ಗೋವಾ ಸಿಎಂಗೆ ಕೊರೊನಾ ಪಾಸಿಟಿವ್

ಈ ಸುದ್ದಿಯನ್ನು ಶೇರ್ ಮಾಡಿ

ಪಣಜಿ, ಸೆ.2- ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರಿಗೆ ಕೊರೊನಾ ಪಾಸಿಟಿವ್ ಆಗಿದೆ. 47 ವರ್ಷದ ಸಾವಂತ್ ಅವರಿಗೆ ಕೊರೊನಾ ಸೋಂಕು ತಗುಲಿದ್ದು , ಯಾವುದೇ ರೋಗ ಲಕ್ಷಣಗಳು ಕಾಣಿಸಿಕೊಳ್ಳದ ಹಿನ್ನೆಲೆಯಲ್ಲಿ ಹೋಂ ಐಸೊಲೇಷನ್‍ಗೆ ಶಿಫಾರಸು ಮಾಡಲಾಗಿದೆ.

ನನಗೆ ಸೋಂಕು ಕಾಣಿಸಿಕೊಂಡಿದ್ದು , ಮನೆಯಿಂದಲೇ ನನ್ನ ಕರ್ತವ್ಯ ನಿರ್ವಹಿಸುತ್ತೇನೆ. ರಾಜ್ಯದ ಜನತೆ ಆತಂಕ ಪಡುವ ಅವಶ್ಯಕತೆ ಇಲ್ಲ. ಆದರೆ ನನ್ನ ಜತೆ ಸಂಪರ್ಕವಿರಿಸಿಕೊಂಡವರು ಮುಂಜಾಗ್ರತಾ ಕ್ರಮವಾಗಿ ತಪಾಸಣೆ ಮಾಡಿಸಿಕೊಳ್ಳುವಂತೆ ಸಾವಂತ್ ಟ್ವೀಟ್ ಮಾಡಿದ್ದಾರೆ.

Facebook Comments