ಬಿಗ್ ನ್ಯೂಸ್ : ಬಿಜೆಪಿ ಶಾಸಕರು-ಸಂಸದರ ತುರ್ತುಸಭೆ ಕರೆದ ಸಿಎಂ, ಕರ್ನಾಟಕ ಮತ್ತೆ ಲಾಕ್..!?

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜು.4- ಮುಖ್ಯಮಂತ್ರಿ ಯಡಿಯೂರಪ್ಪ ಜು.6ರಂದು ಸಂಜೆ 4 ಗಂಟೆಗೆ ಬಿಜೆಪಿ ಶಾಸಕರು ಮತ್ತು ಸಂಸದರ ತುರ್ತುಸಭೆ ಕರೆದಿದ್ದಾರೆ. ಮಹಾಮಾರಿ ಕೋರೋನಾ ವಿರುದ್ಧ ಹೋರಾಟ ಸಂಬಂಧ ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ಚರ್ಚಿಸಲು ಕಳೆದ ಜೂ.26 ರಂದು ಕೂಡ ಸಿಎಂ ಸಭೆ ಕರೆದಿದ್ದರು, ಆದರೆ ಈ ಬಾರಿ ಕೇವಲ ಬಿಜೆಪಿ ಶಾಸಕರು ಮತ್ತು ಸಂಸದರು ಮಾತ್ರ ಸಭೆಯಲ್ಲಿ ಭಾಗವಹಿಸುತ್ತಿದ್ದಾರೆ.

ಸಭೆಯಲ್ಲಿ ಮತ್ತೆ ಲಾಕ್ ಡೌನ್ ಅವಶ್ಯಕತೆಯಿದೆಯೇ ಅಥವಾ ನಿಯಮಗಳನ್ನು ಮತ್ತಷ್ಟು ಕಟ್ಟುನಿಟ್ಟುಗೊಳಿಸಬೇಕೆ ಎಂಬ ಬಗ್ಗೆ ಸಮಾಲೋಚನೆ ನಡೆಯಲಿದೆ. ಈ ಮೊದಲು ತಮ್ಮ ಕ್ಷೇತ್ರದಲ್ಲಿ ಒಂದೊ ಎರಡೋ ಕೊರೋನಾ ಕೇಸ್‍ಗಳು ಇತ್ತು, ಆದರೆ ಇತ್ತೀಚೆಗೆ ದಿನಕ್ಕೆ 12-15 ಪ್ರಕರಣಗಳು ದಾಖಲಾಗುತ್ತಿವೆ.

ಹೀಗಾಗಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಸಲಹೆ ನೀಡತ್ತಿರುವುದಾಗಿ ಶಾಸಕರೊಬ್ಬರು ತಿಳಿಸಿದ್ದಾರೆ. ಅಂತರ ಜಿಲ್ಲಾ ಮಟ್ಟದಲ್ಲಿ ಹೆಚ್ಚಿನ ಕಟ್ಟುನಿಟ್ಟಿನ ಕ್ರಮ ಜಾರಿ ಮಾಡುವ ಅವಶ್ಯಕತೆಯಿದೆ. ಬೆಂಗಳೂರಿನ ಎಲ್ಲಾ ಸ್ಥಳಗಳಲ್ಲೂ ಜನತೆ ಹೆಚ್ಚಿನ ಪ್ರಮಾಣದಲ್ಲಿ ಸಂಚರಿಸುತ್ತಿದ್ದಾರೆ.

ಜೊತೆಗೆ ಎಲ್ಲಾ ಸ್ಥಳಗಳಿಂದಲೂ ಜನ ಇಲ್ಲಿಗೆ ಆಮಿಸುತ್ತಿದ್ದಾರೆ ಎಂದು ಮತ್ತೊಬ್ಬ ಶಾಸಕರೊಬ್ಬರು ಅಭಿಪ್ರಾಯಪಟ್ಟಿದ್ದಾರೆ. ಸಭೆಯಲ್ಲಿ ಬೆಂಗಳೂರು ನಗರ ಅಭಿವೃದ್ಧಿ ವಿಷಯಗಳ ಬಗ್ಗೆಯೂ ಚರ್ಚಿಸಲಿದ್ದು, ಸಿಎಂ ಗೃಹ ಕಚೇರಿಯಲ್ಲಿ ನಡೆಯಲಿದೆ.

ಶಾಸಕರಾದ ಎಸ್‍ಆರ್ ವಿಶ್ವನಾಥ್, ಎಸ್ ರಘು, ರವಿ ಸುಬ್ರಮಣ್ಯ ಅರವಿಂದ್ ಲಿಂಬಾವಳಿ ಜೊತೆಗೆ ಸಚಿವರಾದ ಸಿ.ಎನ್.ಅಶ್ವತ್ ನಾರಾಯಣ್, ಸುರೇಶ್ ಕುಮಾರ್, ಆರ್ ಅಶೋಕ್, ಬ್ರೈರತಿ ಬಸವರಾಜ್, ಸಂಸದರಾದ ತೇಜಸ್ವಿ ಸೂರ್ಯ ಮತ್ತು ಪಿಸಿ ಮೋಹನ್ ಸಭೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.

Facebook Comments