ಸಹಕಾರ ಸಾರಿಗೆ ಸಂಸ್ಥೆಗೆ ಸೌಲಭ್ಯ

ಈ ಸುದ್ದಿಯನ್ನು ಶೇರ್ ಮಾಡಿ

ಚಿಕ್ಕಮಗಳೂರು, ಸೆ.10- ಕೊಪ್ಪದ ಸಹಕಾರ ಸಾರಿಗೆ ಸಂಸ್ಥೆಗೆ ಸಹಾಯಧನ ಇತರ ಸೌಲಭ್ಯ ಒದಗಿಸುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆದೇಶಿಸಿದ್ದಾರೆ.  ಕೊಪ್ಪದ ಸಹಕಾರ ಸಾರಿಗೆ ಸಂಸ್ಥೆ 1991ರಲ್ಲಿ ಆರಂಭ ಗೊಂಡು 76 ಬಸ್‍ಗಳನ್ನು ಹೊಂದಿದ್ದು, 300ಕ್ಕೂ ಹೆಚ್ಚು ಕಾರ್ಮಿಕರು ಸಂಸ್ಥೆಯನ್ನೇ ಆಶ್ರಯಿಸಿದ್ದಾರೆ.

ಕಳೆದ 28ವರ್ಷಗಳಿಂದ ಚಿಕ್ಕಮಗಳೂರು, ಶಿವಮೊಗ್ಗ, ಉಡುಪಿ ಜಿಲ್ಲೆಗಳಲ್ಲಿ ಸಾರ್ವಜನಿಕರಿಗೆ ಸಾರಿಗೆ ಸೇವೆ ನೀಡುತ್ತಿರುವ ಸಂಸ್ಥೆ ಇತ್ತೀಚಿನ ಡಿಸೇಲ್ ದರ ಏರಿಕೆ, ವಾಹನ ತೆರಿಗೆ, ವಿಮೆ ಇನ್ನಿತರ ದರ ಏರಿಕೆಯಿಂದಾಗಿ ಸಂಸ್ಥೆ ಆರ್ಥಿಕ ನಷ್ಟದಲ್ಲಿ ನಲಗುತ್ತಿದೆ.

ಹಾಗಾಗಿ ಸರ್ಕಾರ ಕೆಎಸ್‍ಆರ್‍ಟಿಸಿ ಹಾಗೂ ಬಿಎಂಟಿಸಿಗೆ ನೀಡುತ್ತಿರುವ ಸವಲತ್ತನ್ನು ಸಹಕಾರ ತತ್ವದಡಿ ಕಾರ್ಯನಿರ್ವಹಿಸುತ್ತಿರುವ ಸಹಕಾರ ಸಾರಿಗೆಗೂ ನೀಡುವಂತೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ಕೆಎಸ್‍ಆರ್‍ಟಿಸಿ ಹಾಗೂ ಬಿಎಂಟಿಸಿಗೆ ಒದಗಿಸುತ್ತಿರುವ ಸೌಲಭ್ಯವನ್ನು ಸಹಕಾರ ಸಾರಿಗೆಗೂ ನೀಡುವಂತೆ ಆದೇಶಿಸಿದ್ದಾರೆ.

Facebook Comments