ಮುಖ್ಯಮಂತ್ರಿ ಪೊಲೀಸ್ ಪದಕಕ್ಕೆ ಬಾಜನರಾದ ಮಹಿಳಾ ಹೆಡ್‍ಕಾನ್‍ಸ್ಟೆಬಲ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ನ.21- ಸಿಐಡಿ ಸೈಬರ್ ಕ್ರೈಂ ವಿಭಾಗದ ಹೆಡ್‍ಕಾನ್‍ಸ್ಟೆಬಲ್ ಸಿ.ಶೋಭಾ ಅವರಿಗೆ ಮುಖ್ಯಮಂತ್ರಿ ಪೊಲೀಸ್ ಪದಕ ಲಭಿಸಿದೆ.
2018ನೇ ಸಾಲಿನ ಮುಖ್ಯಮಂತ್ರಿ ಪೊಲೀಸ್ ಪದಕವನ್ನು ಕರ್ನಾಟಕ ರಾಜ್ಯದಲ್ಲಿನ ಸೈಬರ್ ಅಪರಾಧಗಳನ್ನು ಭೇದಿಸುವಲ್ಲಿ ಪಡೆದುಕೊಂಡಿರುವ ಪ್ರಥಮ ಮಹಿಳಾ ಹೆಡ್‍ಕಾನ್‍ಸ್ಟೆಬಲ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

1999ನೇ ಸಾಲಿನಲ್ಲಿ ಸಿವಿಲ್ ಪೊಲೀಸ್ ಕಾನ್‍ಸ್ಟೆಬಲ್ ಹುದ್ದೆಗೆ ಕ್ರೀಡಾಕೋಟಾದಡಿ ನೇಮಕಗೊಂಡು ಪೊಲೀಸ್ ಇಲಾಖೆಗೆ ಸೇರ್ಪಡೆಗೊಂಡರು.
ಇವರು ಧಾರವಾಡ ಜಿಲ್ಲೆಯ ಸಾಧನಕೇರಿ ಪೊಲೀಸ್ ತರಬೇತಿ ಕಾಲೇಜಿನಲ್ಲಿ ಮೂಲ ತರಬೇತಿಯನ್ನು ಹೊಂದಿದ್ದು, ಹೊರಾಂಗಣ ಮತ್ತು ಒಳಾಂಗಣ ವಿಷಯಗಳಲ್ಲಿ ಉತ್ತಮವಾಗಿ ತೇರ್ಗಡೆ ಹೊಂದಿ ಅತ್ಯುತ್ತಮ ಆಲ್‍ರೌಂಡ್ ಪ್ರಶಸ್ತಿಯನ್ನು ಪಡೆದಿರುತ್ತಾರೆ.

ಮೂಲ ತರಬೇತಿಯ ನಂತರ ಕೆಎಸ್‍ಪಿಎಸ್‍ಸಿಬಿ ಬೆಂಗಳೂರಿನಲ್ಲಿ ಕ್ರೀಡಾ ತರಬೇತಿ ಪಡೆದು ಹಲವಾರು ರಾಷ್ಟ್ರೀಯ, ರಾಜ್ಯ ಮಟ್ಟದಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಸಿದ್ದಾರೆ. ನಂತರ ಸ್ಟಬ್‍ಡೇರಿ ಇಂಟಲಿಜೆನ್ಸ್ ಆಫ್ ಬ್ಯೂರ್ ಬೆಂಗಳೂರಿನಲ್ಲಿ 5 ವರ್ಷ ಕರ್ತವ್ಯ ನಿರ್ವಹಿಸಿ ಮೇಲಾಕಾರಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

2012ನೇ ಸಾಲಿನಲ್ಲಿ ಇವರು ಸಿಐಡಿಗೆ ವರ್ಗಾವಣೆಯಾಗಿದ್ದು, ಅಂದಿನಿಂದ ಇಲ್ಲಿವರೆಗೆ ಸೈಬರ್ ಕ್ರೈಂ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದಾರೆ. ಸಿ.ಶೋಭಾ ಅವರು ಶಿಸ್ತಿನ, ನಿಷ್ಟೆಯುಳ್ಳ ಮತ್ತು ಶ್ರಮವಹಿಸಿ ಕೆಲಸ ಮಾಡುವ ಪೊಲೀಸ್ ಅಕಾರಿ. ಇವರ ಕಳಂಕರಹಿತವಾಗಿ 20 ವರ್ಷಗಳ ಸೇವೆಯನ್ನು ಇಲಾಖೆಯಲ್ಲಿ ಸಲ್ಲಿಸಿದ್ದಾರೆ.

ಇವರ ಅತ್ಯುತ್ತಮ ಸೇವೆಯನ್ನು ಗುರುತಿಸಿ ನಿನ್ನೆ ನಡೆದ ಕಾರ್ಯಕ್ರಮದಲ್ಲಿ ರಾಜ್ಯದ ಸಿಐಡಿ ಘಟಕದ ಸೈಬರ್ ಕ್ರೈಂ ವಿಭಾಗದಲ್ಲಿರುವ ಇವರಿಗೆ 2018 ನೇ ಸಾಲಿನ ಮುಖ್ಯಮಂತ್ರಿಗಳ ಪೊಲೀಸ್ ಪದಕವನ್ನು ಮುಖ್ಯಮಂತ್ರಿಗಳು ಪ್ರದಾನ ಮಾಡಿದ್ದಾರೆ.

Facebook Comments