ಸಿಎಂ ಬೊಮ್ಮಾಯಿ ಬೆನ್ನುಬಿದ್ದ ಸಚಿವಾಕಾಂಕ್ಷಿಗಳು..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜು.29- ಸಚಿವ ಸಂಪುಟ ರಚನೆ ಸುಳಿವು ಖಚಿತವಾಗುತ್ತಿದ್ದಂತೆ ಸಚಿವ ಆಕಾಂಕ್ಷಿಗಳ ದಂಡು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ನಿವಾಸಕ್ಕೆ ದಾಂಗುಡಿ ಇಡುತ್ತಿದ್ದಾರೆ.  ಶಾಸಕರಾದ ಎಂ.ಪಿ.ರೇಣುಕಾಚಾರ್ಯ, ಮುರುಗೇಶ್ ನಿರಾಣಿ, ರಾಜುಗೌಡ ನಾಯಕ್, ಅರಗಜ್ಞಾನೇಂದ್ರ, ಕೊಟಾ ಶ್ರೀನಿವಾಸ್ ಪೂಜಾರಿ ಸೇರಿದಂತೆ ಅನೇಕ ಅಕಾಂಕ್ಷಿಗಳು ತಮ್ಮನ್ನು ಸಂಪುಟಕ್ಕೆ ಪರಿಗಣಿಸಬೇಕೆಂದು ಮನವಿ ಮಾಡುತ್ತಿದ್ದಾರೆ.

ಕಳೆದ ಬಾರಿಯೇ ನಮಗೆ ಅವಕಾಶ ಸಿಗಬೇಕಿತ್ತು. ವಲಸಿಗರಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಿದ್ದರಿಂದ ಸಚಿವರಾಗುವ ಎಲ್ಲ ಅರ್ಹತೆಗಳಿದ್ದರೂ ಅವಕಾಶ ವಂಚಿತರಾಗಿದ್ದೆವು. ಈ ಬಾರಿ ನಮ್ಮನ್ನು ಸಂಪುಟಕ್ಕೆ ತೆಗೆದುಕೊಳ್ಳಬೇಕೆಂದು ಪರೋಕ್ಷವಾಗಿ ಒತ್ತಡದ ತಂತ್ರ ಅನುಸರಿಸುತ್ತಿದ್ದಾರೆ.

ಮುಂದಿನ ವಾರ ಯಾವುದೇ ಸಂದರ್ಭದಲ್ಲೂ ಸಂಪುಟ ರಚನೆಯಾಗುವ ಸಾಧ್ಯತೆ ಇರುವುದರಿಂದ ಈ ಬಾರಿಯು ಎಲ್ಲಿ ಸ್ಥಾನ ಕೈ ತಪ್ಪಬಹುದು ಎಂಬ ಆತಂಕಕ್ಕೆ ಒಳಗಾಗಿದ್ದಾರೆ.ಹೀಗಾಗಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರನ್ನು ಸಹ ಭೇಟಿಯಾಗಿ ನಮ್ಮನ್ನು ಸಂಪುಟಕ್ಕೆ ತೆಗೆದುಕೊಳ್ಳಲು ಸಿಎಂಗೆ ನಿರ್ದೇಶನ ನೀಡುವಂತೆ ಗೋಗರೆಯುತ್ತಿದ್ದಾರೆ.

ಇಂದು ಕೂಡ ಕಾವೇರಿ ನಿವಾಸ ಹಾಗೂ ಬೊಮ್ಮಾಯಿ ಅವರ ಆರ್‍ಟಿನಗರದಲ್ಲಿರುವ ನಿವಾಸಕ್ಕೂ ಆಕಾಂಕ್ಷಿಗಳ ದಂಡು ಬರುತ್ತಲೇ ಇದೆ. ಕೊನೆ ಕ್ಷಣದಲ್ಲಿ ಯಾರಿಗೆ ಅದೃಷ್ಟ ಖುಲಾಯಿಸುತ್ತದೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

Facebook Comments