ಭಿನ್ನಮತೀಯರ ಬಗ್ಗೆ ಪ್ರತಿಕ್ರಿಯಿಸಲಾರೆ ಎಂದ ಯಡಿಯೂರಪ್ಪ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜೂ.1- ತಮ್ಮ ನಾಯಕತ್ವದ ವಿರುದ್ದ ಅಸಮಾಧಾನಗೊಂಡಿರುವ ಭಿನ್ನಮತೀಯ ಶಾಸಕರ ಚಟುವಟಿಕೆಗಳ ಬಗ್ಗೆ ಪ್ರತಿಕ್ರಿಯಿಸಲು ಮುಖ್ಯಮಂತ್ರಿ ಯಡಿಯೂರಪ್ಪ ನಿರಾಕರಿಸಿದರು.  ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಅವರು, ರಾಜ್ಯದಲ್ಲಿ ಕೊರೊನಾ ಬಿಕ್ಕಟ್ಟು ಸೇರಿದಂತೆ ನಾನು ಆಡಳಿತ ಸುಧಾರಣೆಗೆ ಹೆಚ್ಚು ಗಮನ ನೀಡಿದ್ದೇನೆ.  ಉಳಿದಂತೆ ಯಾವುದೇ ಚಟುವಟಿಕೆಗಳ ಬಗ್ಗೆ ಪ್ರತಿಕ್ರಿಯೆ ಕೊಡುವುದಿಲ್ಲ ಎಂದು ಕಡ್ಡಿಮುರಿದಂತೆ ಹೇಳಿದರು.

ಯಾರು ಏನುಮಾಡುತ್ತಿದ್ದಾರೆ ಎಂಬ ಬಗ್ಗೆ ಮಾಹಿತಿ ಇಲ್ಲ. ಆಕಡೆ ಗಮನವನ್ನು ಕೊಡುವುದಿಲ್ಲ. ಕೋವಿಡ್ ನಿಯಂತ್ರಣ ಹಾಗೂ ಸುಗಮ ಆಡಳಿತ ನೀಡುವತ್ತ ಗಮನಹರಿಸುತ್ತಿದ್ದೇ ಎಂದು ಪ್ರತಿಕ್ರಿಯಿಸಿದರು. ಇತ್ತೀಚೆಗೆ ಕೆಲವು ಶಾಸಕರು ಯಡಿಯೂರಪ್ಪನವರ ನಾಯಕತ್ವದ ವಿರುದ್ದ ಪ್ರತ್ಯೇಕ ಸಭೆಗಳನ್ನು ನಡೆಸಿದ್ದರು. ಇಷ್ಟಾದರೂ ಅದರ ಬಗ್ಗೆ ಬಿಎಸ್‍ವೈ ಯಾವುದೇ ಪ್ರತಿಕ್ರಿಯೆ ಕೊಡದೆ ನುಣುಚಿಕೊಂಡರು.

Facebook Comments