ನೀರಿನ ಬಿಲ್ ಪಾವತಿದ ‘ಮಹಾ’ ಸಿಎಂ ನಿವಾಸ ಸುಸ್ತಿದರ ಪಟ್ಟಿಗೆ..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ,ಜೂ.24-ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ಅಧಿಕೃತ ನಿವಾಸ ವರ್ಷವನ್ನು ಸಾಲಸುಸ್ತಿದಾರರ (ಡಿಫಾಲ್ಟ್ರಿ ಕೆಟಗರಿ) ಪಟ್ಟಿಗೆ ಸೇರಿಸಲಾಗಿದೆ.

ಮುಖ್ಯಮಂತ್ರಿಗಳು 7,44,981 ರೂ. ನೀರಿನ ಬಿಲ್ ಪಾವತಿ ಮಾಡದ ಹಿನ್ನಲೆಯಲ್ಲಿ ಬೃಹನ್‍ಮುಂಬೈ ಮುನ್ಸಿಪಲ್ ಕಾಫೋರೇರ್ಷನ್ ಈ ಕ್ರಮ ಕೈಗೊಂಡಿದೆ ಎಂದು ಆರ್‍ಟಿಐ ಕಾರ್ಯಕರ್ತ ಶಕೀಲ್ ಅಹಮ್ಮದ್ ಸಲ್ಲಿಸಿದ ಅರ್ಜಿಯಿಂದ ಈ ಸಂಗತಿ ಬೆಳಕಿಗೆ ಬಂದಿದೆ.

ದೇವೇಂದ್ರ ಫಡ್ನವೀಸ್ ಅಲ್ಲದೆ ರಾಜ್ಯದ ಇತರೆ ಮಂತ್ರಿಗಳಾದ ಸುಧೀರ್ ಮುಂಗಂಟಿವರ್, ವಿನೋದ್ ತವ್ಡೆ, ಪಂಕಜ ಮುಂಡೆ, ಏಕನಾಥ್ ಶಿಂಧೆ ಮತ್ತು ರಾಮದಾಸ್ ಕದಂ ಅವರು ಕೂಡ ಸಾಲಸುಸ್ತಿದಾರರ ಪಟ್ಟಿಯಲಿದ್ದು, 45 ಲಕ್ಷ ರೂ. ಬಿಲ್ ಪಾವತಿಸಿಲ್ಲ.  2001ರಿಂದ ಈವರೆಗೂ ರಾಜ್ಯ ಸರ್ಕಾರದ ಅಧಿಕೃತ ಅತಿಥಿಗೃಹ ಸಹ್ಯಾದ್ರಿಯಿಂದ 12,04,390 ರೂ. ಬಾಕಿ ಇದೆ.

ಸಾಮಾನ್ಯ ಜನರು ಬಿಲ್ ಪಾವತಿ ಮಾಡಲು ವಿಳಂಬ ಮಾಡಿದಾಗ ಅಥವಾ ಬಾಕಿ ಉಳಿಸಿಕೊಂಡರೆ ನೀರಿನ ಸಂಪರ್ಕವನ್ನು ಕಡಿತಗೊಳಿಸುತ್ತೇವೆ. ಆದರೆ ಮುಖ್ಯಮಂತ್ರಿ ಮತ್ತು ಸಚಿವರುಗಳೇ ಈ ರೀತಿ ಬಿಲ್ ಪಾವತಿಯನ್ನು ಬಾಕಿ ಉಳಿಸಿಕೊಂಡರೆ ನಾವು ಸಾರ್ವಜನಿಕರಿಂದ ನಿರೀಕ್ಷೆಸುವುದಾದರೂ ಏನು? ಎಂದು ಶೇಖ್ ಪ್ರಶ್ನಿಸಿದ್ದಾರೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ