ಹೋಟೆಲ್‍ನಲ್ಲಿ ಇಡ್ಲಿವಡೆ-ದೋಸೆ ಸವಿದ ಸಿಎಂ ಯಡಿಯೂರಪ್ಪ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜೂ.13- ಬಹುದಿನಗಳ ನಂತರ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಇಂದು ಹೋಟೆಲ್‍ಗೆ ತೆರಳಿ ಬೆಳಗಿನ ಉಪಹಾರ ಸೇವಿಸಿದರು.  ಕಾರ್ಯಕ್ರಮವೊಂದಕ್ಕೆ ತೆರಳಿ ಬಳಿಕ ಮನೆಗೆ ಹಿಂದಿರುಗುತ್ತಿದ್ದ ವೇಳೆ ಮಾರ್ಗಮಧ್ಯೆ ಲಾಲ್‍ಬಾಗ್‍ನಲ್ಲಿರುವ ಎಂಟಿಆರ್ ಹೋಟೆಲ್‍ಗೆ ತೆರಳಿ ದೋಸೆ ಹಾಗೂ ಇಡ್ಲಿ ವಡೆ ತಿಂದರು.

ಬಿಎಸ್‍ವೈಗೆ ಕಂದಾಯ ಸಚಿವ ಆರ್.ಅಶೋಕ್, ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸದಸ್ಯ ತೇಜಸ್ವಿ ಸೂರ್ಯ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಶಂಕರ್‍ಗೌಡ ಪಾಟೀಲ್ ಕೂಡ ಇದ್ದರು.

ರಾಜ್ಯದಲ್ಲಿ ಲಾಕ್‍ಡೌನ್ ಜಾರಿಯಾದ ನಂತರ ಸಿಎಂ ಯಡಿಯೂರಪ್ಪನವರು ಹೋಟೆಲ್‍ಗೆ ತೆರಳಿರಲಿಲ್ಲ. ಇತ್ತೀಚೆಗೆ ಹೋಟೆಲ್‍ಗಳು ಪುನರಾರಂಭವಾದ ನಂತರ ಎಂಟಿಆರ್‍ಗೆ ಅವರು ಇಂದು ಭೇಟಿ ಕೊಟ್ಟಿದ್ದು ಇದೇ ಮೊದಲು.

Facebook Comments