ಜಮ್ಮುವಿನಲ್ಲಿ ಮೇಘ ಸ್ಪೋಟ, 50ಕ್ಕೂ ಹೆಚ್ಚು ಮಂದಿ ನಾಪತ್ತೆ..!

ಈ ಸುದ್ದಿಯನ್ನು ಶೇರ್ ಮಾಡಿ

ಜಮ್ಮು , ಜು.28- ಮುಂಜಾನೆ ಮೇಘ ಸ್ಫೋಟದಿಂದ ದಿಢೀರ್ ಪ್ರವಾಹ ಉಂಟಾಗಿ ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರ್ ಜಿಲ್ಲೆಯ ಹಲವೆಡೆ ಮನೆಗಳು ಮುಳುಗಿದ್ದು , ಸುಮಾರು 5 ಮಂದಿ ಸಾವನ್ನಪ್ಪಿ 50ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ.

4.30ರ ಸುಮಾರಿನಲ್ಲಿ ಡಚ್ಚನ್ ತಹಸಿಲ್‍ನ ಹೊಂಚಾರ್ ಗ್ರಾಮದಲ್ಲಿ ಮೇಘ ಸ್ಫೋಟವಾಗಿ ಮನೆಯಲ್ಲಿ ಮಲಗಿದ್ದಾಗ ಕೊಚ್ಚಿ ಹೋಗಿದ್ದಾರೆ. ಸೇನೆ ಮತ್ತು ರಾಜ್ಯ ವಿಪತ್ತು ನಿಯಂತ್ರಣ ಪಡೆ ಸ್ಥಳಕ್ಕೆ ಭೇಟಿ ನೀಡಿದ್ದು, ಈವರೆಗೆ 5 ಜನರ ಶವ ಪತ್ತೆಯಾಗಿದೆ ಎಂದು ಜಿಲ್ಲಾ ಅಭಿವೃದ್ಧಿ ಆಯುಕ್ತ ಅಶೋಕ್ ಕುಮಾರ್ ಶರ್ಮ ತಿಳಿಸಿದ್ದಾರೆ.

ಕಾಣೆಯಾಗಿರುವವರ ಬಗ್ಗೆ ಪತ್ತೆಗೆ ಕಾರ್ಯಾಚರಣೆ ನಡೆಸಿದ್ದು, ಹವಾಮಾನ ಸುಧಾರಿಸಲು ಕಾಯುತ್ತಿದ್ದೇವೆ ಎಂದು ಎನ್‍ಡಿಆರ್‍ಎಫ್ ತಂಡದ ಸಿಂಗ್ ಹೇಳಿದ್ದಾರೆ.

Facebook Comments