ವಾಲಿದ್ದ ಕಟ್ಟಡ ತೆರವು ಕಾರ್ಯ ಆರಂಭ

ಈ ಸುದ್ದಿಯನ್ನು ಶೇರ್ ಮಾಡಿ

ಕೆ.ಆರ್.ಪುರ, ಮೇ 14- ಯಾವುದೇ ಪರವಾನಗಿ ಇಲ್ಲದೆ ಅಕ್ರಮವಾಗಿ ನಿರ್ಮಿಸಿದ್ದ ವಾಲಿದ ಕಟ್ಟಡ ತೆರವು ಕಾರ್ಯಾಚರಣೆ ಬಿಬಿಎಂಪಿ ಕೈಗೊಂಡಿದೆ.
ಬಾಣಸವಾಡಿ ರೈಲ್ವೆ ಅಂಡರ್ ಪಾಸ್ ಬಳಿಯ ಹೊರಮಾವು ಬಡಾವಣೆಯಲ್ಲಿ ಸುಮಾರು 16 ವರ್ಷಗಳ ಮೂರಂತಸ್ತಿನ ಕಟ್ಟಡದ ಪಕ್ಕದ ನಿವೇಶನದಲ್ಲಿ ಪಾಯ ತೆಗೆಯುವ ವೇಳೆ ವಾಲಿಕೊಂಡಿತ್ತು.

11ಗಿ 37 ವಿಸ್ತೀರ್ಣದ ಜಾಗದಲ್ಲಿ ಪಿಲ್ಲರ್ ಹಾಕದೆ ಮೂರಂತಸ್ತಿನ ಕಟ್ಟಡವನ್ನು ರತನ್‍ಸಿಂಗ್ ಎಂಬುವರು ನಿರ್ಮಾಣ ಮಾಡಿದ್ದರು. 2016ರಲ್ಲಿ ರತನ್‍ಸಿಂಗ್ ಹುಕುಂಸಿಂಗ್ ಎಂಬುವರಿಗೆ ಕಟ್ಟಡವನ್ನು ಮಾರಾಟ ಮಾಡಿದ್ದರು.

ಈ ಕಟ್ಟಡದ ಪಕ್ಕದ ನಿವೇಶನ ಮಾಲೀಕ ಕುಮರೇಶ್ ಎಂಬುವರು ಮನೆ ಕಟ್ಟಲು ಅಡಿಪಾಯ ಹಾಕಲುಮುಂದಾದಾಗ ಕಟ್ಟಡ ವಾಲಿದೆ. ನಕ್ಷೆ ಮಂಜೂರಾತಿ ಪರವಾನಗಿ ಕುರಿತು ಕೆಎಂಸಿ ಕಾಯ್ದೆಯಡಿ ದಾಖಲೆಗಳನ್ನು ಸಲ್ಲಿಸುವಂತೆ ಬಿಬಿಎಂಪಿ ಕಟ್ಟಡದ ಮಾಲೀಕ ಹುಕುಂಸಿಂಗ್, ನಿವೇಶನ ಮಾಲೀಕ ಕುಮರೇಶ್‍ಗೆ ನೋಟೀಸ್ ಜಾರಿ ಮಾಡಿದೆ.

ಬಿಬಿಎಂಪಿಯಿಂದ ಕಟ್ಟಡ ಕಟ್ಟಲು ಯಾವುದೇ ನಕ್ಷೆ ಮತ್ತು ಎನ್‍ಒಸಿ ಪಡೆದಿರಲಿಲ್ಲ. ಸುಮಾರು ಆರೇಳು ಅಡಿಯಷ್ಟು ಪಾಯಕ್ಕಾಗಿ ಕುಮರೇಶ್ ಜಾಗ ಅಗೆದಿದ್ದಾರೆ.
ಇಂದು ಬಿಬಿಎಂಪಿಯ ಅಭಿಯಂತರರು, ಹೆಣ್ಣೂರು ಠಾಣೆ ಪೊಲೀಸರು, ಸಂಚಾರಿ ಪೊಲೀಸರು ಸ್ಥಳದಲ್ಲಿ ವೆiಕ್ಕಾಂ ಹೂಡಿದ್ದು, ಕಟ್ಟಡ ತೆರವು ಕಾರ್ಯವನ್ನು ಪ್ರಾರಂಭಿಸಿದ್ದಾರೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ