ಮನೆಯಲ್ಲೇ ಕೂತು ಸಿಎಂ ಯಡಿಯೂರಪ್ಪ ಕೊನೆ ಕ್ಷಣದ ರಣತಂತ್ರ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಡಿ.4- ಬಹಿರಂಗ ಪ್ರಚಾರಕ್ಕೆ ತೆರೆ ಬಿದ್ದು ಮತದಾನಕ್ಕೆ ಕ್ಷಣಗಣನೆ ಆರಂಭಗೊಂಡ ಬೆನ್ನಲ್ಲೇ ಕೊನೆ ಹಂತದ ರಣತಂತ್ರ ರೂಪಿಸುತ್ತಿರುವ ಮುಖ್ಯಮಂತ್ರಿಯಡಿಯೂರಪ್ಪ ತಮ್ಮ ನಿವಾಸದಲ್ಲಿಯೇ ಕುಳಿತು ಚುನಾವಣಾ ಉಸ್ತುವಾರಿಗಳ ಜೊತೆ ಮಾತುಕತೆ ನಡೆಸಿ ಸಲಹೆ ಸೂಚನೆ ನೀಡಿದರು.

14 ದಿನಗಳ ಅವಿರತ ಪ್ರಚಾರ ಕಾರ್ಯದ ನಂತರ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಇಂದು ಸ್ವಲ್ಪ ರಿಲ್ಯಾಕ್ಸ್ ಆಗಿದ್ದಾರೆ. ಬೆಳಗ್ಗೆಯಿಂದ ನಿವಾಸದಲ್ಲೇ ಇದ್ದು ವಿಶ್ರಾಂತಿ ಪಡೆದರು.
ಮಧ್ಯಾಹ್ನ 3.30 ರಿಂದ ನೀರಾವರಿ ನಿಗಮದ ಸರಣಿ ಸಭೆ ಇದ್ದು, ಅದಕ್ಕೂ ಮೊದಲು ಗೆಲುವಿನ ಬಗ್ಗೆ ಕೊನೆ ಹಂತದ ಯೋಜನೆಯ ಚರ್ಚೆ ಆರಂಭಿಸಿದರು.

ಮತದಾರರು ಬಿಜೆಪಿಗೆ ಮತದಾನ ಮಾಡುವಂತೆ ಸ್ಥಳೀಯ ಬಿಜೆಪಿ ಮುಖಂಡರ ಜೊತೆ ದೂರವಾಣಿ ಮೂಲಕ ಚರ್ಚಿಸುತ್ತಿದ್ದಾರೆ. ಚುನಾವಣಾ ಉಸ್ತುವಾರಿಗಳ ಜೊತೆಯಲ್ಲಿಯೂ ಮಾತುಕತೆ ನಡೆಸಿ ನಾಳೆ ನಡೆಯುವ ಚುನಾವಣೆಯಲ್ಲಿ ಮತದಾರರು ಬಿಜೆಪಿ ಅಭ್ಯರ್ಥಿಗಳಿಗೆ ಮತದಾನ ಮಾಡಬೇಕು. ಈ ನಿಟ್ಟಿನಲ್ಲಿ ಪ್ರತಿ ಬೂತ್ ನಲ್ಲಿ ಕೆಲಸ ಮಾಡುವಂತೆ ಸೂಚನೆ ನೀಡಿದರು.

ತಮಗೆ ವಹಿಸಿರುವ ಬೂತ್ ಗಳಿಗೆ ಟಾರ್ಗೆಟ್ ಕೊಟ್ಟಿರುವಷ್ಟು ಲೀಡ್ ಕೊಡಿಸಬೇಕು ಎಂದು ಚುನಾವಣೆ ಉಸ್ತುವಾರಿ ಹೊತ್ತವರಿಗೆ ಸೂಚನೆ ಕೊಡುತ್ತಿರುವ ಬಿಎಸ್‍ವೈ, ಹಿನ್ನೆಡೆಯಾಗುವ ಕ್ಷೇತ್ರಗಳಲ್ಲಿ ಗೆಲುವಿನ ಬಗ್ಗೆ ರಣತಂತ್ರ ರೂಪಿಸುತ್ತಿದ್ದು, ಹೇಗೆ ಮತದಾರರನ್ನು ಒಲಿಸಿಕೊಂಡು ಅವರಿಂದ ಬಿಜೆಪಿಗೆ ಮತ ಹಾಕಿಸಬೇಕು ಎಂಬುದರ ಬಗ್ಗೆ ಮನೆಯಲ್ಲೇ ಕುಳಿತು ಕೊನೆ ಹಂತದ ಕಸರತ್ತು ನಡೆಸಿದರು.

Facebook Comments