ಚರಂಡಿ ದುರಸ್ತಿಗಿಳಿದ ಇಬ್ಬರ ದುರ್ಮರಣ, ಓರ್ವ ಗಂಭೀರ

ಈ ಸುದ್ದಿಯನ್ನು ಶೇರ್ ಮಾಡಿ

ಭುವನೇಶ್ವರ್,ಏ.16- ಚರಂಡಿಗಿಳಿದು ದುರಸ್ತಿ ಮಾಡುತ್ತಿದ್ದ ಪುರಸಭೆಯ ಇಬ್ಬರು ನೌಕರರು ಉಸಿರುಗಟ್ಟಿ ಸಾವನ್ನಪ್ಪಿದ್ದು, ಮತ್ತೊಬ್ಬಾತನ ಸ್ಥಿತಿ ಗಂಭೀರವಾಗಿರುವ ಘಟನೆ ಕಟಕ್‍ನ ಸಿಡಿಎ ವಲಯ -10ರಲ್ಲಿ ನಡೆದಿದೆ. ಪಿ.ಶಂಕರ್ ಮತ್ತು ಬಿಶ್ನು ಮೃತಪಟ್ಟಿರುವ ದುರ್ದೈವಿಗಳು. ಬೆಳಗ್ಗೆ 11.30ರ ಸಮಯದಲ್ಲಿ ಕಟಕನ ಮುನ್ಸಿಪಲ್ ಕಾಪೆರ್ರೇಷನ್ ನೌಕರರು ಚರಂಡಿಗಿಳಿದು ದುರಸ್ತಿ ಕಾರ್ಯದಲ್ಲಿ ತೊಡಗಿದ್ದಾಗ ಈ ದುರ್ಘಟನೆ ಸಂಭವಿಸಿದೆ.

ಸುಮಾರು 10-15 ಅಡಿ ಆಳ ಗುಂಡಿಯಲ್ಲಿ ಒಬ್ಬ ನೌಕರ ಸಿಲುಕಿಕೊಂಡಿದ್ದರಿಂದ ಮತ್ತೊಬ್ಬ ನೌಕರ ಆತನ ರಕ್ಷಣೆಗೆ ಧಾವಿಸಿ ಚರಂಡಿಗಿಳಿದಿದ್ದಾನೆ. ಎಷ್ಟು ಹೊತ್ತಾದರೂ ಇವರಿಬ್ಬರು ಹೊರಗೆ ಬಾರದೆ ಇದ್ದುದ್ದನ್ನು ಕಂಡು ಇನ್ನೊಬ್ಬ ನೌಕರ ರಕ್ಷಿಸಲು ಮುಂದಾಗಿದ್ದಾನೆ. ಮೂವರು ಅಪಾಯದಲ್ಲಿ ಸಿಲುಕಿರುವುದನ್ನು ಗಮನಿಸಿದ ದಾರಿಹೋಕ ಮನೋರಂಜನ್ ಬಾಲ್ ಎಂಬುವರು ಕೂಡಲೇ ಸ್ಥಳೀಯ ಅಗ್ನಿಶಾಮಕ ದಳಕ್ಕೆ ಕರೆ ಮಾಡಿದ್ದಾರೆ.

ಸ್ಥಳಕ್ಕೆ ಧಾವಿಸಿದ ರಕ್ಷಣಾ ಸಿಬ್ಬಂದಿಗಳು ಮೂವರನ್ನು ಚರಂಡಿ ಹೊರತೆಗೆದು ಆಸ್ಪತ್ರೆಗೆ ರವಾನಿಸಿದ್ದಾರೆ. ಪಿ.ಶಂಕರ್ ಮತ್ತು ಭಿಶ್ನು ನಾಯಕ್ ಸಾವನ್ನಪ್ಪಿದರೆ ಟಿ.ಶಿವ ಎಂಬಾತನ ಸ್ಥಿತಿ ಗಂಭೀರವಾಗಿದೆ.

ಈ ರೀತಿ ಎಷ್ಟೋ ಪ್ರಕರಣಗಳು ನಡೆಯುತ್ತಿರುತ್ತವೆ. ಬಡ ನೌಕರರನನ್ನು ಯಾವುದೆ ರಕ್ಷಣಾ ಸಾಧನಗಳನ್ನು ನೀಡದೆ ಚರಂಡಿಗಿಳಿಸಲಾಗುತ್ತಿದೆ. ಇದು ತಪ್ಪಬೇಕು ಎಂದು ಮನೋರಂಜನ್ ಬಾಲ್ ಅಧಿಕಾರಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.

Facebook Comments