ಕೊರೋನಾ ಕಾರಣದಿಂದ ನೆರೆ ಸಂತ್ರಸ್ತರ ಪರಿಹಾರ ಕಾರ್ಯ ವಿಳಂಬವಾಗಿದೆ : ಸಿಎಂ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಆ.25- ರಾಜ್ಯದಲ್ಲಿ ಕೋವಿಡ್-19 ಎದುರಾದ ಪರಿಣಾಮ ಆರ್ಥಿಕ ಸಂಕಷ್ಟ ಎದುರಾಗಿದ್ದು, ಮಳೆ ಹಾನಿಗೊಳಗಾಗಿರುವ ಸಂತ್ರಸ್ತರಿಗೆ ಪರಿಹಾರ ಕೈಗೊಳ್ಳಲು ವಿಳಂಬವಾಗಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ.

ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸಂತ್ರಸ್ತರಿಗೆ ಪರಿಹಾರ ಕೈಗೊಳ್ಳಬೇಕೆಂಬ ಇಚ್ಛೆ ಸರ್ಕಾರಕ್ಕೆ ಇದೆ. ಆದರೆ ಕೋವಿಡ್-19 ಎದುರಾದ ಪರಿಣಾಮ ಆರ್ಥಿಕ ಚಟುವಟಿಕೆಗಳು ಸಂಪೂರ್ಣವಾಗಿ ಸ್ತಬ್ದಗೊಂಡು ಸರ್ಕಾರದ ಬೊಕ್ಕಸಕ್ಕೆ ಬರಬೇಕಿದ್ದ ವರಮಾನ ನಿಂತುಹೋಗಿದೆ ಎಂದು ತಿಳಿಸಿದ್ದಾರೆ.

ಸರ್ಕಾರ ಆರ್ಥಿಕ, ಇತಿಮಿತಿಯೊಳಗೆ ಸಂತ್ರಸ್ತರಿಗೆ ಪರಿಹಾರ ನೀಡಲು ಸಿದ್ದವಿದೆ. ಯಾರೊಬ್ಬರು ಆತಂಕಪಡುವ ಅಗತ್ಯವಿಲ್ಲ. ಈಗಾಗಲೇ ಎಲ್ಲೆಲ್ಲಿ ಅಗತ್ಯವಿದೆಯೋ ಅಲ್ಲಲ್ಲಿ ಪರಿಹಾರ ಕೈಗೊಳ್ಳಬೇಕೆಂದು ಅಕಾರಿಗಳಿಗೆ ಸೂಚಿಸಲಾಗಿದೆ. ಸಂತ್ರಸ್ತರಿಗೆ ಪರಿಹಾರ ನೀಡಲು ಪ್ರಮಾಣಿಕ ಪ್ರಯತ್ನ ಸರ್ಕಾರ ಮಾಡುತ್ತಿದೆ ಎಂದರು.

ರೈತರು ಬೆಳೆದ ಬೆಳೆಗಳು, ಮನೆಗಳು, ಜಾನುವಾರು, ಪ್ರಾಣಹಾನಿ, ಸೇತುವೆ, ರಸ್ತೆ, ವಿದ್ಯುತ್ ಕಂಬಗಳು, ಟ್ರಾನ್ಸ್‍ಫರ್ಮರ್ ಸೇರಿದಂತೆ ನಾನಾ ರೀತಿಯಲ್ಲಿ ನಷ್ಟ ಉಂಟಾಗಿದೆ. ಕೇಂದ್ರ ಸರ್ಕಾರಕ್ಕೆ ಪರಿಹಾರ ನೀಡುವಂತೆ ಮನವಿ ಮಾಡಲಾಗಿದೆ.

ಈಗಾಗಲೇ ಕೇಂದ್ರ 395 ಕೋಟಿ ಮುಂಗಡ ಪರಿಹಾರ ಎಸ್‍ಡಿಆರ್‍ಎಫ್‍ನಡಿ ಬಿಡುಗಡೆಯಾಗಿದೆ. ಸಂಕಷ್ಟ ಸ್ಥಿತಿಯಲ್ಲೂ ನಾವು, ಸರ್ಕಾರಿ ನೌಕರರು ಕೋವಿಡ್ ವಾರಿಯರ್ಸ್‍ಗಳಿಗೆ ಸಂಬಳ ನೀಡಿದ್ದೇವೆ.

ದೇಶದ ಯಾವುದೇ ರಾಜ್ಯದಲ್ಲೂ ಕರ್ತವ್ಯದ ವೇಳೆ ಮೃತಪಟ್ಟ ವಾರಿಯರ್ಸ್‍ಗೆ ನೀಡದಷ್ಟು ಪರಿಹಾರವನ್ನು ಕೊಟ್ಟಿದ್ದೇವೆ. ಅದೇ ರೀತಿ ಸಂತ್ರಸ್ತರು ಸಹನೆ ಕಳೆದುಕೊಳ್ಳಬಾರದು. ಸರ್ಕಾರ ನಿಮ್ಮ ನೆರವಿಗೆ ಧಾವಿಸಲಿದೆ ಎಂದು ಅಭಯ ನೀಡಿದರು.

ಈಗಾಗಲೇ ಸರ್ಕಾರಕ್ಕೆ ಜಿಲ್ಲಾಕಾರಿಗಳು ನಷ್ಟ ಪ್ರಮಾಣದ ಕುರಿತಂತೆ ವರದಿ ನೀಡಿದ್ದಾರೆ. ನಾನು ಕೂಡ ಅಕಾರಿಗಳ ಜೊತೆ ಸಭೆ ನಡೆಸಿ ಮಾಹಿತಿ ಪಡೆದಿದ್ದೇನೆ. ಕೇಂದ್ರ ಸರ್ಕಾರ ನಮಗೆ ಈ ಬಾರಿ ಹೆಚ್ಚಿನ ಪರಿಹಾರ ಬಿಡುಗಡೆ ಮಾಡುವ ವಿಶ್ವಾಸವಿದೆ. ನಮ್ಮ ಆರ್ಥಿಕ ಇತಿಮಿತಿ ಲಭ್ಯತೆಯೊಳಗೆ ಪರಿಹಾರ ಒದಗಿಸಿಕೊಡುವುದಾಗಿ ಸಿಎಂ ಹೇಳಿದರು.

ಬೆಳೆ ಸಮೀಕ್ಷೆ ನಡೆಸುವಾಗ ಯಾವುದೇ ರೀತಿಯ ದುರುಪಯೋಗವಾಗದಂತೆ ಎಚ್ಚರವಹಿಸಬೇಕೆಂದು ಅಕಾರಿಗಳಿಗೆ ಸೂಚಿಸಲಾಗಿದೆ. ಯಾರು ಬೆಳೆ ಕಳೆದುಕೊಂಡಿರುತ್ತಾರೋ ಅಂಥವರಿಗೆ ಪರಿಹಾರ ನೀಡಬೇಕು. ಪ್ಪಿತಪ್ಪಿಯೂ ಮಧ್ಯವರ್ತಿಗಳಿಗೆ ಹೋಗದಂತೆ ಎಚ್ಚರಿಕೆಯಿಂದಿರಬೇಕು ಎಂದು ಸೂಚಿಸಿದರು.

Facebook Comments

Sri Raghav

Admin