ಬೆಂಗಳೂರಲ್ಲಿ ಮತ್ತೆ ಆರಂಭವಾಗಿದೆ ಕ್ಲಸ್ಟರ್ ಜೋನ್‍ಗಳು

ಈ ಸುದ್ದಿಯನ್ನು ಶೇರ್ ಮಾಡಿ

\ಬೆಂಗಳೂರು,ಜ.20-ನಗರ ಸೇರಿದಂತೆ ರಾಜ್ಯದೆಲ್ಲೆಡೆ ಸೋಂಕು ಹೆಚ್ಚಳಗೊಳ್ಳುತ್ತಿರುವುದನ್ನು ಮನಗಂಡು ಸರ್ಕಾರ ಮೂರನೆ ಅಲೆಯನ್ನು ತಡೆಗಟ್ಟಲು ಕ್ಲಸ್ಟರ್ ಜೋನ್ ಜಾರಿ ಮಾಡಿ ಆದೇಶ ಹೊರಡಿಸಿದೆ.ಯಾವುದೆ ಒಂದು ಸ್ಥಳದಲ್ಲಿ 5ಕ್ಕಿಂತ ಹೆಚ್ಚು ಸೋಂಕಿತರು ಪತ್ತೆಯಾಗುವ ಪ್ರದೇಶವನ್ನು ಕ್ಲಸ್ಟರ್ ಜೋನ್ ಎಂದು ಪರಿಗಣಿಸಲಾಗುತ್ತದೆ.

ನಗರ ಪ್ರದೇಶಗಳಲ್ಲಿ 50 ಮೀಟರ್ ರೇಡಿಯಸ್‍ನಲ್ಲಿರುವ ಒಂದು ಅಥವಾ ಒಂದಕ್ಕಿಂತ ಹೆಚ್ಚು ಮನೆಗಳಲ್ಲಿ 5ಕ್ಕಿಂತ ಹೆಚ್ಚು ಸೋಂಕು ಪ್ರಕರಣಗಳು ಕಾಣಿಸಿಕೊಂಡರೆ ಅದನ್ನು ಕ್ಲಸ್ಟರ್ ಜೋನ್ ಎಂದು ಪರಿಗಣಿಸಲಾಗುವುದು.ಒಂದು ವೇಳೆ ವಸತಿ ಸಮುಚ್ಚಯಗಳಲ್ಲಿ ಸೋಂಕು ಕಾಣಿಸಿಕೊಂಡರೆ ಸ್ಥಳೀಯ ಆರೋಗ್ಯಾಕಾರಿಗಳ ನಿರ್ಧಾರ ಅಂತಿಮವಾಗಿರಲಿದೆ.

ಗ್ರಾಮೀಣ ಪ್ರದೇಶಗಳಲ್ಲಿ ಒಂದು ಅಥವಾ ಅದಕ್ಕಿಂತ ಹೆಚ್ಚು ಮನೆಗಳಲ್ಲಿ ಸೋಂಕು ಕಾಣಿಸಿಕೊಂಡರೆ ಮೈಕ್ರೋ ಕಂಟೈನ್‍ಮೆಂಟ್ ಜೋನ್ ಎಂದು ಘೋಷಿಸಬೇಕು.15ಕ್ಕಿಂತ ಅಥವಾ ಅದಕ್ಕಿಂತ ಹೆಚ್ಚು ಕೇಸ್‍ಗಳು ವರದಿಯಾದ್ರೆ ದೊಡ್ಡ ಕ್ಲಸ್ಟರ್ ಎಂದು ಪರಿಗಣಿಸಲು ಸೂಚಿಸಲಾಗಿದೆ.

ನಗರ ಪ್ರದೇಶಗಳಲ್ಲಿ ಒಂದು ಅಥವಾ 100 ಮೀಟರ್‍ನಲ್ಲಿರುವ ಹೆಚ್ಚು ಮನೆಗಳಲ್ಲಿ 15ಕ್ಕೂ ಹೆಚ್ಚು ಸೋಂಕು ಕಾಣಿಸಿಕೊಂಡರೆ ದೊಡ್ಡ ಕ್ಲಸ್ಟರ್ ಜೋನ್ ಎಂದು ಪರಿಗಣಿಸಬೇಕು. ಅಪಾರ್ಟ್‍ಮೆಂಟ್‍ಗಲ್ಲಿ ಆಯಾ ಮಹಡಿಗಳನ್ನು ಕಂಟೈನ್‍ಮೆಂಟ್ ಜೋನ್ ಎಂದು ಪರಿಗಣಿಸುವಂತೆ ಸೂಚನೆ ನೀಡಲಾಗಿದೆ.

Facebook Comments

Sri Raghav

Admin