ಈ ಸಮಸ್ಯೆಗಳಿಗೆ ಲವಂಗ ಸೂಪರ್ ಸೊಲ್ಯೂಷನ್

ಈ ಸುದ್ದಿಯನ್ನು ಶೇರ್ ಮಾಡಿ

Clovesಲವಂಗ ಎಂದರೆ ಅದನ್ನು ಅಡುಗೆಗೆ ಬಳಸುತ್ತಾರೆ ಅದು ಬಿಟ್ಟರೆ ಹಲ್ಲು ನೋವಿದ್ದರೆ ಲವಂಗ ಬಳಸಿ ಹಲ್ಲುನೋವಿನಿಂದ ಮುಕ್ತಿ ಪಡೆಯಬಹುದು ಎಂದು ಮಾತ್ರ ತಿಳಿದಿದೆ. ಆದರೆ ಲವಂಗ ಬಳಸಿ ವಿವಿಧ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದು ಲವಂಗ ಮಸಾಲೆ ಪದಾರ್ಥಗಳಲ್ಲಿನ ಒಂದು ಮುಖ್ಯವಾದ ವಸ್ತುವಾಗಿದೆ. ಇದನ್ನು ಹೆಚ್ಚಾಗಿ ಅಡುಗೆಯ ಸ್ವಾಧ ಹೆಚ್ಚಿಸಲು ಬಳಕೆ ಮಾಡಲಾಗುತ್ತದೆ. ಆದರೆ ಅದೆ ಲವಂಗದಿಂದ ಹಲವಾರು ಲಾಭಗಳಿವೆ.

# ಲವಂಗ ಸೇವನೆಯಿಂದಾಗುವ ಪ್ರಯೋಜನಗಳು
ಒತ್ತಡ ನಿವಾರಣೆ: ಲವಂಗ ಒತ್ತಡವನ್ನು ದೂರಮಾಡಿ ದೇಹವನ್ನು ಸಮಸ್ಥಿತಿಗೆ ತರುವ ಗುಣ ಹೊಂದಿದೆ. ಲವಂಗ, ಶುಂಠಿ, ಏಲಕ್ಕಿ ಮತ್ತು ಪುದಿನಾ ಬಳಸಿ ಚಹಾ ಮಾಡಿ ಸೇವಿಸಿ.
ವಾಕರಿಕೆ: ಕೆಲವರಿಗೆ ಪ್ರಯಾಣ ಮಾಡುವಾಗ ವಾಂತಿ ಮಾಡುವ ಸಮಸ್ಯೆ. ಇಲ್ಲದಿದ್ದರೆ ತಿಂದ ಆಹಾರ ಜೀರ್ಣವಾಗದೇ ಪಿತ್ತದಿಂದಾಗಿ ವಾಂತಿ ಬರುವಂತಾಗುತ್ತದೆ. ಇದಕ್ಕೆ ಲವಂಗವನ್ನು ಸೇವಿಸುವುದು ಉತ್ತಮ ಪರಿಹಾರ.
ಟೂತ್ ಪೇಸ್ಟ್ : ನಿಮ್ಮ ಟೂತ್ ಪೇಸ್ಟ್ ನಲ್ಲಿ ಲವಂಗ ಇದೆಯೇ? ಹೌದು. ನಾವು ಬಳಸುವ ಹೆಚ್ಚಿನ ಟೂತ್ ಪೇಸ್ಟ್ ನಲ್ಲಿ ಲವಂಗ ಬಳಕೆಯಾಗುತ್ತದೆ. ಯಾಕೆಂದರೆ ಇದು ಹಲ್ಲಿನ ಆರೋಗ್ಯಕ್ಕೆ ಉತ್ತಮ. ಹಲ್ಲು ನೋವಾದಾಗ ಲವಂಗದ ಕಣವನ್ನು ನೋವಿರುವ ಜಾಗಕ್ಕೆ ಇಟ್ಟುಕೊಂಡು ನೋವು ಉಪಶಮನವಾಗುತ್ತದೆ.
ಹಲ್ಲುನೋವು : 2 ಲವಂಗಕ್ಕೆ ಒಂದು ಟೀ ಚಮಚ ನಿಂಬೆ ರಸವನ್ನು ಸೇರಿಸಿ ಹಲ್ಲುಗಳಲ್ಲಿ ಇಟ್ಟುಕೊಂಡರೆ ನೋವು ನಿವಾರಣೆಯಾಗುತ್ತದೆ.
ಬಾಯಿಯ ದುರ್ಗಂಧ ನಿವಾರಣೆ : ಪ್ರತಿನಿತ್ಯ 2 ಲವಂಗ ಮತ್ತು ಒಂದು ಏಲಕ್ಕಿಯನ್ನು ಜಗಿಯುವುದರಿಂದ ಬಾಯಿಯ ದುರ್ಗಂಧ ನಿವಾರಣೆಯಾಗುತ್ತದೆ.
ಬಾಯಿ ಹುಣ್ಣು ನಿವಾರಣೆ : ಬಾಯಲ್ಲಿ ಹುಣ್ಣಾಗಿದ್ದರೆ, 2 ಲವಂಗವನ್ನು ಸ್ವಲ್ಪ ಜಜ್ಜಿ ಬಾಯಿಯಲ್ಲಿ ಇಟ್ಟುಕೊಳ್ಳಿ. ಹಾಗೇ ಬಾಯಿಯಲ್ಲಿ ಬರುವ ಎಂಜಲನ್ನು ಉಗುಳಿ. ಹೀಗೆ ಮಾಡುವುದರಿಂದ ಹುಣ್ಣು ಮಾಯವಾಗಿ ನೋವು ಕಡಿಮೆಯಾಗುತ್ತದೆ.
ಶೀತ ಮತ್ತು ಜ್ವರ : ಹದವಾದ ಬಿಸಿ ನೀರಿಗೆ ಲವಂಗದ ಎಣ್ಣೆ ಹಾಕಿಕೊಂಡು ಕುಡಿದರೆ ಶೀತ ನಿವಾರಣೆಯಾಗುತ್ತದೆ. ಇಲ್ಲವಾದರೆ, 2 ಲವಂಗ ಮತ್ತು 4-5 ತುಳಸಿ ಎಲೆಗಳನ್ನು ನೀರಿನಲ್ಲಿ ಹಾಕಿ ಕುದಿಸಿ. ನಂತರ ಅದು ತಣ್ಣಗಾದ ಮೇಲೆ ಅದಕ್ಕೆ ಸ್ವಲ್ಪ ಜೇನುತುಪ್ಪ ಸೇರಿಸಿ ಕುಡಿಯಿರಿ.
ಕತ್ತು ನೋವು : 2 ಲವಂಗವನ್ನು ಜಜ್ಜಿ, ಸಾಸಿವೆ ಎಣ್ಣೆಯಲ್ಲಿ ಹಾಕಿ ಮಿಶ್ರಮಾಡಿ. ನಂತರ ಅದನ್ನು ಕುತ್ತಿಗೆ ಭಾಗದಲ್ಲಿ ಹಚ್ಚಿ ಮಸಾಜ್ ಮಾಡಿ.
ಗ್ಯಾಸ್ಟ್ರಿಕ್ ಸಮಸ್ಯೆ ನಿವಾರಣೆ : ಪ್ರತಿನಿತ್ಯ 2 ಲವಂಗವನ್ನು ನೀರಿನಲ್ಲಿ ಹಾಕಿ ಕುದಿಸಿ. ನಂತರ ಅದು ತಣ್ಣಗಾದ ಮೇಲೆ ಕುಡಿಯಿರಿ.

Facebook Comments

Comments are closed.