ಸದಸ್ಯರನ್ನು ಹೊರಗಿಟ್ಟು ಸದನ ನಡೆಸುವುದು ಸಾಧ್ಯವಿಲ್ಲ : ಸಿಎಂ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಸೆ.21- ರಾಜ್ಯ ವಿಧಾನಮಂಡಲ ಅಧಿವೇಶನವನ್ನು ಬೇಗ ಮುಗಿಸುವ ಬಗ್ಗೆ ವಿರೋಧ ಪಕ್ಷಗಳ ಸಹಕಾರ ಕೋರಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 50 ರಿಂದ 60 ಮಂದಿ ಸದಸ್ಯರು ಕೋವಿಡ್‍ನಿಂದಾಗಿ ಸದನಕ್ಕೆ ಬರುತ್ತಿಲ್ಲ. ಅವರನ್ನು ಹೊರಗಿಟ್ಟು ಸದನ ನಡೆಸುವುದು ಸಾಧ್ಯವಿಲ್ಲ. ಹೀಗಾಗಿ ಬೇಗ ಮುಗಿಸಲು ವಿರೋಧ ಪಕ್ಷದ ನಾಯಕರ ಸಹಕಾರ ಕೋರಲಾಗುವುದು ಎಂದರು.

ವಿಪಕ್ಷ ನಾಯಕರು ಯಾವ ರೀತಿ ಸಹಕಾರ ಕೊಡುತ್ತಾರೋ ಕಾದು ನೋಡೋಣ. ಸದನದ ಕಾರ್ಯ ಕಲಾಪಗಳ ಸಮಿತಿ ಸಭೆಯಲ್ಲಿ ಈ ಬಗ್ಗೆ ಚರ್ಚೆ ಮಾಡಿ ಅಧಿವೇಶನ ಮೊಟಕುಗೊಳಿಸುವ ಬಗ್ಗೆ ತೀರ್ಮಾನಿಸಲಾಗುವುದು ಎಂದರು.

ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಮಾತನಾಡಿ, ಕೊರೊನಾ ಹಿನ್ನೆಲೆಯಲ್ಲಿ ಸದನ ಮೊಟಕು ಮಾಡುವ ಬಗ್ಗೆ ಚರ್ಚೆಯಾಗಿದೆ. ಸಾಕಷ್ಟು ಶಾಸಕರು ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ. ಹಣಕಾಸು ವಿಧೇಯಕಕ್ಕೆ ಒಪ್ಪಿಗೆ ಬೇಕು. ಅಧಿವೇಶನದಲ್ಲಿ ಮಸೂದೆಗಳಿಗೆ ಒಪ್ಪಿಗೆ ಪಡೆಯಬೇಕು. ಎಷ್ಟು ದಿನ ಕಲಾಪ ನಡೆಸಬೇಕೆಂಬ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

Facebook Comments