ಕೊರೋನಾ ಕಫ್ರ್ಯೂಗೆ ಸಹಕಾರ ಕೊಡಿ : ರಾಜ್ಯದ ಜನತೆಯಲ್ಲಿ ಸಿಎಂ ಮನವಿ

ಈ ಸುದ್ದಿಯನ್ನು ಶೇರ್ ಮಾಡಿ

ರಾಯಚೂರು,ಏ.11- ಕೊರೊನಾ ಸೋಂಕು ಒಬ್ಬರಿಂದ ಒಬ್ಬರಿಗೆ ಹರಡದಂತೆ ತಡೆಗಟ್ಟಲು ಅನಿವಾರ್ಯವಾಗಿ ಕೊರೊನಾ ಕಫ್ರ್ಯೂ ಜಾರಿ ಮಾಡಲಾಗಿದ್ದು, ಯಾರೊಬ್ಬರೂ ಉಲ್ಲಂಘನೆ ಮಾಡಬಾರದು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ರಾಜ್ಯದ ಜನತೆಯಲ್ಲಿ ಮನವಿ ಮಾಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಕೊರೊನಾ ಕಫ್ರ್ಯೂ ವಿಧಿಸಲಾಗಿದೆ. ಅನಗತ್ಯವಾಗಿ ಮನೆಯಿಂದ ಆಚೆ ಬರುವುದು, ತಿರುಗಾಡುವುದು ಸರಿಯಲ್ಲ. ಸಾರ್ವಜನಿಕರ ಸಹಕಾರ ಇಲ್ಲದಿದ್ದರೆ ಕೊರೊನಾ ಸೋಂಕು ತಡೆಗಟ್ಟುವುದಾದರೂ ಹೇಗೆ ಸಿಎಂ ಪ್ರಶ್ನಿಸಿದರು.

# Related News : 
* ಬಿಗ್ ಬ್ರೇಕಿಂಗ್ : ರಾಜ್ಯದಲ್ಲಿ ಮತ್ತೆ ಲಾಕ್‍ಡೌನ್ ಫಿಕ್ಸ್..!?
BREAKING : ರಾಜ್ಯದಲ್ಲಿ ಮತ್ತೆ ಲಾಕ್‍ಡೌನ್ ಮುನ್ಸೂಚನೆ ಕೊಟ್ಟ ಸಚಿವ ಸುಧಾಕರ್..!
* ಇಂದಿನಿಂದ ಲಸಿಕಾ ಉತ್ಸವ ಆರಂಭ : ಭಯ ಬಿಟ್ಟು ಲಸಿಕೆ ಪಡೆಯುವಂತೆ ಸಿಎಂ ಮನವಿ

ದಿನದಿಂದ ದಿನಕ್ಕೆ ಕೊರೊನಾ ಸೋಂಕು ಹೆಚ್ಚಾಗುತ್ತಲೇ ಇದೆ. ಸಾರ್ವಜನಿಕರು ಕೋವಿಡ್ ನಿಯಮಗಳನ್ನು ಪಾಲನೆ ಮಾಡದ ಪರಿಣಾಮ ಹೀಗಾಗಿದೆ. ಇದಕ್ಕೆ ಮತ್ತೆ ಯಾರೊಬ್ಬರೂ ಅವಕಾಶ ಮಾಡಿಕೊಡಬಾರದು. ಸಾಮಾಜಿಕ ಅಂತರ, ಸಾನಿಟೈಸರ್ ಬಳಕೆ, ಕಡ್ಡಾಯವಾಗಿ ಮಾಸ್ಕ್ ಧರಿಸಬೇಕೆಂದು ಸಲಹೆ ಮಾಡಿದರು.

ಸರ್ಕಾರ ಸಂತೋಷದಿಂದೇನೂ ಕೊರೊನಾ ಕಫ್ರ್ಯೂ ಜಾರಿ ಮಾಡಿಲ್ಲ. ಪರಿಸ್ಥಿತಿ ಕೈ ಮೀರುತ್ತಿರುವುದರಿಂದ ಅನಿವಾರ್ಯವಾಗಿ ಈ ನಿರ್ಧಾರವನ್ನು ತೆಗೆದುಕೊಂಡಿದ್ದೇವೆ. ಪ್ರತಿಯೊಬ್ಬರ ಸಹಕಾರ ಅಗತ್ಯ ಎಂದು ಸಿಎಂ ಹೇಳಿದರು.

ಇಂದಿನಿಂದ ಕರ್ನಾಟಕ ಸೇರಿದಂತೆ ದೇಶದೆಲ್ಲೆಡೆ ಕೋವಿಡ್ ಲಸಿಕೆ ಉತ್ಸವ ಆರಂಭವಾಗಿದೆ. ಸಾರ್ವಜನಿಕರು ಸ್ವಯಂಪ್ರೇರಿತರಾಗಿ ಮುಂದೆ ಬಂದು ಕೋವಿಡ್ ಲಸಿಕೆ ಪಡೆಯಬೇಕು. ನಿಮ್ಮ ನಿಮ್ಮ ಕ್ಷೇತ್ರದಲ್ಲಿರುವ ಲಸಿಕಾ ಕೇಂದ್ರಕ್ಕೆ ಹೋಗಿ ಲಸಿಕೆ ಪಡೆದು ಆರೋಗ್ಯವಾಗಿರಿ ಎಂದು ಸಲಹೆ ಮಾಡಿದರು.

Facebook Comments

Sri Raghav

Admin