10100 ಹಾಸಿಗೆ ಸಾಮರ್ಥ್ಯದ ಕೋವಿಡ್ ಕೇರ್ ಸೆಂಟರ್‌ಗೆ ಸಿಎಂ ಭೇಟಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು : ನಗರದ ಹೊರವಲಯ ದಲ್ಲಿ ಆರಂಭಿಸುತ್ತಿರುವ ಕೋವಿಡ್ ಕೇರ್ ಕೇಂದ್ರಕ್ಕೆ ‌ಭೇಟಿ‌ ನೀಡಿ ಪರಿಶೀಲಿಸಿದ ಸಿಎಂ‌ ಯಡಿಯೂರಪ್ಪ.  ಕೊರೊನಾ ನಿಯಂತ್ರಣಕ್ಕೆ ಸರ್ಕಾರ ಎಲ್ಲ ಪ್ರಯತ್ನ ಮಾಡುತ್ತಿದೆ. ಕೋವಿಡ್ ಕೇರ್ ಸೆಂಟರ್ 10100 ಹಾಸಿಗೆ ಸಾಮರ್ಥ್ಯ ದ ಕೋವಿಡ್ ಕೇರ್ ಸೆಂಟರ್ ಶೀಘ್ರ ಕಾರ್ಯಾರಂಭ ಮಾಡಲಿದೆ.

ಕೇಂದ್ರದ ಅಧಿಕಾರಿಗಳ ತಂಡ ಸಹ ಈ ಕೋವಿಡ್ ಕೇಂದ್ರಕ್ಕೆ ಭೇಟಿ ನೀಡಿ ಸಂತಸ ವ್ಯಕ್ತಪಡಿಸಿದೆ. ಈ ಕೇಂದ್ರದಲ್ಲಿ 2200 ಸಿಬ್ಬಂದಿ ನೇಮಕ ಮಾಡಲಾಗಿದೆ. 100 ರೋಗಿಗಳಿಗೆ ಒಬ್ಬ ವೈದ್ಯರು, ಇಬ್ಬರು ನರ್ಸ್ ಹಾಗೂ ವೈದ್ಯಕೀಯ ಸಿಬ್ಬಂದಿ ನೇಮಕ ಮಾಡಲಾಗುವುದು.

ಜನ ತಾಳ್ಮೆಯಿಂದಿರಬೇಕು. ವಿಶ್ವಾಸ ಕಳೆದುಕೊಳ್ಳಬಾರದು.‌ ಆಂಬುಲೆನ್ಸ್ ವಿಳಂಬ ಸೇರಿದಂತೆ ವೈದ್ಯಕೀಯ ವಿಚಾರದಲ್ಲಿ ಸಮಸ್ಯೆಯಾದರೆ ಜನತೆ ಅದನ್ನು ಕೂಡಲೇ ಸರ್ಕಾರದ ಗಮನಕ್ಕೆ ತಂದರೆ ಕ್ರಮ ಕೈಗೊಳ್ಳುತ್ತೇವೆ.
ಬೆಂಗಳೂರು ತೊರೆದು‌ ಹಳ್ಳಿಗಳಿಗೆ ಜನತೆ ಹೋಗಬಾರದು.‌

ಕೊರೊನಾ ವಿರುದ್ದ ಒಟ್ಟಾಗಿ ಹೋರಾಡಬೇಕಿದೆ. ಇದು ಇನ್ನೂ ಹಲವು ತಿಂಗಳು ನಾವು ಕೊರೊನಾ ವಿರುದ್ದ ಸೆಣಸಬೇಕಿದೆ. ಸರ್ಕಾರ ನಿಮ್ಮ ಜತೆ ಇದೆ. ಯಾರೂ‌ ಸಹ ಹೆದರಬೇಕಿಲ್ಲ.

ಜನರ ಆರೋಗ್ಯ ಕಾಪಾಡುವ ಜವಾಬ್ದಾರಿ ನಮ್ಮದು. ಇನ್ನೊಂದು ವಾರದಲ್ಲಿ ಕೋವಿಡ್ ಕೇರ್ ಕಾರ್ಯಾರಂಭ ಮಾಡಲಿದೆ.ಖಾಸಗಿ ಆಸ್ಪತ್ರೆಗಳು ಬಡವರಿಂದ ಸುಲಿಗೆ ಮಾಡದಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದೇವೆ. ಇದು ಮತ್ತೆ ಮರುಕಳಿಸಿದರೆ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಲಾಗುವುದು.

Facebook Comments

Sri Raghav

Admin