ಇಂದಿನಿಂದ ಲಸಿಕಾ ಉತ್ಸವ ಆರಂಭ : ಭಯ ಬಿಟ್ಟು ಲಸಿಕೆ ಪಡೆಯುವಂತೆ ಸಿಎಂ ಮನವಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಏ.11- ರಾಜ್ಯದಲ್ಲಿ ಇಂದಿನಿಂದ ಲಸಿಕಾ ಉತ್ಸವ ಆರಂಭವಾಗಿದೆ. ಭಯ, ಉದಾಸೀನ ಬಿಟ್ಟು ಹೆಚ್ಚಿನ ಸಂಖ್ಯೆಯಲ್ಲಿ ಅರ್ಹ ಫಲಾನುಭವಿಗಳು ಲಸಿಕೆ ಹಾಕಿಸಿಕೊಳ್ಳುವಂತೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ರಾಜ್ಯದ ಜನತೆಗೆ ಮನವಿ ಮಾಡಿಕೊಂಡಿದ್ದಾರೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಸುಧಾಕರ್ ಕೂಡ ಟ್ವೀಟ್ ಮಾಡಿದ್ದು, ರಾಜ್ಯದಲ್ಲಿ ಇಂದಿನಿಂದ ನಾಲ್ಕು ದಿನ ಕೊರೊನಾ ಲಸಿಕಾ ಉತ್ಸವ ಆಚರಿಸಲಾಗುತ್ತಿದೆ. 45 ವರ್ಷದ ಮೇಲ್ಪಟ್ಟ ಎಲ್ಲರೂ ತಪ್ಪದೇ ಲಸಿಕೆ ಹಾಕಿಸಿಕೊಳ್ಳುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ಬನ್ನಿ, ಕರೋನಾ ಯುಗಕ್ಕೆ ಅಂತ್ಯ ಹಾಡೋಣ ಎಂದು ಟ್ವೀಟ್ ಮಾಡಿರುವ ಅವರು, ಹೊರಹೋಗದಂತೆ ಮನೆಯೊಳಗೆ ಕೂಡಿ ಹಾಕಿದ ಕೊರೊನಾ ಕಹಿ ನೆನಪನ್ನು ಮರೆಯಿರಿ, ಮನೆ ಮಂದಿಗೆಲ್ಲ ಲಸಿಕೆಯ ಸಿಹಿ ಕೊಡಿಸಿ ಎಂದು ಜನತೆಯಲ್ಲಿ ಕೋರಿಕೊಂಡಿದ್ದಾರೆ.

ಇಂದಿನಿಂದ ಏ.14ರವರೆಗೆ 4 ದಿನ ಲಸಿಕಾ ಉತ್ಸವವನ್ನು ದೇಶಾದ್ಯಂತ ಆಚರಿಸಬೇಕು. ಲಸಿಕೆ ಪಡೆಯಲು ಅರ್ಹರಾಗಿರುವ 45 ವರ್ಷ ಮೇಲ್ಪಟ್ಟ ಜನರನ್ನು ಹೆಚ್ಚಿನ ಸಂಖ್ಯೆಯಲ್ಲಿ ಲಸಿಕಾ ಕೇಂದ್ರಗಳಿಗೆ ಕರೆತಂದು ಚುಚ್ಚುಮದ್ದು ಕೊಡಿಸಬೇಕು ಎಂದು ಮುಖ್ಯಮಂತ್ರಿಗಳ ಜೊತೆ ನಡೆದಿದ್ದ ಸಭೆಯಲ್ಲಿ ಪ್ರಧಾನಿ ಮೋದಿ ಸೂಚನೆ ನೀಡಿದ್ದರು. ಪ್ರಧಾನಿ ಸೂಚನೆ ಮೇರೆಗೆ ಇಂದಿನಿಂದ ಲಸಿಕಾ ಉತ್ಸವ ಆರಂಭಗೊಂಡು ನಾಲ್ಕು ದಿನಗಳ ಕಾಲ ನಡೆಯಲಿದೆ.

Facebook Comments

Sri Raghav

Admin