ತಮ್ಮಲ್ಲಿರುವ ಖಾತೆಗಳ ಹೊರೆ ಇಳಿಸಿಕೊಳ್ತಾರಾ ಸಿಎಂ ಕುಮಾರಸ್ವಾಮಿ..!?

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜೂ.14-ಖಾತೆಗಳ ಹೊರೆ ಹೊತ್ತಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಮ್ಮ ಮೇಲಿರುವ ಒತ್ತಡವನ್ನು ಕಡಿಮೆ ಮಾಡಿಕೊಳ್ಳುತ್ಥಾರಾ ಎಂಬ ಪ್ರಶ್ನೆ ಈಗ ಉದ್ಭವಿಸಿದೆ.

ಪ್ರಮುಖ ಖಾತೆಗಳನ್ನು ತಮ್ಮಲ್ಲೇ ಉಳಿಸಿಕೊಂಡಿರುವ ಕುಮಾರಸ್ವಾಮಿ ಅವುಗಳನ್ನು ಸಮರ್ಥವಾಗಿ ನಿಭಾಯಿಸಲು ಆಯಾ ಇಲಾಖೆಗಳ ಅಧಿಕಾರಿಗಳನ್ನು ಅವಲಂಬಿಸಿದ್ದಾರೆ.ಅಧಿಕ ಒತ್ತಡೆ ಶಿಕ್ಷಣ, ಇಂಥನ ಇತ್ಯಾದಿ ಪ್ರತಿದಿನದ ಕಾರ್ಯನಿರ್ವಹಣೆಯ ಬಹು ಮುಖ್ಯ ಇಲಾಖೆಗಳಾಗಿವೆ.

ಪ್ರಸ್ತುತ ಮುಖ್ಯಮಂತ್ರಿ ಅವರ ಬಳಿ ಬರೋಬ್ಬರಿ 13 ಮುಖ್ಯ ಖಾತೆಗಳಿವೆ. ಸಾಮಾನ್ಯವಾಗಿ ಆರ್ಥಿಕ ಖಾತೆ ಮತ್ತು ಗುಪ್ತಚರ ಖಾತೆಗಳನ್ನು ಮುಖ್ಯಮಂತ್ರಿಗಳ ತಮ್ಮಲ್ಲೇ ಉಳಿಸಿಕೊಳ್ಳುವುದು ಬಹು ಹಿಂದಿನಿಂದಲೂ ಅನುಸರಿಸುತ್ತಿರುವ ವಾಡಿಕೆ.

ಆದರೆ ಈಗ, ಕುಮಾರಸ್ವಾಮಿ ಅವರ ಬಳಿ ಕಾನೂನು, ಸಂಸದೀಯ ವ್ಯವಹಾರ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ, ಅಬಕಾರಿ, ಸಣ್ಣ ಉಳಿತಾಯ ಮತ್ತು ಸಾಂಸ್ಥಿಕ ಹಣಕಾಸು, ವಾರ್ತಾ ಮತ್ತು ಸಾವಜನಿಕ ಸಂಪರ್ಕ,ಯೊಜನೆ ಮತ್ತು ಸಾಂಖ್ಯಿಕ, ಸಾರ್ವಜನಿಕ ಉದ್ದಿಮೆ ಇತ್ಯಾದಿ ಖಾತೆಗಳಿವೆ.

ಇಷ್ಟೊಂದು ಖಾತೆಗಳನ್ನು ಹೊಂದಿರುವ ಮುಖ್ಯಮಂತ್ರಿ ದೇಶದಲ್ಲಿದ್ದಾರೆ ಎಂದರೆ ಅವರು ನಮ್ಮ ರಾಜ್ಯದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಒಬ್ಬರೇ ಎಂಬ ಹೆಗ್ಗಳಿಕೆಯೂ ಇದೆ.

# ನೂತನ ಸಚಿವರಾದ ನಾಗೇಶ್‍ಗೆ ಶಿಕ್ಷಣ-ಶಂಕರ್‌ಗೆ ಪೌರಾಡಳಿತ ಖಾತೆ..?
ಇಂದು ಪ್ರಮಾಣ ವಚನ ಸ್ವೀಕರಿಸಿರುವ ನೂತನ ಸಚಿವರಿಗೆ ಸಂಜೆಯೊಳಗೆ ಖಾತೆ ಹಂಚಿಕೆಯಾಗುವ ಸಾಧ್ಯತೆಗಳಿದ್ದು, ಹೊಸದಾಗಿ ಸಚಿವರಾಗಿರುವ ಎಚ್.ನಾಗೇಶ್ ಅವರಿಗೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಖಾತೆ, ರಾಣೆಬೆನ್ನೂರಿನ ಶಾಸಕ ಆರ್.ಶಂಕರ್ ಅವರಿಗೆ ಪೌರಾಡಳಿ ಖಾತೆ ಸಿಗುವ ನಿರೀಕ್ಷೆಗಳಿವೆ.

ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಖಾತೆ ಜೆಡಿಎಸ್ ಪಾಲಿಗಿದ್ದು, ಈ ಮೊದಲು ಬಿಎಸ್‍ಪಿಯಿಂದ ಶಾಸಕರಾಗಿದ್ದ ಮಹೇಶ್ ಅವರು ಜವಾಬ್ದಾರಿ ನಿಭಾಯಿಸುತ್ತಿದ್ದರು. ಜೆಡಿಎಸ್ ಖೋಟಾದಲ್ಲಿ ಸಚಿವರಾಗಿರುವ ನಾಗೇಶ್‍ಗೆ ಶಿಕ್ಷಣ ಖಾತೆ ಸಿಗಬಹುದು ಎಂದು ಹೇಳಲಾಗಿದೆ.

ಶಂಕರ್ ಅವರು ಈ ಮೊದಲು ಅರಣ್ಯ ಸಚಿವರಾಗಿದ್ದರು. ಎರಡನೇ ಹಂತದ ಸಂಪುಟ ವಿಸ್ತರಣೆಯಲ್ಲಿ ಸತೀಶ್ ಜಾರಕಿ ಹೊಳಿ ಅವರನ್ನು ಸೇರಿಸಿಕೊಂಡು ಅರಣ್ಯ ಖಾತೆ ನೀಡಲಾಗಿದೆ. ಆ ಸಂದರ್ಭದಲ್ಲಿ ಶಂಕರ್ ಮತ್ತು ರಮೇಶ್ ಜಾರಕಿ ಹೊಳಿ ಅವರನ್ನು ಕೈ ಬಿಡಲಾಗಿತ್ತು.

ಇತ್ತೀಚೆಗೆ ನಿಧನರಾದ ಕಾಂಗ್ರೆಸ್ ಸಿ.ಎಸ್.ಶಿವಳ್ಳಿ ಬಳಿ ಇದ್ದ ಪೌರಾಡಳಿತ ಖಾತೆಯನ್ನು ಕಾಂಗ್ರೆಸ್ ಖೋಟಾದಲ್ಲಿ ಸಚಿವರಾಗಿರುವ ಶಂಕರ್ ಅವರಿಗೆ ಸಿಗುವ ಸಾಧ್ಯತೆ ಇದೆ. ಮೊದಲ ಬಾರಿಗೆ ಶಾಸಕರಾದ ಈ ಇಬ್ಬರು ಪಕ್ಷೇತರರು ಕೊನೆಗೆ ಸಂಪುಟ ಸೇರುವ ಮೂಲಕ ಜಾಕ್‍ಪಾಟ್ ಹೊಡೆದಿದ್ದಾರೆ.

Facebook Comments

Sri Raghav

Admin