ಪಕ್ಷ ನಿಷ್ಠರಿಗೆ ಮಹತ್ವದ ಖಾತೆ : ಸಿಎಂ ಸಮರ್ಥನೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಆ.7-ಕೆಲವು ಬದಲಾವಣೆ ಮಾಡುವ ಕಾರಣಕ್ಕಾಗಿಯೇ ಪಕ್ಷ ನಿಷ್ಠರಿಗೆ ಕೆಲವು ಮಹತ್ವದ ಖಾತೆಗಳನ್ನು ನೀಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಿರುವುದನ್ನು ಸಮರ್ಥಿಸಿಕೊಂಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬದಲಾವಣೆ ತರಲು ಪಕ್ಷದ ಪ್ರಮುಖರ ಜೊತೆ ಚರ್ಚಿಸಿ ಈ ನಿರ್ಧಾರಕ್ಕೆ ಬರಲಾಯಿತು ಎಂದು ಹೇಳಿದರು.

ಹೊಸಬರಿಗೆ ದೊಡ್ಡ ಖಾತೆ ನೀಡಿರುವ ಮುನ್ಸೂಚನೆಯೇ ಬದಲಾವಣೆಗಾಗಿ. ಅದಕ್ಕಾಗಿ ಅವರಿಗೆ ಅಂತಹ ಖಾತೆಯನ್ನು ನೀಡಲಾಗಿದೆ. ಕೆಲವು ಸಣ್ಣಪುಟ್ಟ ಅಸಮಾಧಾನಗಳಿದ್ದರೆ ಅವರನ್ನು ಕರೆದು ಮಾತನಾಡಿ ಸಮಸ್ಯೆಯನ್ನು ಇತ್ಯರ್ಥಪಡಿಸುತ್ತೇನೆ ಎಂದು ಹೇಳಿದರು.

ಸಚಿವ ಆನಂದ್‍ಸಿಂಗ್ ಮತ್ತು ಶಾಸಕ ಪ್ರೀತಂಗೌಡ ಅಸಮಾಧಾನಗೊಂಡಿದ್ದರೆಂಬ ಮಾಹಿತಿ ಇದೆ. ಅವರಿಬ್ಬರು ನನಗೆ ಅತ್ಯಂತ ಆತ್ಮೀಯರು. ಕರೆದು ಮಾತನಾಡುತ್ತೇನೆ. ನಾನು ಮಾಜಿ ಪ್ರಧಾನಿ ದೇವೇಗೌಡರ ಮನೆಗೆ ಹೋಗಿದ್ದಕ್ಕೆ ಪ್ರೀತಂಗೌಡಗೆ ಸಚಿವ ಸ್ಥಾನ ಕೈತಪ್ಪಿತು ಎಂಬುದು ಸರಿಯಲ್ಲ ಎಂದು ಹೇಳಿದರು.

Facebook Comments