ಶಾಲಾ ಬಸ್ ತಪ್ಪಿದ್ದಕ್ಕೆ 9ನೇ ತರಗತಿ ವಿದ್ಯಾರ್ಥಿ ಆತ್ಮಹತ್ಯೆ

ಈ ಸುದ್ದಿಯನ್ನು ಶೇರ್ ಮಾಡಿ

ಬೇಟಲ್, (ಮಧ್ಯಪ್ರದೇಶ),ನ.23- ಶಾಲಾ ಬಸ್ ತಪ್ಪಿಹೋದ ಕಾರಣಕ್ಕೆ ಮನನೊಂದ 9ನೇ ತರಗತಿ ವಿದ್ಯಾರ್ಥಿಯೊಬ್ಬ ಮರವೊಂದಕ್ಕೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಧ್ಯಪ್ರದೇಶದ ಬೇಟಲ್ ಜಿಲ್ಲೆಯಲ್ಲಿ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬೇಟಲ್ ಜಿಲ್ಲಾ ಕೇಂದ್ರದಿಂದ 40 ಕಿ.ಮೀ. ದೂರವಿರುವ ಘೋಡಾಡೊಂಗ್ರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಜರುಗಿದೆ. ಶಾಲೆಗೆ ಹೊರಟಿದ್ದ 14 ವರ್ಷದ ಬಾಲಕನಿಗೆ ಬಸ್ ಸಿಗಲಿಲ್ಲ. ಆತ ಶಾಲೆಯನ್ನು ಎಂದೂ ತಪ್ಪಿಸಿಕೊಳ್ಳುತ್ತಿರಲಿಲ್ಲ. ಒಂದೇ ಒಂದು ತರಗತಿಗೂ ಗೈರು ಹಾಜರಾಗುತ್ತಿರಲಿಲ್ಲ. ಶಾಲಾ ಬಸ್ ಸಿಗದ ಕಾರಣಕ್ಕೆ ಆತ ಅತ್ಯಂತ ಖಿನ್ನನಾಗಿದ್ದ ಎಂದು ಬಾಲಕನ ಕುಟುಂಬದವರು ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ.

Facebook Comments