ಪರೀಕ್ಷೆಗೆ ಕುದುರೆ ಏರಿ ಬಂದ ವಿದ್ಯಾರ್ಥಿನಿಗೆ ಪ್ರಶಂಸೆಗಳ ಸುರಿಮಳೆ..!

ಈ ಸುದ್ದಿಯನ್ನು ಶೇರ್ ಮಾಡಿ

ತ್ರಿಶೂರ್, ಏ.9- ಹತ್ತನೇ ತರಗತಿ ಪರೀಕ್ಷೆಗೆ ತಡವಾಯಿತು ಎಂಬ ಕಾರಣಕ್ಕಾಗಿ ವಿದ್ಯಾರ್ಥಿನಿಯೊಬ್ಬಳು ಕುದುರೆ ಏರಿ ಬಂದಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದಂತೆ ಆಕೆ ಸಮಯ ಪ್ರಜ್ಞೆ ಮತ್ತು ಬುದ್ಧಿವಂತಿಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ.

ಕೇರಳದ ತ್ರಿಶೂರ್‍ನಲ್ಲಿ ವಿದ್ಯಾರ್ಥಿನಿ ಕುದುರೆ ಸವಾರಿ ಮಾಡುತ್ತಿರುವ ವಿಡಿಯೋ ವೈರಲ್ ಆಗಿದ್ದು ಅನೇಕ ಮಂದಿ ಈ ದೃಶ್ಯ ಲೈಕ್ ಮಾಡಿದ್ದಾರೆ. ವಿಡಿಯೋವನ್ನು ಅಗ್ರಮಾನ್ಯ ಆಟೋಮೊಬೈಲ್ ಸಂಸ್ಥೆಯ ಮುಖ್ಯಸ್ಥ ಆನಂದ್ ಮಹೀಂದ್ರ ಸೇರಿದಂತೆ ಅನೇಕ ಪ್ರಭಾವಿಗಳು ಈ ವಿದ್ಯಾರ್ಥಿಯ ಸಾಹಸವನ್ನು ಸಹ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ತ್ರಿಶೂರ್‍ನಲ್ಲಿರುವ ಆಕೆಯ ಪರಿಚಿತರು ಇದ್ದರೆ ನನಗೆ ತಿಳಿಸಿ. ಈ ಬಾಲಕಿ ಹಾಗೂ ಕುದುರೆ ಫೋಟೋವನ್ನು ನಾನು ಕ್ಲಿಕ್ಕಿಸಬೇಕು. ಆ ಫೋಟೋವನ್ನು ನನ್ನ ಮೊಬೈಲ್‍ನ ಸ್ಕ್ರೀನ್ ಸೇವರ್ ಆಗಿ ಮಾಡಿಕೊಳ್ಳುತ್ತೇನೆ.

ಆಕೆಯೇ ನನ್ನ ಪಾಲಿನ ಹೀರೋ ಎಂದು ಮೆಚ್ಚುಗೆ ಸಾಲನ್ನು ಬರೆದುಕೊಂಡಿದ್ದಾರೆ. ಮಹಿಳೆಯ ಶಿಕ್ಷಣ ಮತ್ತೊಂದು ಹಂತವನ್ನು ತಲುಪಿದೆ. ನಿಜಕ್ಕೂ ಶ್ಲಾಘನೀಯ, ಇನ್ ಕ್ರೆಡಿಬಲ್ ಇಂಡಿಯಾ ಎಂದು ಬರೆದುಕೊಂಡಿದ್ದಾರೆ.

ಇನ್ನು ವಿದ್ಯಾರ್ಥಿನಿಯ ವಿಡಿಯೋವನ್ನು ಮನೋಜ್ ಕುಮಾರ್ ಎಂಬುವರು ಶೇರ್ ಮಾಡಿದ್ದರು. ಈ ವಿದ್ಯಾರ್ಥಿನಿಯ ಸಮಯ ಪ್ರಜ್ಞೆ ಮತ್ತು ಬುದ್ಧಿವಂತಿಕೆಗೆ ಯುವ ಸಮುದಾಯ ಫಿದಾ ಆಗಿದ್ದು ಪ್ರಶಂಸೆಗಳ ಸುರಿಮಳೆಗೈದಿವೆ.

Facebook Comments

Sri Raghav

Admin