ವಿಪಕ್ಷಗಳ ಭಾರಿ ವಿರೋಧದ ನಡುವೆಯೇ ಎಪಿಎಂಸಿ ಕಾಯಿದೆ ತಿದ್ದುಪಡಿಗೆ ಸಂಪುಟ ಅಸ್ತು

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು : ರಾಜ್ಯವ್ಯಾಪಿ ಭಾರಿ ವಿರೋಧದ ನಡುವೆ ಎಪಿಎಂಸಿ ಕಾಯಿದೆ ತಿದ್ದುಪಡಿಗೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ನೇತೃತ್ವದ ರಾಜ್ಯ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಇಂದು ಸಂಜೆ ಸಭೆ ಸೇರಿದ್ದ ಸಂಪುಟವು ಬಿಡಿಎ 38ಜ ಗೆ ತಿದ್ದುಪಡಿ ಕಾಯಿದೆಗೆ ಒಪ್ಪಿಗೆ ನೀಡಿದ್ದು, ಶಿಕ್ಷಕರ ವರ್ಗಾವಣೆ ತಿದ್ದುಪಡಿ ಕಾಯಿದೆಗೆ ಸಹ ಒಪ್ಪಿಗೆ ಸೂಚಿಸಿದೆ.

ಇನ್ನು ಕಳೆದ ವಿಧಾನಸಭಾ ಅಧಿವೇಶನದಲ್ಲಿ ಸದನದಲ್ಲಿ ಅಂಗೀಕಾರಗೊಂಡಿದ್ದ ಶಿಕ್ಷಕರ ವರ್ಗಾವಣೆ ಕಾಯ್ದೆಗೆ ರಾಜ್ಯ ಸಚಿವ ಸಂಪುಟ ಒಪ್ಪಿಗೆಯನ್ನು ನೀಡಿದೆ.

ಈ ಮೂಲಕ ಬಹುದಿನಗಳಿಂದ ಬಾಕಿಯಾಗಿದ್ದ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಗೆ ಸದ್ಯದಲ್ಲೇ ಚಾಲನೆ ದೊರೆಯುವ ನಿರೀಕ್ಷೆ ಇದೆ.ಇನ್ನು ಇಂದಿನ ಸಚಿವ ಸಂಪುಟ ಸಭೆಯಲ್ಲಿ ಕರ್ನಾಟಕ ನಗರ ಯೋಜನೆ ಕಾಯ್ದೆಗೆ ಮಾಡಲಾದ ತಿದ್ದುಪಡಿಯನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸಲು ನಿರ್ಧರಿಸಲಾಯಿತು.

ರಾಜ್ಯದಲ್ಲಿ ಹಣ್ಣು ತರಕಾರಿ ಬೆಳೆದ ರೈತರಿಗೆ ಪ್ರತೀ ಹೆಕ್ಟೇರ್ ಗೆ 15 ಸಾವಿರ ರೂಪಾಯಿಗಳ ಪರಿಹಾರ. 1.25 ಲಕ್ಷ ವಿದ್ಯುತ್ ಚಾಲಿತ ಮಗ್ಗದ ಓರ್ವ ಕೂಲಿ ಕಾರ್ಮಿಕನಿಗೆ 2 ಸಾವಿರ ರೂಪಾಯಿ ಪರಿಹಾರ ನೀಡಲು ಸಚಿವ ಸಂಪುಟ ಸಭೆ ತನ್ನ ಒಪ್ಪಿಗೆಯನ್ನು ನೀಡಿದೆ.

ಮಂಗಳೂರಿನಲ್ಲಿ ಸಮಗ್ರ ಸಾರಿಗೆ ಕೇಂದ್ರ ಸ್ಥಾಪನೆ. ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ವಸತಿ ನಿಲಯಗಳಿಗೆ ಆಹಾರ‌ ಪದಾರ್ಥ ಖರೀದಿಗೆ 260 ಕೋಟಿ ರೂ ನೀಡಲು ಒಪ್ಪಿಗೆ ಕೊಡಲಾಗಿದೆ.

Facebook Comments

Sri Raghav

Admin