ಕುತೂಹಲ ಮೂಡಿಸಿದೆ ಸಿಎಂ ಬಿಎಸ್‍ವೈ-ಎಂ.ಬಿ.ಪಾಟೀಲ್ ಭೇಟಿ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜು.9- ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಸಚಿವ ಎಂ ಬಿ.ಪಾಟೀಲ್ ಅವರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಇಂದು ಭೇಟಿ ಮಾಡಿರುವುದು ರಾಜ್ಯ ರಾಜಕೀಯದಲ್ಲಿ ಕುತೂಹಲ ಸೃಷ್ಟಿಸಿದೆ. ಮುಖ್ಯಮಂತ್ರಿಗಳ ಅಧಿಕೃತ ನಿವಾಸ ಕಾವೇರಿಗೆ ಆಗಮಿಸಿದ ಎಂ. ಬಿ ಪಾಟೀಲ್, ಸಿಎಂ ಯಡಿಯೂರಪ್ಪ ಆತ್ಮೀಯವಾಗಿ ಬರಮಾಡಿಕೊಂಡು ಸೌಹಾರ್ದಯುತವಾಗಿ ಕೆಲಕಾಲ ಮಾತುಕತೆ ನಡೆಸಿದ್ದಾರೆ.

ಪ್ರತ್ಯೇಕ ಲಿಂಗಾಯತ ಧರ್ಮದ ಹೋರಾಟದ ನಂತರ ಕಾಂಗ್ರೆಸ್‍ನಲ್ಲಿ ಮೂಲೆ ಗುಂಪಾಗುತ್ತಿರುವ ಎಂ.ಬಿ ಪಾಟೀಲ್‍ರನ್ನು ಸೆಳೆಯಲು ಬಿಜೆಪಿ ಯತ್ನಿಸುತ್ತಿದೆ ಎಂಬ ಮಾತಿಗೆ ಈ ಭೇಟಿ ಪುಷ್ಟಿ ನೀಡಿದಂತಿದೆ. ಎಂ.ಬಿ.ಪಾಟೀಲರ್‍ನ್ನು ಬಿಜೆಪಿಗೆ ಕರೆತರಲು ಶಂಕರ್ ಬಿದರಿ ಅವರ ಮೂಲಕ ಮೊದಲ ಬಾರಿ ಬಿಜೆಪಿಗೆ ಪ್ರಯತ್ನಗಳು ನಡೆದಿದ್ದವು. ನಂತರ ವಿಧಾನಸಭೆ ಚುನಾವಣೆ ನಂತರವೂ ಮತ್ತೊಮ್ಮೆ ಬಿಜೆಪಿ ಸೇರ್ಪಡೆ ಸುದ್ದಿ ಹರಿದಾಡಿತ್ತು.

ಆಗ ಎಂ.ಬಿ. ಪಾಟೀಲ್ ಸ್ಪಷ್ಟೀಕರಣ ನೀಡಿ, ನನ್ನನ್ನು ಬಿಜೆಪಿಯವರಾರು ಸಂಪರ್ಕಿಸಿಲ್ಲ. ಬಿಜೆಪಿ ಸೇರುವ ಸುದ್ದಿ ಸತ್ಯಕ್ಕೆ ದೂರ ಎಂದು ಹೇಳಿದ್ದರು. ಇದೀಗ ಸ್ವತಃ ಮುಖ್ಯಮಂತ್ರಿ ಯಡಿಯೂರಪ್ಪ ನಿವಾಸಕ್ಕೆ ಭೇಟಿ ಕೊಟ್ಟಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

Facebook Comments