ಕೊರೊನಾ ಪರಿಹಾರ ನಿಧಿ ಹಣವನ್ನು ಸರ್ಕಾರ ಏಕೆ ಬಳಸಿಕೊಳ್ಳುತ್ತಿಲ್ಲ..?

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜು.3- ಕೊರೊನಾ ಸೋಂಕಿತರಿಗೆ ಸರಿಯಾದ ಚಿಕಿತ್ಸೆ ಹಾಗೂ ಸೌಲಭ್ಯಗಳು ಸಿಗದೆ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ಆದರೆ ಕೊರೊನಾ ಚಿಕಿತ್ಸೆಗೆಂದೇ ಮುಖ್ಯಮಂತ್ರಿ ಯಡಿಯೂರಪ್ಪ ಸಂಗ್ರಹಿಸಿದ್ದ ಪರಿಹಾರ ನಿಧಿ ಹಣವನ್ನು ಸರ್ಕಾರ ಏಕೆ ಬಳಸಿಕೊಳ್ಳುತ್ತಿಲ್ಲ ಎಂಬ ಅನುಮಾನ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ.

ಜೂ.18ರವರೆಗೆ ಸಿಎಂ ಕೊವಿಡ್ ಪರಿಹಾರ ನಿಧಿ ಖಾತೆಗೆ ಬರೋಬ್ಬರಿ ? 290 ಕೋಟಿ 98 ಲಕ್ಷ ಹಣ ಸಂಗ್ರಹವಾಗಿದೆ. 290 ಕೋಟಿ ಸಂಗ್ರಹವಾದ್ರೂ ಒಂದು ರೂಪಾಯಿ ಖರ್ಚು ಮಾಡಿಲ್ಲ. ಸಾರ್ವಜನಿಕರು, ಸಂಘ ಸಂಸ್ಥೆಗಳಿಂದ ಸಿಎಂ ಕೊವಿಡ್ ಪರಿಹಾರ ನಿಧಿಗೆ ಹಣ ಜಮೆಯಾಗಿದೆ.

ಸಂಗ್ರಹವಾದ ಹಣದಲ್ಲಿ ಸರ್ಕಾರ ನಯಾ ಪೈಸೆ ಖರ್ಚು ಮಾಡಿಲ್ಲ. ಆದರೆ ಆ ಪೂರ್ತಿ ಹಣವನ್ನು ಕೊವಿಡ್ ಸೇವೆಗಳಿಗೆ ಬಳಸಲು ಕಾಯ್ದಿರಿಸಲಾಗಿದೆ. ಇದುವರೆಗೂ ಕೊರೊನಾ ತುರ್ತು ಸೇವೆಗೆ ಹಣ ಬಳಕೆ ಮಾಡಿಲ್ಲ. ಹೀಗಾಗಿ ಸಿಎಂ ಪರಿಹಾರ ನಿಧಿಯ ಹಣವನ್ನು ಬಳಸದಿರುವುದಕ್ಕೆ ವೆಲ್‍ಫೇರ್ ಪಾರ್ಟಿ ಆಫ್ ಇಂಡಿಯಾ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.

ಮಾಹಿತಿ ಹಕ್ಕು ಕಾಯ್ದೆಯಡಿ ಪಡೆದ ಮಾಹಿತಿಯಿಂದ ವಿಚಾರ ಬಹಿರಂಗವಾಗಿದೆ. ರಾಜ್ಯದಲ್ಲಿ ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುವುದೇ ದೊಡ್ಡ ಸವಾಲಾಗಿದೆ. ಈ ಮಧ್ಯೆ ಇರುವ ಹಣವನ್ನು ಬಳಸಿಕೊಳದಿರುವುದು ಏಕೆ ಎಂಬುದು ನಿಗೂಢವಾಗಿದೆ.

ಮಹಾಮಾರಿ ಕೊರೊನಾ ಸಂಕಷ್ಟ ಎದುರಿಸಲು ಸಿಎಂ ಕೊವಿಡ್ ಪರಿಹಾರ ನಿಧಿಯನ್ನು ಕಾಯ್ದಿಸಲಾಗಿತ್ತು. ಇದರಲ್ಲಿ ಸಂಗ್ರಹವಾಗುವ ಹಣವನ್ನು ಕೋವಿಡ್ ಚಿಕಿತ್ಸೆಗೆ ಹಾಗೂ ಇತರ ನಿರ್ವಾಹಣೆಗೆ ಬಳಸಲು ತೀರ್ಮಾನಿಸಲಾಗಿತ್ತು.

ಆದರೆ ಸಿಎಂ ಕೊವಿಡ್ ಪರಿಹಾರ ನಿಧಿಯಲ್ಲಿ ಕೋಟಿ ಕೋಟಿ ಹಣ ಸಂಗ್ರಹವಾಗಿದೆ. ಕೋಟಿ ಗಟ್ಟಲೆ ಹಣ ಇದ್ದರೂ ಸರ್ಕಾರ ನಯಾ ಪೈಸೆ ಖರ್ಚು ಮಾಡಿಲ್ಲ , ಸೋಂಕಿತರ ಚಿಕಿತ್ಸೆಗೆ, ವೈದ್ಯಕೀಯ ಸೇವೆಗೆ ಬಳಸಿಕೊಳ್ಳದೆ ಕೋಟಿ ಕೋಟಿ ಹಣವನ್ನು ಸಂಗ್ರಹಿಸಿಟ್ಟುಕೊಂಡಿರುವುದು ಏಕೆ ಎಂಬ ಪ್ರಶ್ನೆಗಳು ಕೇಳಿಬರುತ್ತಿದೆ.

Facebook Comments