿದ್ದರು. ಈ ಕುರಿತಂತೆ ವಿವರವಾದ ತನಿಖೆಗಾಗಿ ಈಗ ಈ ಮೂವರು ಸದಸ್ಯರ ಆಂತರಿಕ ಸಮಿತಿ ರಚನೆಯಾಗಿದೆ.

ಆಂತರಿಕ ತನಿಖಾ ಸಮಿತಿ ರಚಿಸಿದ ನಂತರ, ನ್ಯಾಯಮೂರ್ತಿ ಬೊಬ್ಡೆ ದೂರುದಾರರಿಗೆ ನೋಟೀಸ್ ನೀಡಿದ್ದಾರೆ.ಶುಕ್ರವಾರ ಮೊದಲ ವಿಚಾರಣೆಯನ್ನು ನಿಗದಿಪಡಿಸಲಾಗಿದ್ದು ಈ ಸಂಬಂಧ ಸುಪ್ರೀಂ ಕೋರ್ಟ್ ಪ್ರಧಾನ ಕಾರ್ಯದರ್ಶಿ ಕೂಡ ದಾಖಲೆ ಒದಗಿಸಬೇಕೆಂದು ಕೇಳಲಾಗಿದೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ