ರಾಜ್ಯದಲ್ಲಿ ಲಾಕ್​ಡೌನ್ ಅನಿವಾರ್ಯ, ಅಣ್ಣಮ್ಮನ ಮೊರೆಹೋದ ಸಿಎಂ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು : ಕೋವಿಡ್ ಸೋಂಕು ಹಬ್ಬುವುದನ್ನು ತಡೆಗಟ್ಟಲು ರಾಜ್ಯ ಸರಕಾರ ಜಾರಿಗೆ ತಂದಿರುವ ಲಾಕ್ ಡೌನ್ ನಿಯಮಗಳನ್ನು ಜನತೆ ಕಟ್ಟುನಿಟ್ಟಾಗಿ ಪಾಲನೆ ಮಾಡದಿದ್ದಲ್ಲಿ, ಅನಿವಾರ್ಯವಾಗಿ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಎಚ್ಚರಿಸಿದ್ದಾರೆ.

ಗಾಂಧಿನಗರದಲ್ಲಿರುವ ಇತಿಹಾಸ ಪ್ರಸಿದ್ಧ ಅಣ್ಣಮ್ಮ ದೇವಸ್ಥಾನಕ್ಕೆ ಭೇಟಿ ಕೊಟ್ಟು ವಿಶೇಷ ಪೂಜೆ ಸಲ್ಲಿಸಿದ ಬಳಿಕ ಅವರು ಸುದ್ದಿ ಗಾರರ ಜೊತೆ ಮಾತನಾಡಿದರು. ನಾನು ಈಗಲೂ ಜನತೆಯಲ್ಲಿ ಮನವಿ ಮಾಡಿಕೊಳ್ಳುವುದೆನದರೆ, ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸುವುದು, ಸ್ಯಾನಿಟೈಜರ್ ಬಳಕೆ ಹಾಗೂ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.

ಅನೇಕ ಕಡೆ ಸಾರ್ವಜನಿಕರು ನಿಯಮಗಳನ್ನು ಸರಿಯಾಗಿ ಪಾಲನೆ ಮಾಡುತ್ತಿಲ್ಲ ಎಂಬ ಆಪಾದನೆಗಳು ಕೇಳಿ ಬರುತ್ತಿದೆ. ಇದೇ ರೀತಿ ಮುಂದುವರೆದರೆ, ನಾವು ಕೂಡ ಅನಿವಾರ್ಯವಾಗಿ ಬಿಗಿಯಾದ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ಕೊಟ್ಟರು.ಕೊರೊನಾ ಸೋಂಕು ನಮ್ಮನ್ನು ಬಿಟ್ಟು ಅದಷ್ಟು ಬೇಗ ಹೋಗಬೇಕು ಎನ್ನುವುದಾದರೆ,ಮೊದಲು ನಿಯಮಗಳನ್ನು ಪಾಲನೆ ಮಾಡಿ ಎಂದು ಹೇಳಿದರು.

ಕೊರೊನಾ ನಿಯಂತ್ರಣಕ್ಕೆ ಇನ್ನು ‌ಬಿಗಿ ಕ್ರಮ ಅನಿವಾರ್ಯ ಇದೆ. ಜನತಾ ಕಪ್ಯೂ ಯಾರು ಸರಿಯಾಗಿ ಪಾಲನೆ ಮಾಡುತ್ತಾ ಇಲ್ಲ.ಹೀಗಾದರೆಲಾಕ್ ಡೌನ್ ಅನಿವಾರ್ಯ ಆಗಬಹುದು ಎಂದರು. ಅಧಿಕಾರಿಗಳು, ತಜ್ಞರು ಹಾಗೂ ಸಚಿವರ ಜೊತೆ ಮಾತುಕತೆ ನಡೆಸಲಾಗುವುದು.ಅಂತಿಮವಾಗಿ ಏನು ನಿರ್ಧಾರ ತೆಗೆದುಕೊಳ್ಳಬೇಕು ಎಂಬುದನ್ನು ಸರಕಾರ ತೀಮಾ9ನಿಸಲಿದೆ ಎಂದು ಸಿ.ಎಂ.ತಿಳಿಸಿದರು.

ದಿನೇ ದಿನೇ ಪ್ರಕರಣಗಳು ಹೆಚ್ಚಾಗುತ್ತಿವೆ.ಹೀಗಾಗಿ ಇಂದು ಮತ್ತೊಂದು ಮಹತ್ವದ ಸಭೆ ನಡೆಸಲಾಗುವುದು.ಜನರ ಪರ ನಾವು ಇದ್ದೇವೆ ಎಂದು ಹೇಳಿದರು.

# ಜಮೀರ್ ವಿರುದ್ಧ ಅಸಮಾಧಾನ : 
ಸಂಸದ ತೇಜಸ್ವಿ ಸೂರ್ಯ ಹೆಚ್ಚು ರಿಸ್ಕ್ ತೆಗೆದುಕೊಂಡು ‌ ಹಾಸಿಗೆ ಹಂಚಿಕೆ ಅವ್ಯವಹಾರ ಬಯಲಿಗೆಳೆದಿದ್ದಾರೆ.ಈ ಬಗ್ಗೆ ಜಮೀರ್ ಅಹಮದ್ ಹಗುರ ಮಾತು ನಿಲ್ಲಿಸಬೇಕು ಎಂದು ತಾಕೀತು ಮಾಡಿದರು.ಅವರು ಈ ಪ್ರಕರಣವನ್ನು ಬಯಲು ಮಾಡಿದ್ದೇ ಮಹಾಆಪರಾಧ ಎಂಬಂತೆ ಮಾತನಾಡುವುದು ಸರಿಯಲ್ಲ. ಇದರ ಬಗ್ಗೆ ತೇಜಸ್ವಿ ಸೂಯ9 ಬಳಿ‌ ನಾನೇ ಕರೆಯಿಸಿ‌ ಸಂಪೂರ್ಣ ಮಾಹಿತಿ ಪಡೆದಿದ್ದೇನೆ.ಅವರ ಬಗ್ಗೆ ಹಗುರ ಮಾತು‌ ಸಲ್ಲದು ಎಂದು ಆಕ್ಷೇಪಿಸಿದರು.

ಜನರು ಸಿಎಂ ನಿವಾಸ ಅಥವಾ ವಿಧಾನಸೌಧ ಬಳಿ ಬರುವುದು ಸರಿ ಅಲ್ಲ.ಇದು ‌ಸರಿಯಾದ ವ್ಯವಸ್ಥೆ ಇಲ್ಲ ,ಕ್ರಮ ಮಾಡಲು ಪ್ರಯತ್ನ ಮಾಡುತ್ತೇವೆ. ಯಾರೊಬ್ಬರೂ ‌ಈ ರೀತಿ ಬರುವುದು ಬೇಡ ಎಂದು ‌ಮನವಿ ಮಾಡಿದರು

ಯಾರೊಬ್ಬರೂ ವಿಧಾನಸೌಧಕ್ಕೆ ಬರುವುದು ಬೇಡ ಅಧಿಕಾರಿಗಳ ಗಮನಕ್ಕೆ ತನ್ನಿ.ನಿಮ್ಮ ಸಮಸ್ಯೆಏನೇ ಇದ್ದರೂ ಪರಿಹಾರ ಮಾಡುತ್ತಾರೆ ಎಂದು ಹೇಳಿದರು. ಇಂದು ಶುಕ್ರವಾರ ದಿನವಾದ ಕಾರಣ,ಅಣ್ಣ ದೇವಾಸ್ಥಾನಕ್ಕೆ ಭೇಟಿ ನೀಡಿದ್ದೇನೆ.

ಕೋವಿಡ್ ಸಂಕಷ್ಟದಿಂದ ಪಾರು ಮಾಡುವಂತೆ ಅಣ್ಣಮ್ಮ ತಾಯಿಗೆ ಪ್ರಾರ್ಥನೆ ಮಾಡಿದ್ದೇನೆ .ಕೊರೋನಾ ಹೋಗಲಿ ಎಂದು ತಾಯಿ ಪ್ರಾರ್ಥನೆ ಮಾಡಲು ಬಂದಿದ್ದೇ.ಈಗಿರುವ ಸಮಸ್ಯೆಗಳು ದೂರ ಆಗುವ ವಿಶ್ವಾಸ ನನಗೆ ಬಂದಿದೆ ಎಂಬ ಆತ್ಮವಿಶ್ವಾಸವನ್ನು ವ್ಯಕ್ತಪಡಿಸಿದರು.

Facebook Comments

Sri Raghav

Admin