ಕೊರೋನಾ ಕುರಿತ ಯಾವ ನಿರ್ಧಾರವನ್ನೂ ಏಕಪಕ್ಷೀಯವಾಗಿ ಕೈಗೊಂಡಿಲ್ಲ : ಸಿಎಂ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಏ.12-ಕೊರೋನಾ ಹರಡುವುದನ್ನು ತಡೆಯುವ ಉದ್ದೇಶದಿಂದ ನಾನು‌ ತೆಗೆದುಕೊಳ್ಳುತ್ತಿರುವ ಒಂದೊಂದು ನಿರ್ಧಾರವೂ ಏಕಪಕ್ಷೀಯವಾಗಿರೇ ವಿರೋಧ ಪಕ್ಷದ ನಾಯಕರ, ಸರ್ವ ಪಕ್ಷಗಳ ನಾಯಕರ, ಅನುಭವಿ ಹಿರಿಯ ಅಧಿಕಾರಿಗಳ, ವೈದ್ಯರ ಹಾಗೂ  ಕೇಂದ್ರ ಸರ್ಕಾರದ, ರಾಜ್ಯದ ಗಣ್ಯ ಮಾನ್ಯರ, ಹಿತ ಚಿಂತಕರ ಸಲಹೆಗಳಿಂದ ಕೂಡಿರುತ್ತವೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.

ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಪತ್ರಕ್ಕೆ ಪ್ರತಯಾಗಿ ಪತ್ರ ಬರೆದಿರುವ ಮುಖ್ಯಮಂತ್ರಿ ತಮ್ಮಂತಹ ಗಣ್ಯ ಮಾನ್ಯರ ಸಲಹೆಗಳನ್ನು ಆಧರಿಸಿ ತೀರ್ಮಾನ ಕೈಗೊಳ್ಳಲಾಗುತ್ತಿದೆ ಎಂಬುದನ್ನು ಈ ಸಂದರ್ಭದಲ್ಲಿ ತಮ್ಮ ಗಮನಕ್ಕೆ ತರಬಯಸುತ್ತೇನೆ ಎಂದಿದ್ದಾರೆ.

ಕೋವಿಡ್‌ -19 ಸೋಂಕು ಹರಡುವಿಕೆಯನ್ನು ನಿಯಂತ್ರಿಸುವ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಉದ್ದೇಶಕ್ಕಾಗಿ ಜಾರಿಗೊಳಿಸಲಾಗಿರುವ ಲಾಕ್‌ಡೌನ್‌ನಿಂದಾಗಿ ರಾಜ್ಯದ‌ ಹಾಗೂ ದೇಶದ ರೈತರು, ಕೃಷಿ ಕಾರ್ಮಿಕರು ಮತ್ತು ದಿನಗೂಲಿ ನೌಕರರಿಗೆ ಆಗುತ್ತಿರುವ ಅನಾನುಕೂಲತೆಗಳು ಹಾಗೂ ರೈತರ ಕೃಷಿ ಉತ್ಪನ್ನಗಳ ಮಾರಾಟಕ್ಕೆ ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ಮಾರ್ಚ್ 9ರಂದು ತಾವು ಬರೆದಿರುವ ಪತ್ರವನ್ನು ಗಮನಿಸಿದ್ದೇನೆ ಎಂದಿದ್ದಾರೆ‌.

ರಾಜ್ಯದ ರೈತರು ಮತ್ತು ಕೃಷಿ ಕಾರ್ಮಿಕರ ಮೇಲಿರುವ ತಮ್ಮ ಕಾಳಜಿಗೆ ಹಾಗೂ ನೀಡಿರುವ ಸಲಹೆಗಳಿಗೆ ಧನ್ಯವಾದಗಳು. ತಮ್ಮ ಪತ್ರದಲ್ಲಿ ನೀಡಿರುವ ಸಲಹೆಗಳನ್ನು ಅನುಷ್ಠಾನಗೊಳಿಸುವ ಬಗ್ಗೆ ಕೂಡಲೇ ಅಗತ್ಯ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಉನ್ನತ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಪತ್ರದಲ್ಲಿ ತಿಳಿಸಿದ್ದಾರೆ.

Facebook Comments

Sri Raghav

Admin