ಭಕ್ತರಿಗೆ ಆಗಿರುವ ಘಾಸಿ ಸರಿಪಡಿಸುತ್ತೇನೆ : ಸಿಎಂ ಬೊಮ್ಮಾಯಿ ಭರವಸೆ

ಈ ಸುದ್ದಿಯನ್ನು ಶೇರ್ ಮಾಡಿ

ದಾವಣಗೆರೆ, ಸೆ.19- ನಂಜನಗೂಡು ದೇವಾಲಯ ಧ್ವಂಸ ಪ್ರಕರಣ ಸಂಬಂಧ ಕಾನೂನು ತೊಡಕಿನ ಮಧ್ಯೆಯೂ ಶಾಂತಿ ಕದಡುವ ಕೆಲಸಕ್ಕೆ ಇತಿಶ್ರೀ ಹಾಡುವ ಕೆಲಸ ಮಾಡಿದ್ದೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ನಗರದ ತ್ರಿಶೂಲ್ ಕಲಾಭವನದಲ್ಲಿ ಹಮ್ಮಕೊಂಡಿದ್ದ ರಾಜ್ಯ ಕಾರ್ಯಕಾರಿಣಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ದೇವಸ್ಥಾನ ತೆರವುಗೊಳಿಸಿರುವುದರಿಂದ ಅಲ್ಲಿನ ಭಕ್ತರ ಮನಸ್ಸಿಗೆ ಘಾಸಿಯಾಗಿದೆ. ಆದರೆ ಅದನ್ನು ಸರಿದೂಗಿಸುವ ಕೆಲಸ ಮಾಡುತ್ತೇನೆ. ಪಕ್ಷದ ಮಾರ್ಗದರ್ಶನ ಪಡೆದು ಆ ಭಾಗದ ಜನರ ಭಾವನೆಗೆ ಸ್ಪಂದಿಸುವ ಕೆಲಸ ಮಾಡುತ್ತೇನೆ. ಎಲ್ಲರಿಗೂ ಒಪ್ಪಿಗೆ ಆಗುವಂತ ನಿರ್ಣಯ ತೆಗೆದುಕೊಳ್ಳುತ್ತೇವೆ ಎಂದು ಭರವಸೆ ನೀಡಿದರು.

ಈ ಸರ್ಕಾರ ನಮ್ಮ ಕಾರ್ಯಕರ್ತರದ್ದು, ಕಾರ್ಯಕರ್ತರ ಭಾವನೆ ನಮಗೆ ಅರ್ಥವಾಗುತ್ತದೆ. ಅವರ ಭಾವನೆಗೆ ಬೆಲೆ ಕೊಡುವಂತಹ ನಿರ್ಣಯಗಳನ್ನು ತೆಗೆದುಕೊಳ್ಳುತ್ತೇವೆ ಎಂದರು. ದೇಶದ ಶಾಂತಿ ಕದಡುವ ಪ್ರಯತ್ನಗಳು ನಡೆದಿದ್ದು, ಗುಜರಾತ್ ಸೇರಿದಂತೆ ಬೇರೆ-ಬೇರೆ ರಾಜ್ಯಗಳಲ್ಲು ಇದು ನಡೆದಿದೆ, ದೇಶವನ್ನು ಅಭದ್ರಗೊಳಿಸುವ ಕೆಲ ಸಂಗತಿಗಳು ನಡೆಯುತ್ತಿವೆ. ಇದಕ್ಕೆ ಕೆಲ ಅಕಾರಿಗಳು ಕೈ ಜೋಡಿಸಿದ್ದಾರೆ ಎಂಬ ಬಾಂಬ್ ಸಿಡಿಸಿದರು.

ಸ್ವಾತಂತ್ರ್ಯ ಬಂದ ನಂತರ ಕಾಂಗ್ರೆಸ್ ಸ್ವಾತಂತ್ರ್ಯ ಚಳವಳಿಯ ಅಲೆಯ ಮೇಲೆ ರಾಜಕಾರಣ ಶುರು ಮಾಡಿತು. ಸ್ಪಷ್ಟ ಸಿದ್ಧಾಂತ, ನಿಖರ ವೈಚಾರಿಕತೆ ದೇಶದ ಬಗ್ಗೆ ನಿಖರ ನಿರ್ಣಯವಿರಲಿಲ್ಲ. ಅದಕ್ಕಾಗಿ ಸ್ವಾಂತಂತ್ರ ನಂತರ ವಿಸರ್ಜನೆ ಮಾಡಬೇಕು ಎಂದು ಮಹಾತ್ಮ ಗಾಂಯವರು ಹೇಳಿದರು.

ಸ್ವಲ್ಪ ವರ್ಷದಲ್ಲಿ ಇನ್ನೊಂದು ಗಾಂಗೆ ಶಿಫ್ಟ್ ಆದ್ರು, ಪ್ರಜಾಪ್ರಭುತ್ವ ಅಪ್ಪಿಕೊಂಡ ಗಾಂೀಜಿ ಒಂದು ಕಡೆ ಡಿಕ್ಟೇಕ್ಟರ್ ಆಗಿದ್ದ ಗಾಂ ಇನ್ನೊಂದು ಕಡೆ ಈ ಗೊಂದಲದಲ್ಲಿ ದೇಶವನ್ನು ಆಳಿದರು. ಎಲ್ಲಾ ಸಮಸ್ಯೆಗಳ ಬಳುವಳಿ ನಾವು ಪಡೆದುಕೊಂಡು ಸ್ವಚ್ಛಗೊಳಿಸುವ ಜವಾಬ್ದಾರಿ ನಮ್ಮ ಹೆಗಲ ಮೇಲೆ ಬಿದ್ದಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

Facebook Comments

Sri Raghav

Admin