ನ.23ರಿಂದ ಸಿಎಂ ಯಡಿಯೂರಪ್ಪ ಪ್ರಚಾರ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ನ.20- ಡಿಸೆಂಬರ್ 5ರಂದು ನಡೆಯಲಿ ರುವ 15 ಕ್ಷೇತ್ರಗಳ ಉಪ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷದ ಅಭ್ಯರ್ಥಿಗಳಾಗಿ ಕಣಕ್ಕಿಳಿದಿರುವ ಅನರ್ಹ ಶಾಸಕರ ಪರ ಪ್ರಚಾರಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಜ್ಜಾಗಿದ್ದು, ಮೊದಲ ಹಂತವಾಗಿ ನ.23 ರಿಂದ 25ರ ವರೆಗೆ ಮೂರು ದಿನಗಳ ಕಾಲ ಮತ ಪ್ರಚಾರ ನಡೆಸಲಿದ್ದಾರೆ.

ನ.23ರಂದು ಅಥಣಿ, ಕಾಗವಾಡ, ಗೋಕಾಕ್‍ನಲ್ಲಿ ಪ್ರಚಾರ ನಡೆಸಲಿರುವ ಸಿಎಂ, ಅಥಣಿ ಅಭ್ಯರ್ಥಿ ಮಹೇಶ್ ಕುಮಟಳ್ಳಿ, ಕಾಗವಾಡ ಅಭ್ಯರ್ಥಿ ಶ್ರೀಮಂತ ಪಾಟೀಲ್ ಹಾಗೂ ಗೋಕಾಕ್ ಅಭ್ಯರ್ಥಿ ರಮೇಶ್ ಜಾರಕಿಹೊಳಿ ಪರ ಬಿರುಸಿನ ಪ್ರಚಾರ ನಡೆಸಲಿದ್ದಾರೆ.

ಭಾನುವಾರದಂದು ಯಲ್ಲಾಪುರ, ಹಿರೇಕೆರೂರು, ರಾಣೆ ಬೆನ್ನೂರಿನಲ್ಲಿ ಪ್ರಚಾರ ನಡೆಸಲಿರುವ ಸಿಎಂ, ಯಲ್ಲಾಪುರ ಅಭ್ಯರ್ಥಿ ಶಿವರಾಂ ಹೆಬ್ಬಾರ್, ಹಿರೇಕೆರೂರು ಅಭ್ಯರ್ಥಿ ಬಿ.ಸಿ. ಪಾಟೀಲ್ ಮತ್ತು ರಾಣೆಬೆನ್ನೂರು ಅಭ್ಯರ್ಥಿ ಅರುಣ್ ಕುಮಾರ್ ಗುತ್ತೂರ್ ಪರ ಮತ ಯಾಚನೆ ಮಾಡಲಿದ್ದಾರೆ.

ಅಷ್ಟೇ ಅಲ್ಲದೆ, ನ.25ರಂದು ಹೊಸಪೇಟೆಯ ವಿಜಯನಗರ ಕ್ಷೇತ್ರದ ಅಭ್ಯರ್ಥಿ ಆನಂದ್ ಸಿಂಗ್, ಕೆಆರ್ ಪೇಟೆ ಅಭ್ಯರ್ಥಿ ನಾರಾ ಯಣಗೌಡ ಮತ್ತು ಹುಣಸೂರು ಅಭ್ಯರ್ಥಿ ಹೆಚ್. ವಿಶ್ವನಾಥ್ ಪರ ಪ್ರಚಾರ ನಡೆಸಲಿದ್ದಾರೆ. ಅಂದು ರಾತ್ರಿ ಮೈಸೂರಿನಲ್ಲಿ ವಾಸ್ತವ್ಯ ಹೂಡಿ 26ರ ಮಂಗಳವಾರ ಬೆಳಗ್ಗೆ ಮೈಸೂರಿನಿಂದ ಬೆಂಗಳೂರಿಗೆ ವಾಪಸಾಗಲಿದ್ದಾರೆ.

ಮೂರು ದಿನಗಳ ಕಾಲ ಅನರ್ಹ ಶಾಸಕರ ಕ್ಷೇತ್ರಗಳಲ್ಲಿ ಭರ್ಜರಿ ಪ್ರಚಾರ ಕೈಗೊಳ್ಳಲಿರುವ ಸಿಎಂ, ಸ್ಥಳೀಯ ಸಭೆ-ಸಮಾವೇಶಗಳಲ್ಲಿ ಭಾಗಿಯಾಗುವ ಮೂಲಕ ಅನರ್ಹರ ಪರ ಮತಯಾಚನೆ ಮಾಡಲಿದ್ದಾರೆ. ಜತೆಗೆ ಪ್ರವಾಸದ ವೇಳೆ ಕೆಲ ಕ್ಷೇತ್ರಗಳಲ್ಲಿ ಉಂಟಾಗಿರುವ ಬಂಡಾಯ ಶಮನ ಮಾಡಿ, ಅಭ್ಯರ್ಥಿಗಳ ಪರ ಕೆಲಸ ಮಾಡುವ ಕುರಿತು ಸಭೆ ನಡೆಸಲಿದ್ದಾರೆ.

Facebook Comments