ಭಾರಿ ಕುತೂಹಲ ಮೂಡಿಸಿದೆ ಇಂದು ಸಂಜೆ ಸಿಎಂ ಕರೆದಿರುವ ಪ್ರೆಸ್ ಮೀಟ್..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು : ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸಂಜೆ 5 ಗಂಟೆಗೆ ಮಹತ್ವದ ಪತ್ರಿಕಾಗೋಷ್ಠಿ ಕರೆದಿರುವುದು ಭಾರೀ ಕುತೂಹಲಕ್ಕೆ ಕಾರಣವಾಗಿದೆ. ಲಾಕ್ ಡೌನ್ ಅವಧಿ ಪೂರ್ಣಗೊಳ್ಳುವ ಮೊದಲೇ ಸಿಎಂ ಸಚಿವರ ಜೊತೆ ಸಭೆ ನಡೆಸುತ್ತಿದ್ದಾರೆ.ಈ ಮಧ್ಯೆ ಸಚಿವರ ಜೊತೆ ಸಭೆ ಕರೆದಿರುವುದು ಕುತೂಹಲ ಹುಟ್ಟಿಸಿದೆ.

ಕೊರೊನಾ ವ್ಯಾಕ್ಸಿನ್ ಗೊಂದಲ ನಿವಾರಣೆ ಕುರಿತಂತೆ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸಿಎಂ ಕೋವಿಡ್ ಉಸ್ತುವಾರಿ ಸಚಿವರ ಜೊತೆಯಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಲಿದ್ದಾರೆ. ಈ ವೇಳೆ ಲಸಿಕೆ ಕೊರತೆ ಬಗ್ಗೆ ಇರುವ ಎಲ್ಲ ಗೊಂದಲಗಳ ಕುರಿತು ಸ್ಪಷ್ಟನೆ ನೀಡಲಿದ್ದಾರೆ ಎನ್ನಲಾಗಿದೆ.

ಸಭೆಯಲ್ಲಿ ಸಿಎಂ ಏನು ನಿರ್ಧಾರ ಕೈಗೊಳ್ಳುತ್ತಾರೆ..?, ಮತ್ತೆ ಲಾಕ್ ಡೌನ್ ವಿಸ್ತರಣೆ ಬಗ್ಗೆ ಮಾಹಿತಿ ಕೊಡುತ್ತಾರಾ..? ಅಥವಾ ವಿಶೇಷ ಪ್ಯಾಕೇಜ್ ಘೋಷಣೆ ಮಾಡುತ್ತಾರಾ ಎಂಬ ಪ್ರಶ್ನೆ ಎದ್ದಿದೆ. ಆಟೋ ಟ್ಯಾಕ್ಸಿ, ಚಾಲಕರಿಗೆ ವಿಶೇಷ ಪ್ಯಾಕೇಜ್, ಕಟ್ಟಡ ಕಾರ್ಮಿಕರಿಗೆ ನೆರವು ಅಥವಾ ರೈತರಿಗೆ ಹಣಕಾಸು ನೆರವು ಘೋಷಿಸುತ್ತಾರಾ ಎಂಬ ಪ್ರಶ್ನೆಯೂ ಮೂಡಿದೆ.

ಈಗಾಗಲೇ ಆರೋಗ್ಯ ಇಲಾಖೆ ಮುಂದಿನ ಆದೇಶದವರೆಗೆ 18-44ರ ವಯೋಮಾನದವರಿಗೆ ಲಸಿಕೆ ನೀಡಿಕೆ ಸ್ಥಗಿತಗೊಳಿಸಿ ಆದೇಶ ಹೊರಡಿಸಿದೆ. ಆದರೂ 45 ವರ್ಷ ಮೇಲಿನವರಿಗೆ ಲಸಿಕೆ ಸಿಗುತ್ತಿಲ್ಲ.

ಮೊದಲನೇ ಡೋಸ್ ಪಡೆದವರು ಎರಡನೇ ಡೋಸ್ ಪಡೆಯಲು ಸಾಧ್ಯವಾಗುತ್ತಿಲ್ಲ. ಬಹುತೇಕ ಕಡೆ ಲಸಿಕೆ ಖಾಲಿ ಎನ್ನುವ ನಾಮಫಲಕ ಕಂಡುಬರುತ್ತಿದೆ.18-44 ವಯೋಮಾನದವರಿಗೆ ಲಸಿಕೆ ನೀಡಿಕೆಯನ್ನು ಸ್ಥಗಿತಗೊಳಿಸುವ ಕುರಿತು ಸಿಎಂ ಅಧಿಕೃತ ಘೋಷಣೆ ಮಾಡಲಿದ್ದು, ಮುಂದಿನ ದಿನಾಂಕ ಪ್ರಕಟಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಲಾಕ್​ಡೌನ್ ನಂತರವೂ ರಾಜ್ಯದಲ್ಲಿ ಕೊರೊನಾ ನಿಯಂತ್ರಣಕ್ಕೆ ಬರುತ್ತಿಲ್ಲ. ಹೀಗಾಗಿ ಇನ್ನಷ್ಟು ಬಿಗಿ ಕ್ರಮದ ಘೋಷಣೆ ಸಾಧ್ಯತೆ ಇದೆ. ಇದರ ಜೊತೆಯಲ್ಲಿ ಶ್ರಮಿಕ ವರ್ಗದ ನೆರವಿಗೆ ಏನಾದರೂ ಯೋಜನೆಗಳನ್ನು ಪ್ರಕಟಿಸಬಹುದು.

Facebook Comments

Sri Raghav

Admin