ಸಿಎಂ ಪರಿಹಾರ ನಿಧಿಯಿಂದ ಕಿಡ್ನಿ ಚಿಕಿತ್ಸೆಗೆ 2 ಲಕ್ಷ ಚೆಕ್

ಈ ಸುದ್ದಿಯನ್ನು ಶೇರ್ ಮಾಡಿ

ದೇವನಹಳ್ಳಿ, ಜೂ.5- ತಾಲ್ಲೂಕಿನ ಅಣ್ಣೇಶ್ವರ ಗ್ರಾ.ಪಂ.ವ್ಯಾಪ್ತಿಯ ಯರ್ತಿಗಾನಹಳ್ಳಿಯ ವೈ.ಎ.ಮಲ್ಲಿಕಾರ್ಜುನರವರಿಗೆ ಕಿಡ್ನಿ ತೊಂದರೆಯಿಂದ ಬಳಲುತ್ತಿರುವುದರಿಂದ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಚಿಕಿತ್ಸೆಗೆ 2 ಲಕ್ಷ ರೂ.ಗಳ ಚೆಕ್ ವಿತರಿಸಲಾಗುತ್ತಿದೆ ಎಂದು ಕ್ಷೇತ್ರದ ಶಾಸಕ ನಿಸರ್ಗ ನಾರಾಯಣಸ್ವಾಮಿ ತಿಳಿಸಿದರು.

ಅವರು ಯರ್ತಿಗಾನಹಳ್ಳಿಯಲ್ಲಿ ಚೆಕ್ ವಿತರಿಸಿ ಮಾತನಾಡಿ ತಾಲ್ಲೂಕಿನಲ್ಲಿ ಬಡವರು ಯಾವುದೇ ರೋಗದಿಂದ ಬಳಲುತ್ತಿದ್ದರೆ ಅಂತಹವರಿಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಹಣವನ್ನು ನೀಡಲಾಗುತ್ತಿದ್ದು, ಇನ್ನು 5 ಚೆಕ್ ಬಂದಿದ್ದು ಅದನ್ನು ಸಹ ವಿತರಿಸುತ್ತೇನೆ, ಆಸ್ಪತ್ರೆಗೆ ಹಣ ನೀಡಲು ತೊಂದರೆ ಅನುಭವಿಸುತ್ತಿರುವ ಯಾರೇ ಆಗಲಿ ತಮ್ಮ ರೋಗದ ಲಕ್ಷಣ ಹಾಗೂ ಚಿಕಿತ್ಸೆಯ ವಿವರಗಳನ್ನು ಒದಗಿಸಿ ಪರಿಹಾರ ಪಡೆಯಬಹುದು ಇದಕ್ಕೆ ನಮ್ಮ ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿಗಳು ಸಹಕಾರ ನೀಡುತ್ತಿದ್ದಾರೆ ಎಂದರು.

ಮಲ್ಲಿಕಾರ್ಜುನ ಅವರಿಗೆ ಡೆಂಗ್ಯೂ ಜ್ವರ ಬಂದು, ಉಸಿರಾಟದ ತೊಂದರೆ ಹಾಗೂ ಹೃದಯಸಂಬಂದಿ ಕಾಯಿಲೆಗೆ ತುತ್ತಾಗಿ ಕೋಮಾ ಸ್ಥಿತಿಯಲ್ಲಿ ಎಂ.ಎಸ್.ರಾಮಯ್ಯ ಆಸ್ಪತ್ರೆಯಲ್ಲಿ ಎರಡು ತಿಂಗಳು ದಾಖಲಾಗಿದ್ದು ಸುಮಾರು 12 ಲಕ್ಷಕ್ಕೂ ಹೆಚ್ಚು ಹಣ ವ್ಯಯ ಮಾಡಿದ್ದಾರೆ. ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಅವರಿಗೆ 2ಲಕ್ಷ ಹಣ ಮಂಜೂರಾಗಿದ್ದು ಅವರಿಗೆ ಚೆಕ್ ವಿತರಣೆ ಮಾಡಲಾಗುತ್ತಿದೆ ಎಂದರು.

ಅಣ್ಣೇಶ್ವರ ಗ್ರಾ.ಪಂ. ಉಪಾಧ್ಯಕ್ಷ ಶಿವಣ್ಣ, ಶಾಮಣ್ಣ, ವೆಂಕಟೇಶ್, ನಾರಾಯಣಪ್ಪ, ಯರಪ್ಪನಹಳ್ಳಿ ಮಂಜುನಾಥ್ ಕಸಬಾ ಹೋಬಳಿ ಜೆಡಿಎಸ್ ಅಧ್ಯಕ್ಷ ಚಿಕ್ಕನಾರಾಯಣಸ್ವಾಮಿ, ಎಂಪಿಸಿಎಸ್ ಅಧ್ಯಕ್ಷ ಮುನಿರಾಜು, ಉಪಾಧ್ಯಕ್ಷ ನರಸಿಂಹಮೂರ್ತಿ, ಕಸಬಾ ಹೋಬಳಿ ಪ್ರಚಾರಸಮಿತಿ ಉಪಾಧ್ಯಕ್ಷ ಮುನಿರಾಜು, ಅಮರ್ ನಾರಾಯಣ್, ಡಿ.ನಾರಾಯಣಸ್ವಾಮಿ ಮತ್ತಿತರರು ಇದ್ದರು.

Facebook Comments