ನಾವು ಕದ್ದು ಮುಚ್ಚಿ ವಾಮಾಚಾರ-ಯಾಗ ಮಾಡಿಸೋದಿಲ್ಲ : ಸಿಎಂ

ಈ ಸುದ್ದಿಯನ್ನು ಶೇರ್ ಮಾಡಿ

cm
ಚಿಕ್ಕಮಗಳೂರು, ಡಿ.7- ಸರ್ಕಾರದ ಬಗ್ಗೆ ಕಳೆದ ಏಳು ತಿಂಗಳಿನಿಂದ ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ. ಪತ್ರಿಕೆಗಳಲ್ಲಿ ಸರ್ಕಾರ ಬೀಳುತ್ತದೆ ಎಂದು ಹೇಳಿಕೆ ನೀಡುತ್ತಿದ್ದಾರೆ. ಟಿವಿ ಚಾನೆಲ್‍ಗಳಲ್ಲಿ ಈವರೆಗೆ ಸುಮಾರು 2 ಸಾವಿರ ಎಪಿಸೋಡ್‍ಗಳು ಬಂದಿರಬಹುದು ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಮ್ಮ ವಿರೋಧಿಗಳಿಗೆ ಟೀಕಿಸಿದರು.

ಶೃಂಗೇರಿಗೆ ಆಗಮಿಸಿದ ಅವರು ಬೆಳಗಾವಿಯಲ್ಲಿ ನಡೆಯಲಿರುವ ಅಧಿವೇಶನ ಸುಸೂತ್ರವಾಗಿ ನಡೆಯಲಿ ಎಂದು ಶ್ರೀಶಾರದಾಂಬೆ ದರ್ಶನ ಪಡೆದು ಶ್ರೀಮಠದ ಗುರುಗಳ ಆಶೀರ್ವಾದ ಪಡೆದಿದ್ದೇನೆ. ನಮ್ಮ ಸರ್ಕಾರದ ಬಗ್ಗೆ ಈ ರೀತಿಯ ಹೇಳಿಕೆಗಳು ಅನುಮಾನಕ್ಕೆ ಕಾರಣವಾಗುತ್ತಿದೆ. ಇದರ ಬಗ್ಗೆ ಜನರು ಯಾವುದೇ ರೀತಿಯಲ್ಲಿ ತಲೆಕೆಡಿಸಿಕೊಳ್ಳಬಾರದು. ಇದು ನಿಮ್ಮದೇ ಸರ್ಕಾರ ಎಂದರು.

ನಾವು ಕದ್ದು ಮುಚ್ಚಿ ವಾಮಾಚಾರ ಯಾಗ ಮಾಡಿಸೋದಿಲ್ಲ ಎಂದು ಹೇಳಿದ ಕುಮಾರಸ್ವಾಮಿ, ಮೊದಲಿನಿಂದಲೇ ಶಾರದಾ ಪೀಠದ ಮೇಲೆ ನಮ್ಮ ಕುಟುಂಬಕ್ಕೆ ನಂಬಿಕೆ ಇದೆ. ಯಾವುದೇ ಸಮಸ್ಯೆಗಳು ಎದುರಾದಾಗ ದೇವಿಯ ದರ್ಶನ ಪಡೆದು ಸಮಸ್ಯೆ ಇತ್ಯರ್ಥಕ್ಕೆ ಬೇಡಿಕೊಂಡರೆ ಸಮಸ್ಯೆ ಈಡೇರುತ್ತದೆ ಹಾಗೂ ಪರಿಹಾರವು ಸಿಕ್ಕಿದೆ ಎಂದು ತಿಳಿಸಿದರು.

ಸರ್ಕಾರದಲ್ಲಿ ಹಣದ ಕೊರತೆ ಇಲ್ಲ. ನಿಗದಿತ ಕಾರ್ಯಕ್ರಮಗಳಿಗೆ ಹಣವನ್ನು ಬಿಡುಗಡೆ ಮಾಡಲಾಗುತ್ತಿದೆ. ಇರುವ ಹಣದಲ್ಲಿ ಶಾಶ್ವತವಾದ ಕಾರ್ಯಕ್ರಮಗಳಿಗೂ ಕೂಡ ಹಣವನ್ನು ಬಳಕೆ ಮಾಡಲಾಗುವುದು. ವಿದ್ಯುತ್, ಕುಡಿಯುವ ನೀರಿನ ಸಮಸ್ಯೆಗಳ ನಿವಾರಣೆಗೆ ಆದ್ಯತೆ ನೀಡಲಾಗುವುದು ಎಂದರು.

ರೈತರು ಬೆಳೆದ ಅಡಿಕೆ ಕಬ್ಬುಗಳನ್ನು ಉಳಿಸಲು ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿದ್ದು , ಸ್ವಯಂ ಉದ್ಯೋಗದ ತರಬೇತಿ ಜೊತೆಗೆ ಅವರು ಉತ್ಪಾದಿಸಿದ ವಸ್ತುಗಳ ಮಾರಾಟಕ್ಕೆ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಲಾಗುವುದು. 5 ಲಕ್ಷದವರೆಗೆ ಬಡ್ಡಿ ರಹಿತ ಸಾಲ ನಂತರ ಶೇ.3ರ ಬಡ್ಡಿಯಲ್ಲಿ ಮತ್ತೆ 5 ಲಕ್ಷ ಸಾಲ ನೀಡಲಾಗುವುದು. ಇದಕ್ಕೆ ಕಾಯಕ ಎಂದು ಹೆಸರು ಇಡಲಾಗಿದ್ದು , ಇದಕ್ಕೆ ಡಿಸೆಂಬರ್ ಕೊನೆ ವಾರದಲ್ಲಿ ಯೋಜನೆ ಜಾರಿಗೊಳ್ಳಲಿದೆ. ಶ್ರೀ ಶಿವಕುಮಾರ ಸ್ವಾಮೀಜಿ ಅವರ ಆರೋಗ್ಯದ ಬಗ್ಗೆ ಪ್ರತಿ ಕ್ಷಣವು ಮಾಹಿತಿ ಪಡೆಯುತ್ತಿದ್ದೇನೆ. ಅವರ ಆರೋಗ್ಯ ಚೇತರಿಕೆ ಕಂಡಿದೆ. ಆತಂಕ ಪಡುವುದು ಬೇಡ ಎಂದು ತಿಳಿಸಿದರು.

ಸ್ಥಳೀಯ ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ, ವಿಧಾನ ಪರಿಷತ್ ಸದಸ್ಯರಾದ ಎಸ್.ಎಲ್.ಭೋಜೇಗೌಡ, ಎಸ್.ಎಲ್.ಧರ್ಮೇಗೌಡ, ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್. ಜಿಲ್ಲಾಧಿಕಾರಿ, ಪೊಲೀಸ್ ಅಧಿಕಾರಿಗಳು ಇದ್ದರು.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin